News Kannada
Tuesday, November 29 2022

ರಾಮನಗರ

15 ದಿನ ಶಾಲಾ‌-ಕಾಲೇಜು ಬಂದ್​ ಮಾಡಿ: ಸರ್ಕಾರಕ್ಕೆ ಕುಮಾರಸ್ವಾಮಿ ಸಲಹೆ - 1 min read

Photo Credit : News Kannada

ರಾಮನಗರ: ದಿನದಿಂದ ದಿನಕ್ಕೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸರ್ಕಾರ 15 ದಿನ ಶಾಲಾ‌-ಕಾಲೇಜುಗಳನ್ನು ಬಂದ್​ ಮಾಡಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್​ಡಿಕೆ, ಶಾಲಾ-ಕಾಲೇಜು ಹಾಗೂ ವಸತಿ ಶಾಲೆಗಳಲ್ಲಿ ಕರೊನಾ ಪ್ರಕರಣ ಹೆಚ್ಚಾಗ್ತಿದೆ.

ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮತ್ತು ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಜೀವಕ್ಕೆ ತೊಂದರೆ ಇಲ್ಲದಿದ್ರೂ ಪ್ಯಾನಿಕ್ ಆಗ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳನ್ನ ಬಂದ್ ಮಾಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ರಜೆ ಕೊಟ್ಟು ವಸತಿ ಶಾಲೆಗಳನ್ನು ಬಂದ್ ಮಾಡಬೇಕು. ನಿಮ್ಮ ಮುಂದೆ ವಾಸ್ತವಾಂಶದ ವರದಿ ಇದೆ. ಆ ಮಾಹಿತಿಗಳ ಆಧಾರದ ಮೇಲೆ ನೀವು ನಿರ್ಣಯ ತೆಗೆದುಕೊಳ್ಳಬೇಕು. ಈಗಾಗಲೇ ಅನೇಕ ಶಾಲಾ-ಕಾಲೇಜುಗಳಲ್ಲಿ ಪಾಸಿಟಿವ್ ರೇಟ್ ಜಾಸ್ತಿಯಾಗಿದೆ.

ಲಾಕ್​ಡೌನ್ ವಿಚಾರದಲ್ಲಿ ಬಿಜೆಪಿ ನಾಯಕರಲ್ಲೇ ಸಮನ್ವಯತೆ ಇಲ್ಲ. ಸಾರ್ವಜನಿಕರ ಒಂದು ವರ್ಗ ಪ್ರತಿನಿತ್ಯ ವ್ಯಾಪಾರ ಹಾಗೂ ಕೂಲಿ ಕೆಲಸ ಮಾಡುತ್ತಾರೆ. ಅಂತಹವರ ಕುಟುಂಬದ ನಿರ್ವಹಣೆ ಅವರ ಒಂದು ದಿನದ ಆದಾಯದ ಮೇಲೆ ನಿಂತ್ತಿರುತ್ತೆ. ವಿಕೇಂಡ್ ಕರ್ಫ್ಯೂ ಇಲ್ಲ, ವಿಕೇಂಡ್ ಲಾಕ್​ಡೌನ್ ಮಾಡುವುದರಿಂದ ಅಂತಹವರಿಗೆ ಕಷ್ಟ ಆಗುತ್ತೆ. ಅವರಿಗೆಲ್ಲ ಬದುಕು ಕಟ್ಟುವುದು ಸರ್ಕಾರದ ಜವಬ್ದಾರಿ. ಈ ಮಾತನ್ನ ವಿರೋಧ ಪಕ್ಷದ ನಾವು ಹೇಳಿದ್ರೆ ಅವರಿಗೇನು ಮಾತನಾಡುತ್ತಾರೆ ಎಂದು ನಮ್ಮ ಮೇಲೆ ಆರೋಪ ಮಾಡುತ್ತಾರೆ. ನಾವು ಕೂಡ ಸರ್ಕಾರ ನಡೆಸಿದವರೇ. ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಬೇಕೆಂಬುದು ನಮ್ಮ ಉದ್ದೇಶ ಅಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು

See also  ಆಕ್ಸಿಜನ್ ಘಟಕ ಲೋಕರ್ಪಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12795
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು