News Karnataka Kannada
Thursday, March 28 2024
Cricket
ರಾಮನಗರ

ಕಾಂಗ್ರೆಸ್‌ನಿಂದ ಸರ್ಕಾರ ಅಭದ್ರಗೊಳಿಸುವ ಹುನ್ನಾರ: ಸಿ.ಪಿ.ಯೋಗೇಶ್ವರ್

Photo Credit :

ರಾಮನಗರ: ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಹೆಸರಿನಲ್ಲಿ ಸರ್ಕಾರವನ್ನು ಅಭದ್ರಗೊಳಿಸುವ ಹುನ್ನಾರ ನಡೆಸುತ್ತಿದೆ. ಕೂಡಲೇ ಡಿಕೆ ಪಟಾಲಂ ಅನ್ನು ಬಂಧಿಸಿ ಓಮಿಕ್ರಾನ್ ಯಾತ್ರೆಯನ್ನು ಹತ್ತಿಕ್ಕಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಒತ್ತಾಯಿಸಿದರು.

ನಗರದ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಅಮಾಯಕ ಜನರನ್ನು ಕರೆಸಿ ಕೊರೋನಾ ಹರಡುವ ಕೆಲಸ ಮಾಡುತ್ತಿದ್ದಾರೆ. ಇದು ನೀರಿಗಾಗಿ ಯಾತ್ರೆಯಾಗದೆ ಓಮಿಕ್ರಾನ್ ಹರಡುವ ಯಾತ್ರೆ ಯಂತಾಗಿದೆ. ಸರ್ಕಾರ ಯೋಜನೆ ಅನುಷ್ಠಾನಕ್ಕೆ ಬದ್ಧವಾಗಿದ್ದು, ಕಾನೂನು ಹೋರಾಟ ಮಾಡುತ್ತಿದ್ದೇವೆ. ನ್ಯಾಯಾಲಯದ ಅನುಮತಿ ಬೇಕಿದೆ. ರಾಜಕೀಯ ದುರುದ್ದೇಶದಿಂದ ಮಾಡಿರುವ ಹೋರಾಟ ಇದಾಗಿದೆ ಎಂದು ತಿಳಿಸಿದರು.

ಸರ್ಕಾರ ಯಾತ್ರೆಗೆ ಹೆಚ್ಚಿನ ಮಾನ್ಯತೆ ನೀಡಿರಲಿಲ್ಲ. ಆದರೀಗ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಕೂಡಲೇ ಡಿಕೆಶಿ ಪಟಾಲಂ ಬಂಧಿಸಬೇಕು. ಸಿದ್ದರಾಮಯ್ಯ ಮೇಲೆ ಅಭಿಮಾನ ಇತ್ತು. ಡಿಕೆ ಜತೆ ಸೇರಿ ಅದನ್ನು ಕಳೆದುಕೊಂಡಿದ್ದಾರೆ. ಈ ಮೊದಲು ಸಿದ್ದರಾಮಯ್ಯ ತಮ್ಮ ಸರ್ಕಾರ ದಲ್ಲಿ ಡಿಕೆಶಿಯನ್ನು ಕ್ಯಾಬಿನೆಟ್ ನಲ್ಲಿ ತೆಗೆದುಕೊಂಡಿರಲಿಲ್ಲ. ರಾಜಕೀಯ ಪಿತೂರಿ ಮಾಡಿ ಕ್ಯಾಬಿನೆಟ್ ಸೇರಿದರು. ಈಗ ಸಿದ್ದರಾಮಯ್ಯ ಅವರಿಗೂ ಅರಿವಾಗಿ ಅರ್ಧ ದಾರಿಗೆ ಬಂದು ವಾಪಸ್ಸಾಗುತ್ತಿದ್ದಾರೆ ಎಂದರು.

ಕಾಂಗ್ರೆಸ್ ನದು ರಾಜಕೀಯ ಅನುಕೂಲ ಪಾದಯಾತ್ರೆ. ಯಾತ್ರೆಗೆ ಆಗಮಿಸಿರುವ ಜನಸಾಮಾನ್ಯರನ್ನು ಎಲ್ಲಿದರೂ ಅಲ್ಲಿ ಬಂಧಿಸಬೇಕು. ಸರ್ಕಾರ ಪಾದಯಾತ್ರೆ ಬಲವಂತವಾಗಿ ಹತ್ತಿಕ್ಕಬೇಕು. ಮೈಸೂರು ಮತ್ತು ಮಂಡ್ಯ ಭಾಗದ ಜನರು ಸೌಹಾರ್ದಯುತವಾಗಿದ್ದಾರೆ. ಯಾತ್ರೆ ಅಂದರೆ ಜನಪರ ಧ್ವನಿ ಇರುತ್ತದೆ. ಭಾವನಾತ್ಮಕ ಸಂಬಂಧ ಇರುತ್ತದೆ. ಅದ್ಯಾವುದು ಯಾತ್ರೆಯಲ್ಲಿ ಕಾಣುತ್ತಿಲ್ಲ ಎಂದು ಟೀಕಿಸಿದರು.

ಯಾತ್ರೆ ತಡೆಯದಿರುವುದು ಸರ್ಕಾರದ ದೌರ್ಬಲ್ಯ ಅಲ್ಲ. ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ಡಿಕೆ ಸಹೋದರರು ಕ್ರಿಮಿನಾಲಜಿ ಉಳ್ಳವರು. ಇದಕ್ಕೆಲ್ಲ ಹೆದರುವವರಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ಕಾವೇರಿ ಭಾಗದಲ್ಲಿ ಅನೇಕ ಯೋಜನೆ ತರಬಹುದಿತ್ತು. ಸೋರಿಕೆ ನೀರಿನಿಂದ ಕೆರೆ ತುಂಬಿಸಬಹುದಿತ್ತು. ಅದ್ಯಾವುದನ್ನು ಮಾಡಲಿಲ್ಲ ಎಂದು ಹರಿಹಾಯ್ದರು.

ಡಿಕೆ ಬ್ರದರ್ಸ್‌ ಸಿದ್ದರಾಮಯನವರ ಮೇಲೆ ಶಕ್ತಿ ಸಾಧಿಸಲು ಹೊರಟಿದ್ದಾರೆ. ಸರ್ಕಾರ ಯಾತ್ರೆಯನ್ನು ತಡೆಯುವ ಆಶಾಭಾವನೆ ಇದೆ. ಸರ್ಕಾರ ಮತ್ತು ಕಾಂಗ್ರೆಸ್ ಜತೆ ಮ್ಯಾಚ್ ಫಿಕ್ಸಿಂಗ್ ಆಗಿಲ್ಲ. ರಾಜಕೀಯವಾಗಿ ಹೋರಾಟ ಮಾಡಿಕೊಂಡು ಬಂದವರಿಗೆ ಅದೆಲ್ಲಾ ಬೇಕಿಲ್ಲ. ಡಿಕೆ ಸಹೋದರರು ಕಾಂಗ್ರೆಸ್   ಪಕ್ಷವನ್ನೇ ಹೈಜಾಕಗ ಮಾಡಿದ್ದಾರೆ. ಅವರದು ನಾಟಕ ಮಂಡಳಿ. ಬೇರೆ ಜಿಲ್ಲೆಗಳಿಂದ ಹಣ ನೀಡಿ ಜನರನ್ನು ಕರೆಸಿ ದೊಂಬರಾಟ ಮಾಡುತ್ತಿದ್ದಾರೆ. ಇವತ್ತು ಯಾತ್ರೆ ತಡೆಯದಿದ್ದರೆ ದುರ್ಬಲ ಸರ್ಕಾರವೆಂದು ನಾನೇ ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದರು.

ಈಗಲೇ ಯಾತ್ರೆ ತಡೆಯುವ ಕುರಿತು ಮುಖ್ಯಮಂತ್ರಿ ಹಾಗೂ ಸಚಿವರ ಜತೆ ಚರ್ಚೆ ಮಾಡುತ್ತೇನೆ. ಸರ್ಕಾರ ತಡೆಯದಿದ್ದರೆ ಬಿಜೆಪಿ ಕಾರ್ಯಕರ್ತರೇ ಬೀದಿಗಿಳಿದು ಹೋರಾಟ ನಿಲ್ಲಿಸುತ್ತೇವೆ ಎಂದು ಯೋಗೇಶ್ವರ್ ಎಚ್ಚರಿಕೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು