News Kannada
Sunday, November 27 2022

ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ: ಮಹಿಳೆಯ ಕಾಟ ಸಹಿಸಲಾಗದೆ ಆತ್ಮಹತ್ಯೆಗೆ ಶರಣಾದ ಯುವಕ - 1 min read

Railway doctor crushed to death by speeding car
Photo Credit :

ಚಿಕ್ಕಬಳ್ಳಾಪುರ : ಆಕೆಗೆ ಈಗಾಗಲೇ ಮದುವೆ ಆಗಿದೆ. ಆದರೂ ಯುವಕನ ಜತೆ ಅಕ್ರಮ ಸಂಬಂಧ ಬೆಳೆದಿತ್ತು. ಆರಂಭದಲ್ಲಿ ಚೆನ್ನಾಗಿಯೇ ಇದ್ದರು. ಇತ್ತೀಚಿಗೆ ಪ್ರೇಯಸಿಯಿಂದ ಯುವಕ ಅಂತರ ಕಾಪಾಡಿಕೊಳ್ಳಲು ಯತ್ನಿಸುತ್ತಿದ್ದ. ಈ ವಿಚಾರ ಗೊತ್ತಾಗುತ್ತಿದ್ದಂತೆ ಯುವಕನ ಬೆನ್ನತ್ತಿದ ಆಕೆ, ನೀನು ನನಗೇ ಬೇಕು.

ಯಾರಿಗೂ ನಾನು ಬಿಟ್ಟುಕೊಡಲ್ಲ ಎಂದು ಪಟ್ಟು ಹಿಡಿದಿದ್ದಳು. ಪ್ರೇಯಸಿಯ ಕಿರುಕುಳ ತಾಳಲಾರದೇ ಯುವಕ ದುರಂತ ಅಂತ್ಯ ಕಂಡಿದ್ದಾನೆ. ಪರಸ್ತ್ರೀ ಜತೆಗಿನ ಸಲ್ಲಾಪ ಯುವಕ ಪ್ರಾಣವನ್ನೇ ಬಲಿ ಪಡೆದಿದೆ. ಇಂತಹ ದುರ್ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕು ಕುಂದಲಗುರ್ಕಿ ಗ್ರಾಮದಲ್ಲಿ ಸಂಭವಿಸಿದೆ. ಮುನಿಕೃಷ್ಣ(28) ಮೃತ ದುರ್ದೈವಿ.

ಮುನಿಕೃಷ್ಣಗೆ ವಿವಾಹಿತ ಮಹಿಳೆ ಜತೆ ಅನೈತಿಕ ಸಂಬಂಧವಿತ್ತು. ಇತ್ತೀಚಿಗೆ ಈತ ಬೇರೊಬ್ಬ ಯುವತಿ ಜತೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಈ ವಿಚಾರ ತಿಳಿದು ಕೆಂಡಾಮಂಡಲವಾಗಿದ್ದ ಪ್ರೇಯಸಿ, ಮುನಿಕೃಷ್ಣಗೆ ಮಾನಸಿಕ ಕಿರುಕುಳ ಕೊಡಲಾರಂಭಿಸಿದ್ದಳು. ಆಕೆಯ ಕಾಟ ಸಹಿಸಲಾಗದೆ ಬೇಸತ್ತ ಯುವಕ, ಸೆಲ್ಫಿ ವಿಡಿಯೋ ಮಾಡಿ‌ ತಲೆತಲೆ ಚಚ್ಚಿಕೊಂಡು, ಕೆನ್ನೆಗೆ ಫಟಫಟನೆ ಹೊಡೆದುಕೊಂಡು… ತಾನು ತಪ್ಪು ಮಾಡಿಬಿಟ್ಟೆ ಎಂಬಂತೆ ಬಿಕ್ಕಿಬಿಕ್ಕಿ ಅತ್ತಿದ್ದಾನೆ. ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷ ಸೇವಿಸುವ ದೃಶ್ಯ ಮೊಬೈಲ್​ನಲ್ಲಿ ರೆಕಾರ್ಡ್​ ಆಗಿದೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಬ್ಯಾಂಕಿನ ಸ್ವೀಕೃತಿ ಚಲನ್​ ತಿದ್ದಿ 1.57 ಕೋಟಿ ರೂ. ವಂಚನೆ: ಆರೋಪಿ ನಾಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು