NewsKarnataka
Sunday, January 23 2022

ಚಿತ್ರದುರ್ಗ

ರಾತ್ರಿ ಅಂಗಡಿಗೆ ಬೆಂಕಿ ; ವ್ಯಕ್ತಿ ಸಜೀವ ದಹನ

 

ಚಿತ್ರದುರ್ಗ: ಇಲ್ಲಿಗೆ ಸಮೀಪದ ಹೊಳಲ್ಕೆರೆ ತಾಲೂಕಿನ ತೇಕಲವಟ್ಟಿ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಮನೆಯೊಂದು ಬೆಂಕಿಯಿಂದಾಗಿ ಹೊತ್ತಿ ಉರಿದಿದ್ದು, ಮಲಗಿದ್ದಲ್ಲೇ ವ್ಯಕ್ತಿಯೊಬ್ಬ ಸಜೀವ ದಹನ ಆಗಿದ್ದಾರೆ. ಮೃತರನ್ನು ಮನೆ ಮಾಲೀಕ ಪ್ರಕಾಶ್ (55) ಎಂದು ಗುರುತಿಸಲಾಗಿದ್ದು . ಇವರ ಪತ್ನಿ ಗಂಭೀರ ಗಾಯಗೊಂಡಿದ್ದು, ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕಾಶ್​ ಮನೆಯಲ್ಲೇ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದರು. ಬೆಳಗಿನ ಜಾವ ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ನಿದ್ರೆ ಮಾಡುತ್ತಿದ್ದ ಪ್ರಕಾಶ್​ ಅಲ್ಲೇ ಸುಟ್ಟುಕರಕಲಾಗಿದ್ದಾರೆ. ಕಿರಾಣಿ ಅಂಗಡಿಯಲ್ಲಿದ್ದ ಸಾಮಗ್ರಿ ಸಂಪೂರ್ಣ ಸುಟ್ಟು ಬೂದಿಯಾಗಿದೆ. ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145
Subscribe to our Brand New YouTube Channel

Subscribe Newsletter

Get latest news karnataka updates on your email.