News Karnataka Kannada
Friday, March 29 2024
Cricket
ಬೆಂಗಳೂರು ನಗರ

ದೇಶದ ಪೆಟ್ರೋಲ್‌ ಪಂಪ್‌ಗಳಲ್ಲಿ ಚಿಲ್ಲರೆ ಅಭಾವ ಇದ್ಯಾಕೆ ಹೀಗಾಯ್ತು ಗೊತ್ತಾ

Do you know why there is a retail shortage in petrol pumps in the country?
Photo Credit : IANS

ನವದೆಹಲಿ: 2000 ಮುಖಬೆಲೆಯ ನೋಟು ಹಿಂಪಡೆಯುವಿಕೆ ನಿರ್ಧಾರವು 2016 ರಲ್ಲಿ ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ಉಂಟಾಗಿದ್ದ ಕಷ್ಟಕರ ಪರಿಸ್ಥಿತಿಯನ್ನು ಸೃಷ್ಟಿಸಿದೆ ಎಂದು ದೇಶಾದ್ಯಂತ ಇರುವ ಪೆಟ್ರೋಲಿಯಂ ಡೀಲರ್‌ಗಳನ್ನು ಪ್ರತಿನಿಧಿಸುವ ಅಖಿಲ ಭಾರತ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ (ಎಐಪಿಡಿಎ) ಹೇಳಿದೆ.

ಗ್ರಾಹಕರು ಸಣ್ಣ ವಹಿವಾಟುಗಳಿಗೂ ಸಹ 2000 ರ ನೋಟುಗಳನ್ನೇ ಬಳಸಲು ಪ್ರಯತ್ನಿಸುತ್ತಿದ್ದಾರೆ, ಇದರಿಂದಾಗಿ ದೇಶಾದ್ಯಂತ ಪೆಟ್ರೋಲ್ ಪಂಪ್‌ಗಳಲ್ಲಿ ಚಿಲ್ಲರೆಯ ಅಭಾವ ಉಂಟಾಗಿದೆ ಎಂದು ಸಂಘವು ಸೋಮವಾರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.ʼ
2,000 ರೂಪಾಯಿ ನೋಟು ಹಿಂತೆಗೆದುಕೊಳ್ಳುವಿಕೆಯನ್ನು ಘೋಷಿಸಿದಾಗಿನಿಂದ ನಗದು ವಹಿವಾಟಿನ ಸಂಖ್ಯೆ ಹೆಚ್ಚಾಗಿದೆ ಎಂದು ಎಐಪಿಡಿಎ ಅಧ್ಯಕ್ಷ ಅಜಯ್ ಬನ್ಸಾಲ್ ತಿಳಿಸಿದ್ದಾರೆ.

“ರೂ 2,000 ಹಿಂತೆಗೆದುಕೊಳ್ಳುವ ನಿರ್ಧಾರ ಪ್ರಕಟಗೊಳ್ಳುವ ಮೊದಲು, ನಮ್ಮ ನಗದು ಮಾರಾಟದಲ್ಲಿ 10% ಮಾತ್ರ ರೂ 2,000 ನೋಟಿನ ಮೂಲಕ ಸ್ವೀಕರಿಸುತ್ತಿದ್ದೆವು, ಆದರೆ ಈಗ ನಮ್ಮ ಔಟ್‌ಲೆಟ್‌ಗಳಲ್ಲಿ ಸ್ವೀಕರಿಸಿದ ಸುಮಾರು 90% ನಗದು ರೂ 2,000 ನೋಟುಗಳ ರೂಪದಲ್ಲಿದೆ” ಎಂದು ಪತ್ರಿಕಾ ಪ್ರಕಟಣೆ ಹೇಳಿದೆ.
ಈ ಅವಧಿಯಲ್ಲಿ ಮಾರಾಟದ ಹೆಚ್ಚಿದ ಕಾರಣ ಆದಾಯ ತೆರಿಗೆ ನೋಟೀಸ್ ಮತ್ತು ದಾಳಿಗಳ ಸಾಧ್ಯತೆಗಳ ಬಗ್ಗೆ ಬಗ್ಗೆ ಅಸೋಸಿಯೇಷನ್ ಕಳವಳ ವ್ಯಕ್ತಪಡಿಸಿದೆ. ನೋಟು ಅಮಾನ್ಯೀಕರಣದ ನಂತರ ಹೆಚ್ಚಿನ ವಿತರಕರು ತಮ್ಮ ತಪ್ಪಿಲ್ಲದೆ ಆದಾಯ ತೆರಿಗೆ ನೋಟಿಸ್‌ಗಳನ್ನು ಸ್ವೀಕರಿಸಿದ್ದರು, ಅಂದು ಎದುರಿಸಿದ ಸನ್ನಿವೇಶವನ್ನು ಈ ಬಾರಿಯೂ ಎದುರಿಸಬೇಕಾಗಬಹುದು ಎಐಪಿಡಿಎ ಆತಂಕ ವ್ಯಕ್ತಪಡಿಸಿದೆ ಎಂದು ವರದಿ ತಿಳಿಸಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು