News Kannada
Friday, February 23 2024
ಬೆಂಗಳೂರು ನಗರ

ಬೆಂಗಳೂರು: ಗಾಂಜಾ ಸಾಗಣೆ ಮಾಡುತ್ತಿದ್ದ ನಾಲ್ವರು ಆರೋಪಿಗಳು ಬಂಧನ

Photo Credit : Pexels

ಬೆಂಗಳೂರು: ಹ್ಯಾಶ್‌ ಆಯಿಲ್‌ ಹಾಗೂ ಗಾಂಜಾ ಸಾಗಣೆ ಮಾಡುತ್ತಿದ್ದ ನಾಲ್ವರು ಅಂತರರಾಜ್ಯ ಆರೋಪಿಗಳನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಪ್ರತಿಷ್ಠಿತ ಪಬ್‌ಗಳಲ್ಲಿ ಡಿ.ಜೆಯಾಗಿ‌ ಕೆಲಸ ಮಾಡುತ್ತಿದ್ದ ಜೂಡ್ ಹ್ಯಾರೀಸ್, ಶ್ರೀನಿವಾಸ್, ವಂತಲಾ ಪ್ರಹ್ಲಾದ್, ಮಲ್ಲೇಶ್ವರಿ, ಸತ್ಯವತಿ ಬಂಧಿತರು. ಇವರಿಂದ ₹ 4 ಕೋಟಿ ಮೌಲ್ಯದ 5 ಕೆ.ಜಿ ಹ್ಯಾಶ್ ಆಯಿಲ್, 6 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಅರಣ್ಯಾಧಿಕಾರಿಗಳ ಕಣ್ತಪ್ಪಿಸಿ ಆರೋಪಿಗಳು, ಆಂಧ್ರಪ್ರದೇಶದ ವಿಶಾಖಪಟ್ಟಣದ ಅರಕು ಹಾಗೂ ಸೆಂಥಿಪಲ್ಲಿ ಅರಣ್ಯಕ್ಕೆ ನುಗ್ಗಿ ಅಲ್ಲಿ ಗಾಂಜಾ ಬೆಳೆದು ಹ್ಯಾಶ್‌ ಆಯಿಲ್‌ ತಯಾರಿಸುತ್ತಿದ್ದರು. ಅದನ್ನು ಕೊಚ್ಚಿ, ಚೆನ್ನೈ, ಹೈದರಾಬಾದ್, ಮುಂಬೈ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರದ ಗ್ರಾಹಕರಿಗೆ ಪೂರೈಸುತ್ತಿದ್ದರು. ಪ್ರಕರಣದ ಯಾವುದೇ ಕುರುಹು ಸಿಗದಂತೆ ತಂತ್ರ ರೂಪಿಸಿದ್ದರು. ಯಾರೂ ಮೊಬೈಲ್‌ ಹಾಗೂ ಗುರುತಿನ ಚೀಟಿ ಬಳಸುತ್ತಿರಲಿಲ್ಲ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಆರಂಭದಲ್ಲಿ ಡಿ.ಜೆ ಜೂಡ್‌ನನ್ನು ಬಂಧಿಸಲಾಗಿತ್ತು. ಜೂಡ್‌ ಬಾಯ್ಬಿಟ್ಟ ಮಾಹಿತಿ ಆಧರಿಸಿ ಉಳಿದ ಮೂವರನ್ನು ಬಂಧಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು