News Kannada
Friday, February 23 2024
ಬೆಂಗಳೂರು

ಬೆಂಗಳೂರಿನ ಯಾವುದಾದರೊಂದು ವೃತ್ತಕ್ಕೆ ಲೀಲಾವತಿ ಹೆಸರಿಡಲು ಆಗ್ರಹ

ಖ್ಯಾತ ಕಲಾವಿದೆಯಾಗಿದ್ದ ಲೀಲಾವತಿ ಅವರ ಹೆಸರನ್ನು ನಗರದ ಯಾವುದಾದರೊಂದು ಪ್ರಮುಖ ವೃತ್ತಕ್ಕೆ ನಾಮಕರಣ ಮಾಡಬೇಕು ಎಂದು ಬಿಬಿಎಂಪಿ ನೌಕರರ ಸಂಘ ಆಗ್ರಹಿಸಿದೆ.
Photo Credit : News Kannada

ಬೆಂಗಳೂರು: ಖ್ಯಾತ ಕಲಾವಿದೆಯಾಗಿದ್ದ ಲೀಲಾವತಿ ಅವರ ಹೆಸರನ್ನು ನಗರದ ಯಾವುದಾದರೊಂದು ಪ್ರಮುಖ ವೃತ್ತಕ್ಕೆ ನಾಮಕರಣ ಮಾಡಬೇಕು ಎಂದು ಬಿಬಿಎಂಪಿ ನೌಕರರ ಸಂಘ ಆಗ್ರಹಿಸಿದೆ.

ನಟಿ ಲೀಲಾವತಿ ಅವರ ಹೆಸರು ಅಜರಾಮರವಾಗಿ ಉಳಿಯಬೇಕು ಎಂದು ಅವರ ಹೆಸರನ್ನು ನಗರದ ನಾಯಂಡಹಳ್ಳಿ ಸರ್ಕಲ್ ಗೆ ಲೀಲಾವತಿ ವೃತ್ತ ಎಂದು ನಾಮಕರಣ ಮಾಡಲು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಅಮೃತ್ರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ಹಲವು ಗಣ್ಯರ ಹೆಸರು ಬೆಂಗಳೂರಿನ ರಸ್ತೆಗೆ, ವೃತ್ತಕ್ಕೆ ಇಡಲಾಗಿದೆ..ಹೀಗಾಗಿ ಇದೇ ಮಾದರಿಯಲ್ಲಿ ಲೀಲಾವತಿ ಅವರ ಹೆಸರೂ ಕೂಡ ಇಡುವುದು ಸೂಕ್ತ ಎಂದು ಅವರು ಹೇಳಿದರು. ನಿಮ್ಮ ಮನವಿಯನ್ನು ಸರ್ಕಾರದ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭರವಸೆ ನೀಡಿದ್ದಾರೆ ಎಂದು ಅವರು ವಿವರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು