News Kannada
Friday, February 23 2024
ಬೆಂಗಳೂರು ನಗರ

ಬೆಂಗಳೂರಿನ ಪ್ರಸಿದ್ಧ ರೆಸ್ಟೋರೆಂಟ್​ ನ್ಯೂ ಕೃಷ್ಣ ಭವನ ಬಂದ್‌ ಆಗುತ್ತಿದೆ: ಕಾರಣ ಏನು ಗೊತ್ತಾ?

ಐಟಿ ಸಿಟಿ, ಉದ್ಯಾನನಗರಿ ಎಂದು ಬಿರುದು ಪಡೆದುಕೊಂಡಿರುವ ಬೆಂಗಳೂರು ಹೋಟೆಲ್‌ ಗಳಿಂದಲೂ ಫೇಮಸ್‌ ಆಗಿದೆ. ಹಲವು ಹೋಟೆಲ್‌ ಗಳು ಇಂದಿಗೂ ಹಿಂದಿನ ಸ್ವಾದ, ಗುಣಮಟ್ಟ ವನ್ನು ಉಳಿಸಿಕೊಂಡು ಜನರ ಹೊಟ್ಟೆ ತುಂಬಿಸುವ ಮೂಲಕ ಮನಗೆದ್ದಿವೆ. ಬೆಂಗಳೂರಿನ ಅಂತಹುದೇ ಒಂದು ಐಕಾನಿಕ್‌ ಹೋಟೆಲ್‌ ಈಗ ಬಾಗಿಲು ಮುಚ್ಚುತ್ತಿದೆ.
Photo Credit : News Kannada

ಬೆಂಗಳೂರು: ಐಟಿ ಸಿಟಿ, ಉದ್ಯಾನನಗರಿ ಎಂದು ಬಿರುದು ಪಡೆದುಕೊಂಡಿರುವ ಬೆಂಗಳೂರು ಹೋಟೆಲ್‌ ಗಳಿಂದಲೂ ಫೇಮಸ್‌ ಆಗಿದೆ. ಹಲವು ಹೋಟೆಲ್‌ ಗಳು ಇಂದಿಗೂ ಹಿಂದಿನ ಸ್ವಾದ, ಗುಣಮಟ್ಟ ವನ್ನು ಉಳಿಸಿಕೊಂಡು ಜನರ ಹೊಟ್ಟೆ ತುಂಬಿಸುವ ಮೂಲಕ ಮನಗೆದ್ದಿವೆ. ಬೆಂಗಳೂರಿನ ಅಂತಹುದೇ ಒಂದು ಐಕಾನಿಕ್‌ ಹೋಟೆಲ್‌ ಈಗ ಬಾಗಿಲು ಮುಚ್ಚುತ್ತಿದೆ.

ಬೆಂಗಳೂರಿನ ಅತ್ಯಂತ ಹಳೆಯ ರೆಸ್ಟೋರೆಂಟ್​ಗಳಲ್ಲಿ ಒಂದಾದ ನ್ಯೂ ಕೃಷ್ಣ ಭವನ ಡಿಸೆಂಬರ್​ 6 ರಂದು ಬಂದ್​ ಆಗಲಿದೆ. ಮಲ್ಲೇಶ್ವರಂನ ಹೃದಯ ಭಾಗದ ಸಂಪಿಗೆ ಥಿಯೇಟರ್​ ಎದುರಿರುವ ನ್ಯೂ ಕೃಷ್ಣ ಭವನ, ಸಸ್ಯಹಾರಿ ಊಟ, ಗ್ರೀನ್​ ಮಸಾಲೆ ಇಡ್ಲಿಗಳು, ಮಂಡ್ಯ ಶೈಲಿಯ ರಾಗಿ ದೋಸೆಗಳು ಮತ್ತು ಇನ್ನಿತರ ಸಸ್ಯಹಾರಿ ಅಡುಗೆಗಳಿಗೆ ಹೆಸರುವಾಸಿಯಾಗಿದೆ. ಆದರೆ, ಇದೀಗ ಬಂದ್​ ಆಗಲಿದೆ ಎಂದು ​ರೆಸ್ಟೋರೆಂಟ್ ಮುಂಭಾಗದಲ್ಲಿ ಬ್ಯಾನ್​ರ್​ ಹಾಕಲಾಗಿದೆ. ಇದರಿಂದ ಗ್ರಾಹಕರಿಗೆ ಶಾಕ್​ ನೀಡಿದಂತಾಗಿದೆ.

1954 ರಲ್ಲಿ ನ್ಯೂ ಕೃಷ್ಣ ಭವನವು ಪ್ರಾರಂಭವಾಯಿತು. ಸಾಂಪ್ರದಾಯಿಕ ಉಡುಪಿ ಭಕ್ಷ್ಯಗಳ ಜೊತೆಗೆ ನ್ಯೂ ಕೃಷ್ಣ ಭವನವು ಕಾಫಿ ಮತ್ತು ಉತ್ತರ ಭಾರತದ ಅಡುಗೆಗೆ ಹೆಚ್ಚು ಹೆಸರುವಾಸಿಯಾಗಿದೆ. ‘ಒಂದು ಕಾಲದಲ್ಲಿ ಈ ರೆಸ್ಟೋರೆಂಟ್​ ದಿನಕ್ಕೆ 2500 ಕ್ಕೂ ಹೆಚ್ಚು ಊಟವನ್ನು ನೀಡುತ್ತಿತ್ತು ಎಂದು ಹಿರಿಯರು ಹೇಳುತ್ತಾರೆ. ಹೋಟೆಲ್‌ ಬಂದ್‌ ಆಗಲಿರುವ ಕಾರಣ ಇಲ್ಲಿಯೇ ಕೆಲಸ ಮಾಡಿಕೊಂಡಿರುವ ಸಿಬ್ಬಂದಿಗಳ ಮುಂದಿನ ಜೀವನ ಹೇಗೆ ಎಂಬ ಪ್ರಶ್ನೆ ಮೂಡಿದೆ. ಇಲ್ಲಿ ಸುಮಾರು 100 ಜನ ಕೆಲಸವನ್ನು ಮಾಡುತ್ತಾರೆ. ಈ ವಯಸ್ಸಿನಲ್ಲಿ ಹೊಸ ಉದ್ಯೋಗವನ್ನು ಹುಡುಕುವುದು ಅಸಾಧ್ಯವಾಗಿದೆ ಎಂದು ಕಳೆದ 25 ವರ್ಷಗಳಿಂದ ಕೆಲಸ ಮಾಡಿಕೊಂಡಿರುವ ಸಿಬ್ಬಂದಿಯೊಬ್ಬರು ಕಣ್ಣೀರು ಹಾಕುತ್ತ ನೋವನ್ನು ಹಂಚಿಕೊಂಡಿದ್ದಾರೆ.

ಭೀಮಾ ಜ್ಯುವೆಲರ್ಸ್​ಗೆ ಆಸ್ತಿಯನ್ನು ಮಾರಾಟ ಮಾಡಲಾಗಿದೆ. ಶೀಘ್ರದಲ್ಲೇ ಅದು ಈಗಿರುವುದಕ್ಕಿಂತ ಸಂಪೂರ್ಣ ಹೊಸದಾಗಿ ಬರಲಿದೆ ಎಂದು ಮಾಲೀಕರ ಆಪ್ತ ಮೂಲಗಳು ತಿಳಿಸಿವೆ. ಈ ಕುರಿತು ಮಾತನಾಡಿದ ಹೋಟೆಲ್​ ಮಾಲೀಕರ ಸಂಘದ ಅಧ್ಯಕ್ಷ ‘ಕಳೆದೊಂದು ವರ್ಷದಿಂದ ಮಾತುಕತೆ ನಡೆದಿದ್ದು, ಮಾಲೀಕರು ಆಸ್ತಿಯನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು