News Kannada
Saturday, February 24 2024
ಬೆಂಗಳೂರು

ಚಂದ್ರನ ಮೇಲಿನ ಮಣ್ಣಿನ ತಾಪಮಾನದ ಅವಲೋಕನ ಗ್ರಾಫ್‌ ಹಂಚಿಕೊಂಡ ಇಸ್ರೊ

Chandrayaan 3
Photo Credit : News Kannada

ಬೆಂಗಳೂರು: ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿದೆ. ಲ್ಯಾಂಡರ್‌ನಿಂದ ಹೊರಬಂದ ರೋವರ್‌ ತನ್ನ ಕಾರ್ಯವನ್ನೂ ಆರಂಭಿಸಿದೆ. ಇದೀಗ ಮೊದಲ ಬಾರಿಗೆ ಚಂದ್ರನ ಮೇಲ್ಮೈನಲ್ಲಿನ ಮಣ್ಣಿನ ತಾಪಮಾನದ ಅವಲೋಕವನ್ನು ಮಾಡಲಾಗಿದ್ದು, ಇಸ್ರೊ ಈ ಬಗ್ಗೆ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ.

10 ಸೆಂ.ಮೀ ಆಳದವರೆಗಿನ ತಾಪಮಾನದ ಮಾಹಿತಿ ಹಾಗೂ ತಾಪಮಾನದಲ್ಲಿ ವ್ಯತ್ಯಾಸ ಕಂಡುಬರುವ ಬಗ್ಗೆ ಗ್ರಾಫ್‌ವೊಂದನ್ನು ಹಂಚಿಕೊಂಡಿದೆ. ಗ್ರಾಫ್‌ನಲ್ಲಿ ಚಂದ್ರನ ಮೇಲ್ಮೈನಲ್ಲಿ ತಾಪಮಾನ ಬದಲಾವಣೆಯಾಗುವ ಬಗ್ಗೆ ಹೇಳಲಾಗಿದೆ. ಇದರ ಬಗೆಗಿನ ಸಂಪೂರ್ಣ ಅಧ್ಯಯನವನ್ನು ನಡೆಸಲಾಗುತ್ತಿದೆ’ ಎಂದು ಇಸ್ರೊ ಹೇಳಿದೆ.

ಅಹಮದಾಬಾದ್‌ನ ಭೌತಿಕ ಅನುಸಂಧಾನ ಪ್ರಯೋಗಾಲಯದ ಸಹಯೋಗದೊಂದಿಗೆ ಬಾಹ್ಯಾಕಾಶ ಭೌತಶಾಸ್ತ್ರ ಪ್ರಯೋಗಾಲಯ, ವಿಕ್ರಮ್‌ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ (VSSC)ದಲ್ಲಿ ಅಧ್ಯಯನವನ್ನು ನಡೆಸಲಾಗುತ್ತಿದೆ ಎಂದು ಇಸ್ರೊ ಮಾಹಿತಿ ನೀಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು