News Kannada
Monday, October 02 2023
ಕೋಲಾರ

ಕೋಲಾರ: ಸಿದ್ದರಾಮಯ್ಯ ಕಾರಿಗೆ ಕೋಳಿ ಮೊಟ್ಟೆ ಎಸದಿರುವುದು ತಪ್ಪು ಎಂದ ಮುನಿರತ್ನ

Kolar: It was wrong not to throw chicken eggs into Siddaramaiah's car, says Munirathna
Photo Credit : Facebook

ಕೋಲಾರ: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ವಿಚಾರವಾಗಿ ಪ್ರತಿಕ್ರಿಯೆಸಿದ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರತಿಭಟನೆಗಳು ನಡೆಯುತ್ತಿರುತ್ತವೆ. ಆ.26ರಂದು ಪ್ರತಿಭಟನೆಗೆ ಕರೆ ನೀಡಿರುವುದನ್ನು ಗಮನಿಸಿದರೆ ಸಿದ್ದರಾಮಯ್ಯ ಕಡೆಯವರೇ ಉದ್ದೇಶಪೂರ್ವಕವಾಗಿ ಕೋಳಿ ಮೊಟ್ಟೆ ಎಸೆದಿರಬಹುದು ಯಾರಿಗೆ ಗೊತ್ತು? ‘ ಎಂದು ತೋಟಗಾರಿಕೆ, ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ಪ್ರತಿಭಟನೆ ನಡೆಸಲೆಂದೇ ವಿವಾದ ಸೃಷ್ಟಿಸಿದ್ದಾರೆ. ಸರ್ಕಾರದ ವಿರುದ್ಧ ಮಾತನಾಡಲು ಯಾವುದೇ ವಿಷಯ ಸಿಗುತ್ತಿಲ್ಲ. ಹೀಗಾಗಿ, ಯಾವುದೇ ವಿಷಯ ಸಿಕ್ಕಿದರೂ ಪ್ರತಿಭಟನೆ ನಡೆಸುತ್ತಾರೆ. ಈಗ ಮೊಟ್ಟೆ ಸಿಕ್ಕಿದೆ ‘ ಎಂದರು.

ಇದು ಪೊಲೀಸ್‌ ವೈಫಲ್ಯ ಎನ್ನಲಾಗದು. ಹತ್ತು ಜನರು ನಿಂತಿರುವಾಗ ಯಾರೋ ಒಬ್ಬ ಸಂದಿಯಿಂದ ಕಲ್ಲು, ಕೋಳಿ ಮೊಟ್ಟೆ ಎಸೆಯುವುದು ನಡೆಯುತ್ತಿರುತ್ತದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರತ್ತ ಕೋಳಿ ಮೊಟ್ಟೆ ಎಸದಿರುವುದು ತಪ್ಪು. ಕಾನೂನು ಪ್ರಕಾರ ಕ್ರಮ ವಹಿಸಲಾಗುತ್ತದೆ’ ಎಂದರು. ‘ ಕಾರ್ಯಕರ್ತರ ಮಟ್ಟದಲ್ಲಿ ಜಗಳ ನಡೆದಿರಬಹುದು. ಆದರೆ, ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಈ ರೀತಿ ಮಾಡಬಾರದು’ ಎಂದು ತಿಳಿಸಿದರು.

See also  ವಿರೋಧಗಳು ಇನ್ನೂ ಹೆಚ್ಚಾಗಲಿ ನಮ್ಮ ಅಭ್ಯಂತರವಿಲ್ಲ : ರಮೇಶ್ ಕುಮಾರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು