News Kannada
Saturday, September 23 2023
ಬೆಂಗಳೂರು ನಗರ

ಬೆಂಗಳೂರು: ಪಟೇಲ್ ಮುನಿಚಿನ್ನಪ್ಪ ಪ್ರೌಢಶಾಲೆಯಲ್ಲಿ ಮೊದಲ ಸ್ಟೆಮ್ ಪ್ರಯೋಗಾಲಯ ಉದ್ಘಾಟನೆ

beng
Photo Credit : By Author

ಬೆಂಗಳೂರು: ಹಣಕಾಸು ಸೇವೆಗಳ ತಂತ್ರಜ್ಞಾನ ಪರಿಹಾರಗಳು ಮತ್ತು ಪಾವತಿಗಳ ಜಾಗತಿಕ ಮುಂಚೂಣಿಯ ಫೈಸರ್ವ್ ತನ್ನ ಸೈನ್ಸ್ ಟೆಕ್ನಾಲಜಿ ಎಂಜಿನಿಯರಿಂಗ್ ಅಂಡ್ ಮ್ಯಾಥಮ್ಯಾಟಿಕ್ಸ್(ಸ್ಟೆಮ್) ಪ್ರಯೋಗಾಲಯ ಪ್ರಾರಂಭಿಸಿದೆ.

ಈ ಕಾರ್ಯಕ್ರಮವು ಬೆಂಗಳೂರಿನ ಹತ್ತು ಪಬ್ಲಿಕ್ ಸ್ಕೂಲ್ ಗಳ ವಿದ್ಯಾರ್ಥಿಗಳಿಗೆ ಪ್ರಯೋಗಾತ್ಮಕ ಕಲಿಕೆಯನ್ನು ಒದಗಿಸಲಿದೆ. ಈ ಯೋಜನೆಗೆ ಬೆಂಗಳೂರಿನ ಉತ್ತರ ಮತ್ತು ದಕ್ಷಿಣದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ(ಡಿಡಿಪಿಐ) ಕಛೇರಿಯ ಬೆಂಬಲ ಪಡೆದಿದೆ ಮತ್ತು ಫೈಸರ್ವ್ ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಪಾಲುದಾರರಾಗಿ ಯುನೈಟೆಡ್ ವೇ ಮುಂಬೈ ಇದೆ. 71 ಲಕ್ಷ ರೂ. ಹೂಡಿಕೆಯಲ್ಲಿ ಫೈಸರ್ವ್ ಪ್ರಾಥಮಿಕ ಮತ್ತು ಪ್ರೌಢ ತರಗತಿಯ 5000ಕ್ಕೂ ಹೆಚ್ಚು ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಸ್ಟೆಮ್ ಶಿಕ್ಷಣದ ಅನುಕೂಲಗಳನ್ನು ಒದಗಿಸುವ ಗುರಿ ಹೊಂದಿದೆ.

ಈ ಉಪಕ್ರಮವು ಕಾನ್ಸೆಪ್ಟ್ ವಿಶುಯಲೈಸೇಷನ್, ಎಕ್ಸ್ಪ್ಲೊರೇಷನ್, ಎಕ್ಸ್ ಪೆರಿಮೆಂಟೇಷನ್ ಮತ್ತು ಇಡಿಯಾಗಿ ಬೋಧನೆ ಮತ್ತು ಕಲಿಕೆಯ ಆವಿಷ್ಕಾರಕ ವಿಧಾನ ನೀಡಲಿದೆ. ಈ ಪ್ರಯೋಗಾಲಯಕ್ಕೆ ಇ-ಲರ್ನಿಂಗ್ ಇನ್ಫರ್ಮೇಷನ್ ಅಂಡ್ ಕಮ್ಯುನಿಕೇಷನ್ಸ್ ಟೆಕ್ನಾಲಜಿ(ಐಸಿಟಿ) ಮೊಬೈಲ್ ಅಪ್ಲಿಕೇಷನ್ ಪೂರಕವಾಗಿದ್ದು ಮೊದಲ ವರ್ಷ `ಟ್ಯೂಟರ್ ಸಪೋರ್ಟ್’ ಮತ್ತು ಪ್ರೋಗ್ರಾಮ್ ಮ್ಯಾನೇಜ್ ಮೆಂಟ್ ಹಾಗೂ ಗುಣಮಟ್ಟ ನಿಯಂತ್ರಣಕ್ಕೆ ಇಂಪ್ಯಾಕ್ಟ್ ಅಸೆಸ್ ಮೆಂಟ್ ಸಾಧನ ಹೊಂದಿದೆ.

ಚೆನ್ನೈ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಸಾರ್ವಜನಿಕ ಶಾಲೆಗಳಲ್ಲಿ ಈ ಪ್ರಾಜೆಕ್ಟ್ ಪೂರೈಸಿದ ನಂತರ ಫೈಸರ್ವ್ ಈಗ ಬೆಂಗಳೂರು ವ್ಯಾಪ್ತಿಗೆ ತನ್ನ ಪೂರೈಕೆ ವಿಸ್ತರಿಸಿದೆ. ಈ ಯೋಜನೆಯ ಅಖಿಲ ಭಾರತ ದೃಷ್ಟಿಕೋನವು ಸ್ಟೆಮ್ ಶಿಕ್ಷಣವನ್ನು ಜೀವನಚಕ್ರದದಲ್ಲಿ ಸುಮಾರು 18000 ವಿದ್ಯಾರ್ಥಿಗಳಿಗೆ ಈ ಪ್ರಯೋಗಾಲಯಗಳಲ್ಲಿ ಈ ನಗರಗಳಲ್ಲಿ ನೀಡುತ್ತಿದೆ.

“ನಾವು ಜೀವಿಸುವ ಮತ್ತು ಕೆಲಸ ಮಾಡುವ ನಮ್ಮ ಸಮುದಾಯಗಳ ಸಬಲೀಕರಣ ಮಾಡುವುದು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯ ಭಾಗವಾಗಿದೆ. ಸ್ಟೆಮ್ ಶಿಕ್ಷಣವನ್ನು ದೇಶಾದ್ಯಂತ ಉತ್ತೇಜಿಸುವ ನಮ್ಮ ಉಪಕ್ರಮಗಳ ಮೂಲಕ ನಾವು ದುರ್ಬಲ ವರ್ಗದ ಶಾಲೆಗಳಲ್ಲಿ ಯುವ ಮನಸ್ಸುಗಳಿಗೆ ಪ್ರಯೋಗಾತ್ಮಕ ಕಲಿಕೆ ಲಭ್ಯವಿರುವಂತೆ ಮಾಡುತ್ತಿದ್ದೇವೆ. ರಾಷ್ಟ್ರೀಯ ಪ್ರತಿಭಾ ಸಮೂಹದ ತಳಹದಿಗೆ ಇದು ನಮ್ಮ ಕೊಡುಗೆಯಾಗಿದೆ ಮತ್ತು ಸಾಧ್ಯವಿರುವಷ್ಟು ಉತ್ತಮ ರೀತಿಯಲ್ಲಿ ನಾವು ಸಮಾಜಕ್ಕೆ ಹಿಂದಿರುಗಿಸುವುದನ್ನು ಮುಂದುವರಿಸುತ್ತೇವೆ” ಎಂದು ಫೈಸರ್ವ್ ನ ಗ್ಲೋಬಲ್ ಸರ್ವೀಸಸ್ ಅಧ್ಯಕ್ಷರಾದ ಶ್ರೀನಿ ಕ್ರಿಷ್ ಹೇಳಿದರು.

ಫೈಸರ್ವ್ ಗೀವ್ಸ್ ಬ್ಯಾಕ್ ಎನ್ನುವುದು ಕಂಪನಿಯ ಜಾಗತಿಕ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮವಾಗಿದ್ದು ನಾವು ಜೀವಿಸುವ ಮತ್ತು ಕೆಲಸ ಮಾಡುವ ಸಮುದಾಯಗಳಲ್ಲಿ ಸಕಾರಾತ್ಮಕ ಅನುಭವವನ್ನು ಶಿಕ್ಷಣದ ಉತ್ತೇಜನ, ಪರಿಸರದ ಸ್ಟಿವಾರ್ಡ್ ಶಿಪ್, ಇನ್ಕ್ಲೂಷನ್ ಮತ್ತು ಆರೋಗ್ಯ ಹಾಗೂ ಸ್ವಾಸ್ಥ್ಯದ ನಾಲ್ಕು ವಲಯಗಳಲ್ಲಿ ಕೆಲಸ ಮಾಡುತ್ತೇವೆ.
ಈ ಉಪಕ್ರಮದ ಅಡಿಯಲ್ಲಿ ಬರುವ ಶಾಲೆಗಳು:
1. ಯಡಿಯೂರು ಪ್ರೌಢಶಾಲೆ, ಜಯನಗರ, ಬೆಂಗಳೂರು
2. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಕೋರಮಂಗಲ, ಬೆಂಗಳೂರು
3. ಪಟೇಲ್ ಮುನಿಚಿನ್ನಪ್ಪ ಪ್ರೌಢಶಾಲೆ, ಆಡುಗೋಡಿ, ಬೆಂಗಳೂರು
4. ಸರ್ಕಾರಿ ಪ್ರೌಢ ಶಾಲೆ, ಈಜಿಪುರ, ಬೆಂಗಳೂರು
5. ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ, ಟ್ಯಾಂಕ್ ಗಾರ್ಡನ್, ಬೆಂಗಳೂರು
6. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಹುಣಸಮಾರನಹಳ್ಳಿ, ಬೆಂಗಳೂರು
7. ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆ, ಯಲಹಂಕ, ಬೆಂಗಳೂರು
8. ಸರ್ಕಾರಿ ಪ್ರೌಢಶಾಲೆ, ಎನ್.ಎಚ್.-7 ರಸ್ತೆ, ಬೆಂಗಳೂರು
9. ಸರ್ಕಾರಿ ಪ್ರಾಥಮಿಕ ಶಾಲೆ, ಬಿಇಎಂಎಲ್ ಲೇಔಟ್, ಬೆಂಗಳೂರು
10. ಸರ್ಕಾರಿ ಪ್ರಾಥಮಿಕ ಶಾಲೆ, ಅಗ್ರಹಾರ, ಬೆಂಗಳೂರು

See also  ಅಸ್ಪೃಶ್ಯ ಪದ ಕೇಳಲಾಗದ ಅಂಬೇಡ್ಕರ್ ವಿಷಯವೇ ಇಂದು ಅಸ್ಪೃಶ್ಯವಾಗಿ ಬಿಟ್ಟಿದೆ : ಬೆಳವಾಡಿ ಆತಂಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು