News Kannada
Saturday, December 02 2023
ಬೆಂಗಳೂರು

ಬೆಂಗಳೂರಿನಲ್ಲಿ ಫೀಲ್ಡಿಂಗ್ ದಂತಕಥೆ ಜಾಂಟಿ ರೋಡ್ಸ್ ಜಾಲಿ ರೈಡ್

Jonty Rhodes
Photo Credit : News Kannada

ಬೆಂಗಳೂರು: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ, ಫೀಲ್ಡಿಂಗ್ ದಂತಕಥೆ ಜಾಂಟಿ ರೋಡ್ಸ್​​ ಗೊತ್ತೆಯಿದೆ. ಚುರುಕಿನ ಫೀಲ್ಡಿಂಗ್ ಮೂಲಕ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಜಾಂಟಿ ರೋಡ್ಸ್ ಇದೀಗ ಬೆಂಗಳೂರಿನ ಹೋಟೆಲೊಂದರ ಮೈಸೂರು ಮಸಾಲೆ ದೋಸೆ, ಮಂಗಳೂರು ಬನ್ಸ್ ರುಚಿಗೆ ಮಾರುಹೋಗಿ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಅಲ್ಲದೆ, ಇಂಥ ರುಚಿಕರ ಆಹಾರ ದೊರೆಯಲು ಕಾರಣರಾದ ಟ್ಯಾಕ್ಸಿ ಚಾಲಕನಿಗೆ ಧನ್ಯವಾದ ತಿಳಿಸಿದ್ದಾರೆ.

ಬೆಂಗಳೂರು ಟ್ರಾಫಿಕ್ ಜಾಮ್​ ಬಿಸಿಯಿಂದ ಪಾರಾಗಲು ಸಮೀಪದ ಹೋಟೆಲ್​ಗೆ ತೆರಳುವಂತೆ ಟ್ಯಾಕ್ಸಿ ಚಾಲಕ ಜಾಂಟಿ ಅವರಿಗೆ ಸಲಹೆ ನೀಡಿದ್ದರು. ಅದರಂತೆ, ವಿಮಾನ ನಿಲ್ದಾಣ ಮಾರ್ಗದಲ್ಲಿರುವ ಹೋಟೆಲ್​ಗೆ ತೆರಳಿ ಮೈಸೂರು ಮಸಾಲದೋಸೆ, ಮಂಗಳೂರು ಬನ್ಸ್ ತಿಂದು, ಮಸಾಲ ಚಹಾ ಸವಿದಿದ್ದಾರೆ. ಬಳಿಕ ಹೋಟೆಲ್ ಸಿಬ್ಬಂದಿ ಜತೆ ಫೊಟೋ ತೆಗೆಸಿಕೊಂಡು ಎಕ್ಸ್​​ನಲ್ಲಿ ಪ್ರಕಟಿಸಿದ್ದಾರೆ.

ಮೈಸೂರು ಮಸಾಲೆ ದೋಸೆ, ಮಂಗಳೂರು ಬನ್ಸ್ ಹಾಗೂ ಮಸಾಲ ಚಹಾ ಅದ್ಭುತವಾಗಿತ್ತು. #loveIndia ಎಂಬ ಹ್ಯಾಷ್​ಟ್ಯಾಗ್​​ನೊಂದಿಗೆ ಜಾಂಟಿ ರೋಡ್ಸ್ ಟ್ವೀಟ್ ಮಾಡಿದ್ದಾರೆ. ಬೆಂಗಳೂರಿನ ಭಗಿನಿ ವೆಜ್ ರೆಸ್ಟೋರೆಂಟ್​ನ ಸಿಬ್ಬಂದಿ ಜತೆ ನಿಂತಿರುವ ಫೋಟೊವನ್ನೂ ಟ್ವೀಟ್ ಮಾಡಿದ್ದಾರೆ.

 

 

 

See also  ಕಾರವಾರ: ಪ್ರವೀಣ ಹತ್ಯೆ ಮಾಡಿದ ಎಲ್ಲ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12795
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು