News Kannada
Saturday, February 24 2024
ಬೆಂಗಳೂರು

ಕರಾವಳಿಯ ಅಂಕದ ಕೋಳಿಗಳಿಗೆ ಸಿಲಿಕಾನ್‌ ಸಿಟಿಯಲ್ಲಿ ಭರ್ಜರಿ ಡಿಮಾಂಡ್‌

Demand for coastal ank chickens in Silicon City
Photo Credit : News Kannada

ಬೆಂಗಳೂರು: ಕರಾವಳಿಯ ಪ್ರತಿ ಆಚರಣೆಗೂ ವೈಶಿಷ್ಟ್ಯವಿರುತ್ತದೆ. ಅದೇ ರೀತಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಕಂಬಳದಲ್ಲಿ ಕೋಳಿ ಅಂಕವೂ ಜನಪ್ರಿಯತೆ ಗಳಿಸುತ್ತಿದೆ. ಒಂದೆಡೆ ಕಂಬಳದ ಕೋಣಗಳನ್ನು ನೋಡಲು ಜನರು ಮುಗಿಬಿದ್ದರೆ, ಇನ್ನೊಂದೆಡೆ ಅಂಕದ ಕೋಳಿಗಳ ಖರೀದಿಗೂ ಜನರು ಮುಗಿಬೀಳುತ್ತಿದ್ದಾರೆ.

ಬೆಂಗಳೂರು ಕಂಬಳದಲ್ಲಿ ಕೋಣಗಳನ್ನು ನೋಡುವ ಕ್ರೇಜ್ ಒಂದು ಕಡೆಯಾದರೆ, ಮತ್ತೊಂದೆಡೆ ಅಂಕದ ಕೋಳಿಗಳಿಗೂ ಗ್ರಾಹಕರಿಂದ ಬೇಡಿಕೆ ವ್ಯಕ್ತವಾಗುತ್ತಿದೆ. ಲಕ್ಕಿ ಡ್ರಾ ಮೂಲಕ ಅಂಕದ ಕೋಳಿಗಳನ್ನ ಮೈದಾನದಲ್ಲಿ ಗ್ರಾಹಕರು ಖರೀದಿಸುತ್ತಿದ್ದಾರೆ. ಅಂಕದ ಕೋಳಿಗಳನ್ನ ಮಾರಾಟ ಮಾಡಲೆಂದೇ ವ್ಯಾಪಾರಸ್ಥರು ಒಟ್ಟು 40 ಅಂಕದ ಕೋಳಿಗಳನ್ನ ತಂದಿದ್ದು, ಲಕ್ಕಿ ಡ್ರಾದಲ್ಲಿ ಗೆದ್ದವರಿಗೆ ಉಚಿತವಾಗಿ ನೀಡಲಾಗುತ್ತಿದೆ.

ಈ ಅಂಕದ ಕೋಳಿಗಳಿಗೆ 3 ರಿಂದ 5 ಸಾವಿರ ರೂಪಾಯಿ ಇರುತ್ತದೆ. ಆದರೆ ಇಲ್ಲಿ 130 ರೂಪಾಯಿಗೆ ಒಂದು ಕೂಪನ್ ಖರೀದಿಸಬೇಕು ಹಾಗೂ ಅದೃಷ್ಟ ಯಾರಿಗೆ ಇರುತ್ತೋ ಅವರಿಗೆ ಅಂಕದ ಕೋಳಿ ಸಿಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು