News Kannada
Sunday, March 03 2024
ಬೆಂಗಳೂರು

ಕೇರಳದಲ್ಲಿ ನಿಫಾ ಆತಂಕ: ಕರ್ನಾಟಕ ಕೇರಳ ಗಡಿ ಭಾಗಗಳಲ್ಲಿ ಹೈ ಅಲರ್ಟ್‌

Nipah outbreak in Kerala: High alert sounded along Karnataka-Kerala border
Photo Credit : News Kannada

ಬೆಂಗಳೂರು: ಕೇರಳದಲ್ಲಿ ನಿಫಾ ವೈರಸ್‌ ಆತಂಕ ಹೆಚ್ಚಾದ ಹಿನ್ನೆಲೆಯಲ್ಲಿ ಕರ್ನಾಟಕ ಕೇರಳ ಗಡಿ ಭಾಗಗಳಲ್ಲಿ ಹೈ ಅಲರ್ಟ್‌ ಮಾಡಲಾಗಿದೆ. ದಕ್ಷಿಣ ಕನ್ನಡ ಕೇರಳ ನಡುವೆ ನಿಕಟ ಸಂಪರ್ಕ, ದಿನ ನಿತ್ಯ ಸಾವಿರಾರು ಜನರು ಓಡಾಡುತ್ತಾರೆ. ಹೀಗಾಗಿ ತಲಪಾಡಿ ಗಡಿಯಲ್ಲಿ ಬೆಕ್‌ ಪೋಸ್ಟ್‌ ಸ್ಥಾಪನೆ ಮಾಡಲಾಗಿದೆ.

ಕೇರಳದಿಂದ ಬರುವ ಪ್ರಯಾಣಿಕರ ತಪಾಸಣೆ ಕೂಡ ಮಾಡಲಾಗುತ್ತಿದೆ. ಜ್ವರ ಕೆಮ್ಮು ಲಕ್ಷಣಗಳು ಕಂಡು ಬಂದಲ್ಲಿ ಅಂತವರಿಗೆ ಸ್ವಾಬ್‌ ಟೆಸ್ಟ್‌ ಮಾಡುತ್ತಿದ್ದಾರೆ. ಗಡಿಯಲ್ಲಿ ಕೆ ಎಲ್‌ 30,40,60 ವಾಹನಗಳನ್ನು ಹೊರತುಪಡಿಸಿ ಕೇರಳದ ಎಲ್ಲಾ ವಾಹನಗಳ ತಪಾಸಣೆ ಮಾಡುತ್ತಿದ್ದಾರೆ.

ಇನ್ನು ಸೆ.1ರಂದು ನೆರೆಯ ಕೇರಳದಲ್ಲಿ ಕೊನೆಯ ನಿಫಾ ಪ್ರಕರಣ ಪತ್ತೆಯಾಗಿತ್ತು. ನಿಫಾ ಅವಧಿ ಅ.10ರ ವರೆಗೆ ಇರಲಿದ್ದು ಕಟ್ಟೆಚ್ಚರ ವಹಿಸಲಾಗಿದೆ. ಹಾಗಾಗಿ ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ಎದುರಿದಲು ಸನ್ನದ್ದವೆಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ. ಅಲ್ಲದೇ ಎಲ್ಲಾ ಆಸ್ಪತ್ರೆಗಳಲಲಿ ಕಟ್ಟೆಚ್ಚರ ವಹಿಸಲಾಗಿದೆ.

ಗಡಿಗಳಲ್ಲಿ ಇನ್ಕ್ಯೂಬೇಷನ್‌ ಅವಧಿ ಪೂರ್ಣಗೊಳ್ಳುವವರೆಗೂ ಹೈ ಅರ್ಲಟ್‌ ಇರಲಿದೆ. ಎಲ್ಲಾ ಕಡೆಗಳಲ್ಲಿ ಎಲ್ಲಾ ರೀತಿಯ ಮುನ್ನೆಚ್ಚ್ರಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ದ,ಕ ಜಿಲ್ಲಾ ಉಸ್ತುವರಿ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು