News Kannada
Saturday, February 24 2024
ಬೆಂಗಳೂರು

ಕರಾವಳಿಯ ಕಲೆ ಬೆಂಗಳೂರಿನಲ್ಲಿ ಯಾಕೆ ಎಂದು ಪ್ರಶ್ನಿಸಿದ್ದೆ ಎಂದ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಶ್ರೀರಾಮನ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿದೆ. ಮೈಸೂರು ಅಶೋಕ ರಸ್ತೆಯಲ್ಲಿ ಲಕ್ಷ ದೀಪೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಈಗ ಪೊಲೀಸರು ಕೊನೆ ಕ್ಷಣದಲ್ಲಿ ಅನುಮತಿಯನ್ನು ರದ್ದುಗೊಳಿಸಿದ್ದಾರೆ.
Photo Credit : News Kannada

ಬೆಂಗಳೂರು: ಬೆಂಗಳೂರಿನಲ್ಲಿ ಕರಾವಳಿಯ ಮಣ್ಣಿನ ಕ್ರೀಡೆ ಕಂಬಳ ಯಶಸ್ವಿಯಾಗಿ ನಡೆಯುತ್ತಿದೆ. ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಿಎಂ ಸಿದ್ದರಾಮಯ್ಯ ತುಳುವರಿಗೆ ಶುಭ ಸುದ್ದಿಯೊಂದನ್ನು ತಿಳಿಸಿದ್ದಾರೆ.

ಕಂಬಳ ಸಭಾ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಸಿ‌.ಎಂ ಸಿದ್ದರಾಮಯ್ಯ, ಇದು ಭಾಷಣ ಮಾಡುವ ವೇದಿಕೆಯಲ್ಲ. ನೀವು ಯಾರು ಸಹ ಭಾಷಣ ಕೇಳಲು ಬಂದಿಲ್ಲ. ಕಂಬಳ ಕ್ರೀಡೆಯನ್ನು ಅತ್ಯಂತ ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. ಎರಡು ಜೋಡು ಕರೆಯಲ್ಲಿ ಕಂಬಳ ನಡೆಯುತ್ತಿದೆ. ಕಂಬಳ ಕರಾವಳಿ ಜಿಲ್ಲೆಗಳ ಜಾನಪದ ಕಲೆ. ಇದನ್ನು ಬೆಂಗಳೂರು ನಗರಕ್ಕೆ ಪರಿಚಯಿಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಇಷ್ಟೊಂದು ಜನ ಕಂಬಳ ನೋಡಲು ಬರ್ತಾರೆ ಎಂದು ನಿರೀಕ್ಷೆ ಇರಲಿಲ್ಲ. ಕರಾವಳಿ ಪ್ರದೇಶದ ಜಾನಪದ ಕಲೆ ಬೆಂಗಳೂರಿನಲ್ಲಿ ಯಾಕೆ ಎಂದು ಪ್ರಶ್ನಿಸಿದ್ದೆ. ಲಕ್ಷಾಂತರ ಜನ ಕರಾವಳಿಯವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ರಾಜ್ಯದ ಮೂಲೆ ಮೂಲೆಯ ಜನ ಈ ಕ್ರೀಡೆಗೆ ಪ್ರೋತ್ಸಾಹಿಸುವ ಅವಕಾಶ ಕಲ್ಪಿಸುವುದಾಗಿ ಹೇಳಿದ್ದರು. ಇಲ್ಲಿ ಬಂದು ನೋಡಿದಾಗ ಆಶ್ಚರ್ಯ ಆಯ್ತು. ಎರಡು ಬಾರಿ ಕರಾವಳಿಯಲ್ಲಿ ಕಂಬಳ ಉದ್ಘಾಟನೆ ಮಾಡಿದ್ದೆ. ಇದು ಬಹಳ ಪುರಾತನ ಕಾಲದಿಂದ ಬಂದಿರುವ ಜನರ ಕಲೆ. ಈ ಕಲೆ ಕರಾವಳಿ ಭಾಗದಲ್ಲಿ ಬಹಳ ಪ್ರಸಿದ್ದವಾಗಿದೆ. ಕೋಣ ಸಾಕೋದು ಬಹಳ ಕಷ್ಟದ ಕೆಲಸ. ಒಂದು ಕೋಣ ಸಾಕಲು ವಾರ್ಷಿಕವಾಗಿ 15 ಲಕ್ಷ ಬೇಕು. ಇದು ಶ್ರೀಮಂತರ ಕ್ರೀಡೆ ಆಗುತ್ತೆ ಅಲ್ವಾ ಎಂದು ಪ್ರಶ್ನೆ ಮಾಡಿದರು. ಶ್ರೀಮಂತರು ಕೋಣ ಸಾಕಬಹುದು ಬಡವರು ಪಾಪ ಹೇಗೆ ಸಾಕುತ್ತಾರೆ.

ಹಿಂದೆ ಕಂಬಳ ಗದ್ದೆಗಳಲ್ಲಿ ಕಂಬಳ ನಡೆಯುತಿತ್ತು. ಹದ ಮಾಡಿದ ಮಣ್ಣಿನ ನೀರಿನಲ್ಲಿ ಕೋಣ ಒಡಿಸುತ್ತಿದ್ದರು. ಕ್ರೀಡಾಪಟು ಆಗಿದ್ದರೆ ಮಾತ್ರ ಕೋಣಗಳ ಜೊತೆ ಓಡಲು ಸಾಧ್ಯ. ಬೆಂಗಳೂರಿನಲ್ಲಿ ಪ್ರತಿವರ್ಷ ಕಂಬಳ ಮುಂದುವರಿಸುವ ಕೆಲಸ ಮಾಡಿ. ನವೆಂಬರ್ ಡಿಸೆಂಬರ್ ತಿಂಗಳಲ್ಲಿ ಮಾಡಿ. ಬೆಂಗಳೂರಿನ ಜನರಿಗೂ ಇದು ಮನೋರಂಜನೆಯ ಕ್ರೀಡೆ ಆಗುತ್ತದೆ.

ತುಳು ಭಾಷೆ ಹೆಚ್ಚುವರಿಯಾಗಿ ಸೇರ್ಪಡೆ: ತುಳು ಭಾಷಣೆಯನ್ನು ರಾಜ್ಯದ ಹೆಚ್ಚುವರಿ ಭಾಷೆಯಾಗಿ ಸೇರ್ಪಡೆಗೊಳಿಸುವಂತೆ ಸ್ಪೀಕರ್ ಯುಟಿ ಖಾದರ್ ಅವರು ಮಾಡಿದ ಮನವಿಯನ್ನು ಭಾಷಣದ ವೇಳೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ತುಳುವನ್ನು ರಾಜ್ಯದ ಹೆಚ್ಚುವರಿ ಭಾಷೆಯನ್ನಾಗಿ ಮಾಡಲು ಪ್ರಯತ್ನ ಮಾಡಲಾಗುವುದು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು