News Kannada
Saturday, September 23 2023
ಬೆಂಗಳೂರು ನಗರ

ರಾಹುಲ್ ಪೌರತ್ವ ಮುಟ್ಟುಗೋಲು ಹಾಕಿಕೊಂಡು ಗಡೀಪಾರು ಮಾಡಿ: ನಾರಾಯಣಸ್ವಾಮಿ ಆಗ್ರಹ

Narayanasamy demands confiscation of Rahul Gandhi's citizenship
Photo Credit : News Kannada

ಬೆಂಗಳೂರು: ಕಾಂಗ್ರೆಸ್‍ನ ರಾಹುಲ್ ಗಾಂಧಿಯವರ ಪೌರತ್ವ ಮುಟ್ಟುಗೋಲು ಹಾಕಿಕೊಂಡು ಅವರನ್ನು ಗಡೀಪಾರು ಮಾಡಬೇಕೆಂದು ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಕರ್ತರ ಜೊತೆ ಮಾತನಾಡಿದ ಅವರು, ಇಲ್ಲಿ ಅಭದ್ರತೆ ಉಂಟು ಮಾಡುವುದು ಮತ್ತು ದೇಶಕ್ಕೆ ತೊಂದರೆ ಕೊಡಬೇಕೆಂಬ ಮನಸ್ಥಿತಿ ರಾಹುಲ್ ಗಾಂಧಿ ಅವರದು ಎಂದು ನನಗನಿಸುತ್ತದೆ. ಆದ್ದರಿಂದ ನಾನು ಪ್ರಧಾನಿ ಮೋದಿಜಿ ಮತ್ತು ಅಮಿತ್ ಶಾ ಅವರಿಗೆ ಪತ್ರ ಬರೆಯಲಿದ್ದೇನೆ ಎಂದು ತಿಳಿಸಿದರು.

ರಾಹುಲ್ ಗಾಂಧಿಯವರು ದ್ವಿ ಪೌರತ್ವ (ಡ್ಯುಯಲ್ ಸಿಟಿಜನ್‍ಶಿಪ್) ಹೊಂದಿದ್ದಾರೆಂದು ಮಾಹಿತಿ ಇದೆ. ಸುಬ್ರಹ್ಮಣ್ಯನ್ ಸ್ವಾಮಿ ಅವರು ಇದನ್ನು ತಿಳಿಸಿದ್ದಾರೆ. ಇದರ ಪರಿಶೀಲನೆ ಮಾಡಿ ರಾಹುಲ್ ಗಾಂಧಿಯವರ ಪೌರತ್ವವನ್ನು ಮುಟ್ಟುಗೋಲು ಹಾಕಬೇಕು ಎಂದು ಆಗ್ರಹಿಸಿದರು. ಅಲ್ಲದೆ ಅವರನ್ನು ಈ ದೇಶದಿಂದ ಗಡೀಪಾರು ಮಾಡಿದರೆ ಉತ್ತಮ ಎಂದು ತಿಳಿಸಿದರು. ಇಲ್ಲವಾದರೆ ಅವರು ದೇಶದಲ್ಲಿ ಅಭದ್ರತೆ ಉಂಟು ಮಾಡುವ ಎಲ್ಲ ಲಕ್ಷಣಗಳಿವೆ ಎಂದು ಅನುಮಾನ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಬಂದಾಗ ಅಧಿಕಾರ ಹಸ್ತಾಂತರದ ಸಂದರ್ಭದಲ್ಲಿ ಇದೇ ರಾಹುಲ್ ಗಾಂಧಿಯವರ ಮುತ್ತಜ್ಜನಿಗೆ ಆಗಿನ ಬ್ರಿಟಿಷರು ಸೆಂಗೋಲ್ (ರಾಜದಂಡ) ಕೊಟ್ಟಿದ್ದರು. ಆ ವಿಚಾರ ಚರಿತ್ರೆಯಲ್ಲಿ ಮುಚ್ಚಿ ಹೋಗಿತ್ತು. ಅದನ್ನು ಹೊರಕ್ಕೆ ತರುವ ಕೆಲಸವನ್ನು ಮೋದಿಜಿ ಮತ್ತು ಅಮಿತ್ ಶಾ ಅವರು ಮಾಡಿದ್ದು, ಅದನ್ನೂ ಹೊರಗಡೆ ಪ್ರಸ್ತಾಪ ಮಾಡಿದ್ದಾರೆ. ಇವೆಲ್ಲವನ್ನೂ ಗಮನಿಸಿದರೆ ರಾಹುಲ್ ಗಾಂಧಿಯವರ ತಲೆಯಲ್ಲಿ ಭಾರತೀಯ ವಿರೋಧಿ ಧೋರಣೆ ಇದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ರಾಹುಲ್ ಗಾಂಧಿಯವರು ಅಮೆರಿಕಕ್ಕೆ ಹೋಗಿದ್ದಾರೆ. ಅಲ್ಲಿ ಹೋಗಿ, ದೇಶದಲ್ಲಿ ಅಭದ್ರತೆ ಸೃಷ್ಟಿಸುವ ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ಅವರು ಯಾವತ್ತೂ ಕೂಡ ಭಾರತ ಪರವಾದ ಮಾನಸಿಕ ಸ್ಥಿತಿ ಹೊಂದಿರಲಿಲ್ಲ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ ಎಂದು ನುಡಿದರು.

18 ಇಸ್ಲಾಂ ಸಂಘಟನೆಗಳ ಮುಖ್ಯಸ್ಥರನ್ನು ಅವರು ಭೇಟಿ ಮಾಡುವ ಮಾಹಿತಿ ಬರುತ್ತಿದೆ. ಅವರನ್ನು ಐದಾರು ತಿಂಗಳೊಳಗೆ ಭಾರತಕ್ಕೆ ಕರೆಸಿಕೊಳ್ಳಬೇಕು. ಅವರ ಮೂಲಕ ಭಾರತದಲ್ಲಿ ಅಭದ್ರತೆ ಸೃಷ್ಟಿಸಲು ಯೋಜನೆಯನ್ನು ರಾಹುಲ್ ಗಾಂಧಿಯವರು ಹೊಂದಿರುವುದಾಗಿ ವಿಷಯ ಹೊರಬರುತ್ತಿದೆ ಎಂದು ಆಕ್ಷೇಪಿಸಿದರು.

ಕಾಂಗ್ರೆಸ್ ಮನಸ್ಥಿತಿ ಇಷ್ಟೊಂದು ಬದಲಾಗಲು ಕಾರಣ ಏನು ಎಂದು ಕೇಳಿದ ಅವರು, ಹೊಸ ಸಂಸತ್ ಭವನವನ್ನು ಮೋದಿಜಿ ಕಟ್ಟಿಸಿದ್ದಾರೆ. ಉದ್ಘಾಟನೆಗೆ ಎಲ್ಲ ವಿರೋಧ ಪಕ್ಷಗಳಿಗೂ ಆಹ್ವಾನ ಇದ್ದರೂ ಅವರು ಬಂದಿಲ್ಲ. ಅದು ಮೋದಿಯವರ ವಿರೋಧಿ ಮೇನಿಯಾ ಎಂದು ತಿಳಿಸಿದರು. ಇದರ ವಿರುದ್ಧವಾಗಿಯೂ ರಾಹುಲ್ ಗಾಂಧಿಯವರು ಹೊರದೇಶದಲ್ಲಿ ಮಾತನಾಡಿದ್ದಾರೆ ಎಂದರು.

ಗ್ಯಾರಂಟಿಗಳು ನನಗೆ ಬೇಕಿಲ್ಲ
ಗ್ಯಾರಂಟಿ ಏನಾಯ್ತೆಂದು ಕೇಳಲು ನಾನು ಬಂದಿಲ್ಲ; ನಾನು ಮೊದಲನೆಯದಾಗಿ ಈ ಗ್ಯಾರಂಟಿಗಳ ವಿರೋಧಿ. ನನ್ನ ಕುಟುಂಬ ಕಾಂಗ್ರೆಸ್ ಕೊಡುವ ಯಾವ ಗ್ಯಾರಂಟಿಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು. ಜನರಿಗೆ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸದೆ ಇದ್ದಲ್ಲಿ ಆಗ ನಾನು ಅದರ ಕುರಿತು ಮಾತನಾಡುವೆ. ಅದು ಜನಪರವಾಗಿರುತ್ತದೆ ಎಂದು ತಿಳಿಸಿದರು.

See also  ಕನ್ನಡಿಗರ ಏರ್ ಲಿಫ್ಟ್ ಗೆ ಸರ್ಕಾರದಿಂದಲೇ ವೆಚ್ಚ ಭರಿಸಲಾಗುವುದು ಎಂದ ಸಿಎಂ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು