News Kannada
Friday, September 22 2023
ಆರೋಗ್ಯ

ಸಾವಿನಲ್ಲೂ ಸಾರ್ಥಕತೆ ಮೆರೆದ ರೋಹಿತ್‌ ಕುಟುಂಬ: ಅಂಗಾಂಗದಾನ, ನಾಲ್ಕು ರೋಗಿಗಳಿಗೆ ಜೀವದಾನ

Rohit's family donates organs, gives life to four patients
Photo Credit : News Kannada

ಬೆಂಗಳೂರು: ಅಪಘಾತಕ್ಕೀಡಾಗಿದ್ದ 27 ವರ್ಷದ ರೋಹಿತ್‌ ಮೆದಳು ನಿಷ್ಕ್ರಿಯಯಗೊಂಡ ಹಿನ್ನಲೆಯಲ್ಲಿ ಅಂಗಾಂಗದಾನ ಮಾಡುವ ಮೂಲಕ ತಮ್ಮ ಸಾವಿನಲ್ಲೂ ಸಾರ್ಥಕತೆಯನ್ನ ಮೆರೆದಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಮೆದಳು ನಿಷ್ಕ್ರಿಯಯಗೊಂಡ ಹಿನ್ನಲೆಯಲ್ಲಿ ನೋವಿನ ನಡುವೆಯೂ ಹಲವು ಜೀವಗಳನ್ನು ಉಳಿಸುವ ನಿರ್ಧಾರ ಕೈಗೊಳ್ಳುವ ಮೂಲಕ ರೋಹಿತ್‌ ಕುಟುಂಬ ಮಾದರಿಯಾಗಿದೆ.

2023 ರ ಮೇ 21 ರಂದು ಕೆಲಸದಿಂದ ವಾಪಸ್ ಆಗುತ್ತಿದ್ದಾಗ ರೋಹಿತ್ ಬಸವೇಶ್ವರ ನಗರದ ಸೊಣ್ಣೆಗೋರನಹಳ್ಳಿ ಬಳಿ ಅಪಘಾತದಲ್ಲಿ ಗಂಭೀರವಾಗಿ ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣವೇ ಸಮೀಪದ ಅವರನ್ನ ಶಾನ್ ಭಾಗ್ ಆಸ್ಪತ್ರೆಗೆ ದಾಖಲಿಸಿ, ಅಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ಪರಿಸ್ಥಿತಿ ಗಂಭೀರವಾಗಿದ್ದ ಹಿನ್ನಲೆಯಲ್ಲಿ ರಾತ್ರಿ 10.30 ರ ವೇಳೆಗೆ ವಿಜಯನಗರ ಆಸ್ಪತ್ರೆಗೆ ವರ್ಗಾಯಿಸಲಾಯಿತು. ವಿಜಯನಗರ ಆಸ್ಪತ್ರೆಯಲ್ಲಿ ರೋಹಿತ್ ಅವರಿಗೆ ಅಹೋರಾತ್ರಿ ಚಿಕಿತ್ಸೆ ನೀಡಲಾಯಿತು. ಮೇ 24 ರಂದು ಸಂಕೀರ್ಣದಾಯಕವಾದ ಶಸ್ತ್ರ ಚಿಕಿತ್ಸೆಯನ್ನು ಸಹ ನೆರವೇರಿಸಲಾಯಿತು. ಹೆಚ್ಚಿನ ಆರೈಕೆಗಾಗಿ ಮೇ 28 ರಂದು ಟ್ರಸ್ಟ್ ವೆಲ್ ಆಸ್ಪತ್ರೆಗೆ ರೋಗಿಯನ್ನು ಸ್ಥಳಾಂತರಿಸಲಾಯಿತು.

ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ರೋಹಿತ್ ಅವರ ಮೆದುಳು ಜೀವಕೋಶಗಳು ನಿಷ್ಕ್ರೀಯಗೊಂಡಿವೆ ಎಂದು ಮೇ 30 ರಂದು ಘೋಷಿಸಲಾಯಿತು. ತೀವ್ರ ನೋವಿನ ಸಂದರ್ಭದಲ್ಲೂ ರೋಹಿತ್ ಅವರ ಅಂಗಾಂಗಳನ್ನು ದಾನ ಮಾಡಲು ಸಮ್ಮತಿಸುವ ಮೂಲಕ ರೋಹಿತ್ ಅವರ ಕುಟುಂಬ ಮಾದರಿ ನಿರ್ಧಾರ ಕೈಗೊಂಡಿತು. ರೋಹಿತ್ ಅವರ ಯಕೃತ್, ಮೂತ್ರಪಿಂಡ, ಹೃದಯದ ಕವಾಟಗಳು, ಅಕ್ಷಿಪಟಲವನ್ನು ಅಂಗಾಂಗ ವಿಫಲತೆ ಸಮಸ್ಯೆಯಿರುವವರಿಗೆ ಕಸಿ ಮಾಡಲಾಯಿತು. ಅಗತ್ಯವಿರುವವರಿಗೆ ಅಂಗಾಂಗ ದಾನ ಮಾಡಿದ ಕುಟುಂಬ ಸದಸ್ಯರಿಗೆ ಟ್ರಸ್ಟ್ ವೆಲ್ ಆಸ್ಪತ್ರೆಯ ಕೃತಜ್ಞತೆ ವ್ಯಕ್ತಪಡಿಸಿದೆ. ಇದು ಅಂಗಾಂಗ ದಾನವನ್ನು ಉತ್ತೇಜಿಸಲು ಮತ್ತು ಜೀವ ರಕ್ಷಣೆಯ ಆಯ್ಕೆಯನ್ನು ಪ್ರೋತ್ಸಾಹಿಸಿದಂತಾಗಿದೆ.

ಟ್ರಸ್ಟ್ ವೆಲ್ ಆಸ್ಪತ್ರೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎಚ್.ವಿ. ಮಧುಸೂದನ್ ಮಾತನಾಡಿ, “ರೋಹಿತ್ ಕುಟುಂಬ ನಿಸ್ವಾರ್ಥತೆಯ ಮೂಲಕ ಅಂಗಾಂಗ ದಾನ ಮಾಡಿದೆ. ಜೀವ ರಕ್ಷಣೆಯ ನಿಟ್ಟಿನಲ್ಲಿ ನಮ್ಮ ಆಸ್ಪತ್ರೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಕೆ, ಸಮರ್ಪಣಾಭಾವದಿಂದ ಕಾರ್ಯನಿರ್ವಹಿಸುವ ವೈದ್ಯಕೀಯ ತಂಡವನ್ನು ನಾವು ಹೊಂದಿದ್ದೇವೆ. ಜೊತೆಗೆ ಅತ್ಯುನ್ನತ ಗುಣಮಟ್ಟದ ಆರೈಕೆ ಮತ್ತು ರೋಗಿಗಳ ಯೋಗ ಕ್ಷೇಮಕ್ಕೆ ವಿಶೇಷ ಒತ್ತು ನೀಡಿದ್ದೇವೆ. ಜೀವ ಉಳಿಸುವ ಉದಾತ್ತ ಜವಾಬ್ದಾರಿ ದೊರೆತಿರುವುದು ನಮಗೆ ಅತ್ಯಂತ ಸಂತಸ ತಂದಿದೆ” ಎಂದು ಹೇಳಿದ್ದಾರೆ.

ರೋಹಿತ್ ಕಳೆದ ನಾಲ್ಕು ವರ್ಷಗಳಿಂದ ಹರ್ಬಲ್ ಕ್ಲಾಪ್ ಕಂಪೆನಿಯಲ್ಲಿ ಶುದ್ದೀಕರಣ ವಿಭಾಗದ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರೀತಿಯ ಮಡದಿ, ಆರು ತಿಂಗಳ ಮಗಳನ್ನು ಅವರು ಅಗಲಿದ್ದಾರೆ. ರೋಹಿತ್ ಅವರ ತಂದೆ ಪ್ಲಂಬರ್ ಆಗಿದ್ದು, ತಾಯಿ ಮತ್ತು ಇಬ್ಬರು ಸಹೋದರಿಯರನ್ನ ಅಗಲಿದ್ದಾರೆ. ಸಾವಿನಲ್ಲೂ ಸಾರ್ಥಕತೆ ತೋರುವ ಮೂಲಕ ಅವರ ಕುಟುಂಬದ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿದೆ. ದುಃಖದ ನಡುವೆ ಅಂಗಾಂಗ ದಾನ ಮಾಡಲು ಅಚಲ ನಿರ್ಧಾರ ಕೈಗೊಂಡ ಕುಟುಂಬ ಮತ್ತೊಂದು ಜೀವ ಉಳಿಸುವ ಉದಾತ್ತ ಮನೋಭಾವನೆ ಮತ್ತು ಅಗತ್ಯವಿರುವವರಿಗೆ ಅಂಗಾಂಗ ಕಸಿ ಮೂಲಕ ಜೀವ ಉಳಿಸುವ ಮಾನವೀಯತೆಯನ್ನು ಉತ್ತೇಜಿಸಲು ಈ ಘಟನೆ ಸಾಕ್ಷಿಯಾಗಿದೆ.

See also  ಬಂಟ್ವಾಳ: ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ಸ್ವಾಗತಿಸಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು