News Kannada
Friday, March 01 2024
ಬೆಂಗಳೂರು

ಮೃತ ಸರ್ಕಾರಿ ನೌಕರನ 2ನೇ ಪತ್ನಿಗೆ ಕುಟುಂಬ ಪಿಂಚಣಿ‌ ಅಧಿಕಾರವಿಲ್ಲ;ಹೈಕೋರ್ಟ್

Photo Credit : News Kannada

ಬೆಂಗಳೂರು: ಮೃತ ಸರ್ಕಾರಿ ನೌಕರನ 2ನೇ ಪತ್ನಿಗೆ ಕುಟುಂಬ ಪಿಂಚಣಿ‌ ಅಧಿಕಾರವಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ. ಪ್ರಕರಣ ಒಂದರ ವಿಚಾರಣೆ ವೇಳೆ ಮೊದಲ ಪತ್ನಿಗೆ ಮಾತ್ರ ಮೃತ ಪತಿಯ ಕುಟುಂಬ ಪಿಂಚಣಿ ಅಧಿಕಾರವಿದೆ. ಪತ್ನಿ ಬದುಕಿದ್ದಾಗ 2ನೇ ವಿವಾಹಕ್ಕೆ ಮಾನ್ಯತೆಯಿಲ್ಲ. ಹೀಗಾಗಿ ಪಿಂಚಣಿಯ ಹಕ್ಕನ್ನು 2ನೇ ಪತ್ನಿ ಕೇಳುವಂತಿಲ್ಲ ಎಂದು ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಹಾಗೂ ನ್ಯಾ.ಕೃಷ್ಣ ಎಸ್ ದೀಕ್ಷಿತ್‌ರಿದ್ದ ಪೀಠ ಆದೇಶಿಸಿದೆ.

ಈ ಪಿಂಚಣಿ ಎಂಬುದು ಸಾಮಾನ್ಯವಾಗಿ, ಜನರು ಉದ್ಯೋಗದಿಂದ ಕ್ರಮಬದ್ಧ ವರಮಾನವನ್ನು ಗಳಿಸದಿರುವಂಥ ಕಾಲದಲ್ಲಿ ಅವರಿಗೆ ವರಮಾನವನ್ನು ಒದಗಿಸುವಂತಹ ಒಂದು ವ್ಯವಸ್ಥೆಯಾಗಿದೆ. ಅದು ನಿವೃತ್ತಿ ಆದಾಯವಾಗಿ ಆ ಮೇಲಿನ ಬಳಕೆಗಾಗಿ ನಿಧಿಯ ತೆರಿಗೆ-ಮುಕ್ತ ಶೇಖರಣೆಗೆ ಎಡೆಗೊಡುವ ಒಂದು ತೆರಿಗೆ ಮುಕ್ತ ಉಳಿತಾಯ ಸಾಧನವಾಗಿದೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು