News Kannada
Tuesday, September 27 2022

ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ: ಮೊಬೈಲ್ ನಿಂದಾಗಿ ವ್ಯಕ್ತಿ ಸಾವು - 1 min read

Madhya Pradesh: Man electrocuted to death
Photo Credit : IANS

ಚಿಕ್ಕಬಳ್ಳಾಪುರ : ಜೇಬಿನಲ್ಲಿದ್ದ ಫೋನ್ ಆಕಸ್ಮಿಕವಾಗಿ ಬಾವಿಯ ಒಳಗೆ ಬಿದ್ದಿದ್ದು, ಇದರಿಂದ ಗಾಬರಿಗೊಂಡ ವ್ಯಕ್ತಿ ಆಳದ ಬಾವಿಯೊಳಗೆ ಇಳಿದು ಮೊಬೈಲ್ ಮರಳಿ ತರುವ ಹರಸಾಹಸ ಮಾಡಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಈ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಗುಡಿಹಳ್ಳಿಯಲ್ಲಿ ನಡೆದಿದೆ. ಅನಿಲ್ ಕುಮಾರ್ (35) ಸಾವನ್ನಪ್ಪಿದ ಯುವಕ ಎನ್ನಲಾಗಿದೆ. ಆಕಸ್ಮಿಕವಾಗಿ ಮೊಬೈಲ್ ಬಾವಿಯೊಳಗೆ ಬೀಳುತ್ತಿದ್ದಂತೆ, ಈ ವ್ಯಕ್ತಿ ಹಗ್ಗ ಕಟ್ಟಿಕೊಂಡು ಬಾವಿಯೊಳಗೆ ಇಳಿದಿದ್ದಾನೆ.

60 ಅಡಿ ಬಾವಿಯೊಳಗೆ ಇಳಿದ ಅನಿಲ್ ಗೆ ಮತ್ತೆ ಮರಳಿ ಮೇಲೆ ಬರಲು ಆಗಿಲ್ಲ. ಉಸಿರುಗಟ್ಟಿ ಅನಿಲ್ ಗೆ ಮೇಲೆ ಬರಲು ಆಗಿಲ್ಲ. ಹೀಗಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆ ಕೂಡಲೇ ಎನ್ ಡಿ ಆರ್ ಎಫ್ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ತೆರಳಿ ಯುವಕನನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ, ಮೇಲೆ ಎತ್ತುವಷ್ಟರಲ್ಲಿಯೇ ಅನಿಲ್ ಸಾವನ್ನಪ್ಪಿದ್ದ ಎನ್ನಲಾಗಿದೆ.

ಈ ಕುರಿತು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

See also  ಚಿಕ್ಕಬಳ್ಳಾಪುರ ಜಿಲ್ಲೆಯ ಗ್ರಾಮಗಳಲ್ಲಿ ಲಘು ಭೂಕಂಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು