ಕೋಲಾರ: ಬಂಗವಾದಿಯಲ್ಲಿ ಹೆಚ್.ಡಿ ಕುಮಾರಸ್ವಾಮಿ ಕಾರಿಗೆ ಅಡ್ಡಲಾಗಿ ಧರಣಿ ಕುಳಿತ ಮಕ್ಕಳು ಹೆಚ್ಡಿಕೆ ಅವರನ್ನು
ಶಾಲೆಗೆ ಕರೆದುಕೊಂಡು ಹೋಗಿ ಸೋರುತ್ತಿರುವ ಶಾಲೆ, ಶಿಥಿಲವಾದ ಶಾಲಾ ಕಟ್ಟಡ ತೋರಿಸಿ ಮಕ್ಕಳು ಕಣ್ಣೀರಿಟ್ಟ ಘಟನೆ ಶ್ರೀನಿವಾಸಪುರ ಮಾಸ್ತೇನಹಳ್ಳಿಯಲ್ಲಿ ನಡೆದಿದೆ.
ಹೆಚ್.ಡಿ ಕುಮಾರಸ್ವಾಮಿ ಅವರು ಮಕ್ಕಳ ಬೇಡಿಕೆ ಮೇರೆಗೆ ಶಾಲೆಗೆ ಬಂದು ವೀಕ್ಷಿಸಿದರು. ಈ ವೇಳೆ ಬೇರೆ ಕ್ಲಾಸ್ ರೂಂಗಳಿಲ್ಲ ಎಂದು ಅಳಲು ತೋಡಿಕೊಂಡ ಬಾಲಕ, ಎಷ್ಟೇ ಮನವಿ ಕೊಟ್ಟರೂ ಯಾರು ಸ್ಪಂದಿಸುತ್ತಿಲ್ಲ ಎಂದನು. ಬಾಲಕನ ಕಣ್ಣೀರು ಕಂಡು ಎಷ್ಟು ರೂಂ ಬೇಕಾಗಿದೆ ಎಂದ ಹೆಚ್ಡಿಕೆ ಕೇಳಿದರು.
ಮನವಿ ಪತ್ರ ಸ್ವೀಕರಿಸಿ ಮಾಡಿಕೊಡುತ್ತೇನೆ ಎಂದ ಕುಮಾರಸ್ವಾಮಿ, ಸ್ಥಳದಲ್ಲಿ ಶಿಕ್ಷಣ ಸಚಿವ ನಾಗೇಶ್ ಗೆ ಕರೆ ಮಾಡಿದರು. ಈ ವೇಳೆ ತಕ್ಷಣವೇ ಸಮಸ್ಯೆ ಬಗೆಹರಿಸುತ್ತೇವೆ ಎಂದ ನಾಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಇದೇ ವೇಳೆ ಕೋಲಾರದ ಡಿಡಿಪಿಐ ಅವರಿಗೂ ಹೆಚ್. ಡಿ ಕುಮಾರಸ್ವಾಮಿ ಕರೆ ಮಾಡಿದ್ದಾರೆ.