ದಾವಣಗೆರೆ: ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ 2ನೇ ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಮತ್ತೊಮ್ಮೆ ಪೊಲೀಸರು ಬಂಧಿಸಿದ್ದಾರೆ.
ಕೋರ್ಟ್ ಅರೆಸ್ಟ್ ವಾರಂಟ್ ನೀಡಿದ ಹಿನ್ನೆಲೆಯಲ್ಲಿ ದಾವಣಗೆರೆ ವಿರಕ್ತ ಮಠಕ್ಕೆ ಪೊಲೀಸರು ಆಗಮಿಸಿದ್ದರು. ಮಠಕ್ಕೆ ಅರೆಸ್ಟ್ ವಾರಂಟ್ ಹಿಡಿದುಕೊಂಡು ಬಂದ ಪೊಲೀಸರು ನೇರವಾಗಿ ಮಠದ ಕೋಣೆ ಒಳಗಿಂದ ಮುರುಘಾ ಶರಣರನ್ನು ಕರೆದೊಯ್ದಿದ್ದಾರೆ. ಮೊದಲನೇ ಪೋಕ್ಸೋ ಪ್ರಕರಣದಲ್ಲಿ ಒಂದು ವರ್ಷ ಜೈಲುವಾಸ ಅನುಭವಿಸಿದ್ದ ಮುರುಘಾಶ್ರೀ ಜಾಮೀನಿನ ಮೇಲೆ ನವೆಂಬರ್ 16ರಂದು ಬಿಡುಗಡೆಯಾಗಿದ್ದರು. ಆದ್ರೆ ಇದೀಗ ನಾಲ್ಕೇ ದಿನದಲ್ಲಿ ಇಂದು ಮತ್ತೆ ಅರೆಸ್ಟ್ ಆಗಿದ್ದಾರೆ.