ಬೆಂಗಳೂರು: ಕಿರುತೆರೆ ನಿರ್ದೇಶಕ ವಿನು ಬಳಂಜ ‘ಬೇರ’ ಎಂಬ ಚಿತ್ರ ನಿರ್ದೇಶಿಸಿದ್ದಾರೆ. “ಎಸ್.ಎಲ್.ವಿ ಕಲರ್ಸ್’ ಲಾಂಛನದಲ್ಲಿ ದಿವಾಕರ ದಾಸ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಯಿತು.
ಮ್ಯೂಸಿಯಂ ಒಂದರಲ್ಲಿ ಈ ಕಥೆ ಹುಟ್ಟಿದ್ದು, ನನ್ನನ್ನು ಸಿನಿಮಾ ಮಾಡಲು ಪ್ರೇರೇಪಿಸಿದ್ದು ನಿರ್ಮಾಪಕ ದಿವಾಕರ್ ಎಂದು ವಿನು ತಿಳಿಸಿದ್ದಾರೆ. ಮೇ ಅಂತ್ಯಕ್ಕೆ ಚಿತ್ರವನ್ನು ತೆರೆಗೆ ತರುವ ಯೋಜನೆ ಇದೆ’ ಎಂದು ವಿನು ಬಳಂಜ ತಿಳಿಸಿದ್ದಾರೆ.