News Kannada
Friday, March 01 2024
ಬೆಂಗಳೂರು ನಗರ

854 ಕೋಟಿ ರೂ.ಗಳ ಬೃಹತ್ ಸೈಬರ್ ವಂಚನೆ ಪ್ರಕರಣ: 6 ಮಂದಿಯನ್ನು ಬಂಧಿಸಿದ ಪೊಲೀಸರು

Photo Credit : News Kannada

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್‌ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಪೊಲೀಸರು ಎಷ್ಟೇ ಎಚ್ಚರಿಕೆ ನೀಡಿದರೂ ವಂಚನೆಗೆ ಒಳಗಾಗುವವರ ಸಂಖ್ಯೆಯೇನು ಕಡಿಮೆಯಾಗುತ್ತಿಲ್ಲ. ಇದೀಗ ಸಿಸಿಬಿ ಪೊಲೀಸರು ಬೃಹತ್ ಸೈಬರ್ ವಂಚನೆ ಪ್ರಕರಣ ಬೇಧಿಸಿದ್ದು, 854 ಕೋಟಿ ರೂಪಾಯಿ ವಂಚಿಸಿದ ದೊಡ್ಡ ಜಾಲದ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಮೂರು ಶಂಕಿತರು ಇದ್ದು, ಅವರು ಈ ಜಾಲದ ಕಿಂಗ್‌ಪಿನ್‌ಗಳು ಎಂದು ಊಹಿಸಲಾಗಿದೆ. ಈ ಬೃಹತ್ ವಂಚನೆಯ ವಿವರ ವರದಿ ಇಲ್ಲಿದೆ.

ಬೆಂಗಳೂರು ಪೊಲೀಸರು 854 ಕೋಟಿ ರೂಪಾಯಿ ಮೊತ್ತದ ಬೃಹತ್‌ ಸೈಬರ್ ವಂಚನೆ ಹಗರಣವನ್ನು ಭೇದಿಸಿದ್ದಾರೆ. ಹೂಡಿಕೆ ಯೋಜನೆಯ ನೆಪದಲ್ಲಿ ಭಾರತದಾದ್ಯಂತ ಸಾವಿರಾರು ಸಂತ್ರಸ್ತರನ್ನು ವಂಚಿಸಿದ ಆರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಮನೋಜ್ ಪಣೀಂದ್ರ, ಚಕ್ರಧರ್, ಶ್ರೀನಿವಾಸ್, ಸೋಮಶೇಖರ್, ವಸಂತ್ ಬಂಧಿತರು. ಇವರೆಲ್ಲೂ ಬೆಂಗಳೂರು ವಾಸಿಗಳು. ಈ ಸೈಬರ್‌ ವಂಚನೆಯ ಪಿತೂರಿಗಾರರು ಅಥವಾ ಕಿಂಗ್‌ಪಿನ್‌ಗಳು ಎಂದು ಮೂವರನ್ನು ಗುರುತಿಸಲಾಗಿದೆ. ಅವರನ್ನು ಬಂಧಿಸುವ ಪ್ರಯತ್ನ ನಡೆದಿದೆ. ವಂಚಿಸಿದ ಒಟ್ಟು ಮೊತ್ತದಲ್ಲಿ ಐದು ಕೋಟಿ ರೂಪಾಯಿಯನ್ನು ಸ್ತಂಭನಗೊಳಿಸಲಾಗಿದೆ. ಬೆಂಗಳೂರು ಒಂದರಲ್ಲೇ ವಂಚಕರು 49 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ತಂಡವು ವಾಟ್ಸಾಪ್ ಮತ್ತು ಟೆಲಿಗ್ರಾಂ ಮೂಲಕ ಸಂತ್ರಸ್ತರನ್ನು ವಂಚನೆಯ ಜಾಲಕ್ಕೆ ಬೀಳಿಸಿಕೊಳ್ಳಲು ಆಮಿಷವೊಡ್ಡಿತ್ತು. ಆರಂಭದಲ್ಲಿ, ಅವರು ದಿನಕ್ಕೆ 1,000 ರಿಂದ 5,000 ರೂಪಾಯಿ ಲಾಭವಾಗಿ ಗಳಿಸಬಹುದು ಎಂಬ ನೆಪದಲ್ಲಿ 1,000 ರಿಂದ 10,000 ರೂಪಾಯಿ ತನಕ ಸಣ್ಣ ಮೊತ್ತವನ್ನು ಹೂಡಿಕೆ ಮಾಡಲು ಕೇಳಿಕೊಂಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸೈಬರ್ ವಂಚನೆಯ ವಿವರ ನೀಡುವುದಕ್ಕಾಗಿ ಸುದ್ದಿಗೋಷ್ಠಿ ನಡೆಸಿದ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು, ಕೆಲವರಿಗೆ ಹೆಚ್ಚಿನ ಬಡ್ಡಿಯ ಆಮಿಷ ಒಡ್ಡಿ ವಂಚಿಸಿರುವ ಬಹಳ ಕುತೂಹಲಕಾರಿ ಸೈಬರ್ ವಂಚನೆ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಯಶಸ್ವಿಯಾಗಿದೆ. ಸಾವಿರಾರು ಸಂತ್ರಸ್ತರು 1 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತಲೂ ಹೆಚ್ಚು ಹಣವನ್ನು ಹೂಡಿಕೆ ಮಾಡಿದ್ದರು ಎಂದು ವಿವರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು