News Kannada
Thursday, October 06 2022

ದಾವಣಗೆರೆ

ನಂಜನಗೂಡಿನ ದೇವಸ್ಥಾನದ ಪ್ರಕರಣವನ್ನು ಸುಖಾಂತ್ಯ: ಸಿಎಂ ಭರವಸೆ - 1 min read

Photo Credit :

ದಾವಣಗೆರೆ: ಅಧಿಕಾರಿಗಳು ಪರಿಣಾಮದ ಬಗ್ಗೆ ಯೋಚಿಸದೇ ಆತುರದಿಂದ ಕೈಗೊಂಡ ಕ್ರಮದಿಂದ ಜನರ ಭಾವನೆಗಳಿಗೆ ಧಕ್ಕೆಯಾಗಿದೆ. ನಂಜನಗೂಡಿನ ದೇವಸ್ಥಾನದ ಪ್ರಕರಣವನ್ನು ಸುಖಾಂತ್ಯಗೊಳಿಸುತ್ತೇವೆ. ಜತೆಗೆ ಅಂಥ ಪ್ರಕರಣ ರಾಜ್ಯದಲ್ಲಿ ಮತ್ತೆಲ್ಲೂ ಮರುಕಳಿಸಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾರಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಕಾರಿಣಿಯನ್ನು ಭಾನುವಾರ ನಗರದ ತ್ರಿಶೂಲ್‌ ಕಲಾಭವನದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ನಂಜನಗೂಡಿನ ಪ್ರಕರಣದ ನಂತರ ಶಾಂತಿ, ಸುವ್ಯವಸ್ಥೆಗೆ ತೊಂದರೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರಕ್ಕೆ ಎಡೆಮಾಡಿಕೊಟ್ಟಿದೆ ಎಂದು ಹೇಳಿದರು.

ಶಾಂತಿ ಕದಡುವ ಪ್ರಸಂಗಗಳು ಆಗಾಗ ನಡೆಯುತ್ತಿರುತ್ತವೆ. ಅಂಥ ಸಂದರ್ಭದಲ್ಲಿ ನಮ್ಮೆಲ್ಲ ವರಿಷ್ಠರು, ಹಿರಿಯರು ಕುಳಿತು ಮಾತನಾಡಿ ಸರಿಪಡಿಸಿದ್ದಾರೆ. ತಮ್ಮ ಅನುಭವ ಮುತ್ಸದ್ದಿತನ ತೋರಿದ್ದಾರೆ. ನಂಜನಗೂಡಿನ ದೇವಸ್ಥಾನ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಯೂ ಹಿರಿಯರ ಜತೆ, ಪಕ್ಷದ ಮುಖಂಡರ ಜತೆ, ಸ್ಥಳೀಯರ ಜತೆ ಕುಳಿತು ಮಾತನಾಡಿ ಸರಿಪಡಿಸುತ್ತೇವೆ. ಸರಿಯಾದ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.

See also  ಶಾಸಕ ಮಹೇಶ್‌ ರಾಜೀನಾಮೆಗೆ ಒತ್ತಾಯಿಸಿ ದಲಿತ ಸಂಘಟನೆಗಳಿಂದ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು