News Kannada
Sunday, September 25 2022

ರಾಮನಗರ

ಯಾದವರ ಅಭಿವೃದ್ಧಿಗೆ ಶಿಕ್ಷಣವೇ ಮಂತ್ರ: ನಾಗರಾಜಯಾದವ್ - 1 min read

Education is mantra for development of Yadavas: Nagaraj Yadav
Photo Credit : By Author

ರಾಮನಗರ: ಯಾದವ(ಗೊಲ್ಲ) ಸಮುದಾಯದ ಅಭಿವೃದ್ಧಿಗೆ ಶಿಕ್ಷಣವೇ ಮೂಲ ಮಂತ್ರ. ಈ ಜನಾಂಗದಲ್ಲಿ ಪ್ರತಿಯೊಂದು ಕುಂಟುಂಬದ ಮಕ್ಕಳಿಗೂ ಶಿಕ್ಷಣ ನೀಡುವುದು ಕಡ್ಡಾಯವಾಗಲಿ ಎಂದು ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ್ ಹೇಳಿದ್ದಾರೆ.

ನಗರದ ಹಳೇ ಬಸ್‌ನಿಲ್ದಾಣದ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಯಾದವ ಸಂಘದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶ್ರೀ ಕೃಷ್ಣ ಜಯಂತೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಜನಾಂಗದ ಶೈಕ್ಷಣಿಕ ಪ್ರಗತಿ ಮತ್ತು ರಾಜಕೀಯ ಶಕ್ತಿಯಿಂದ ಮಾತ್ರ ಯಾದವ(ಗೊಲ್ಲ)ಸಮುದಾಯದ ಉನ್ನತಿ ಸಾಧ್ಯ. ಗೊಲ್ಲ ಸಮುದಾಯದಲ್ಲಿ ಹಾಸುಹೊಕ್ಕಿರುವ ಹಿಂಜರಿಕೆ ಹಾಗೂ ಕೆಲವು ಕಂದಚಾರಗಳು ಅಭಿವೃದ್ಧಿಗೆ ತೊಡಕಾಗಿವೆ. ವಿದ್ಯಾಭ್ಯಾಸ ಮತ್ತು ತಿಳುವಳಿಕೆ ಕೊರತೆಯಿಂದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಗೊಲ್ಲ ಸಮುದಾಯವು ಸರಕಾರದ ಸೌಲಭ್ಯಗಳಿಂದ ವಂಚಿತವಾಗಿದೆ ಎಂದರು.

ಯಾದವ ಜನಾಂಗವು ಇಡೀ ದೇಶದಲ್ಲಿನ ಒಟ್ಟು ಜನಸಂಖ್ಯೆಯ ಪೈಕಿ ಶೇ.25 ರಷ್ಟು ಪ್ರಮಾಣದಷ್ಟಿದ್ದರೂ ದೇಶದಾಧ್ಯಂತ ಹರಿದು ಹಂಚಿ ಹೋಗಿದೆ. ಆರ್ಥಿಕ ಶೈಕ್ಷಣಿಕ ಮತ್ತು ರಾಜಕೀಯ ಸ್ಥಾನ ಮಾನ ಪಡೆದುಕೊಳ್ಳುವಲ್ಲಿ ಹಿಂದುಳಿದಿದೆ. ಉತ್ತರ ಕರ್ನಾಟಕ ಭಾಗದ ಕೆಲವು ಜಿಲ್ಲೆಗಳಲ್ಲಿ ಗೊಲ್ಲ ಸಮುದಾಯ ಇಂದಿಗೂ ಹೀನಾಯ ಸ್ಥಿತಿಯಲ್ಲಿದೆ. ಗೊಲ್ಲ ಸಮುದಾಯದ ಒಗ್ಗೂಡಿಕೆಗೆ ನಾವೆಲ್ಲರೂ ದೃಢ ಸಂಕಲ್ಪ ಮಾಡಬೇಕಿದೆ. ಬದಲಾವಣೆ ಜಗದ ನಿಯಮ ಹೀಗಾಗಿ ಸಮುದಾಯದ ಹೆಣ್ಣು ಮಕ್ಕಳು ಹೆಚ್ಚು ವಿದ್ಯಾವಂತರಾಗಬೇಕು ಎಂದು ನುಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಮಾತನಾಡಿ, ಕುರುಕ್ಷೇತ್ರ ಯುದ್ದದಲ್ಲಿ ಶ್ರೀಕೃಷ್ಣ ಧರ್ಮರಾಜ್ಯ ಸ್ಥಾಪನೆಗಾಗಿ ಪಾಂಡವರ ಪರ ನಿಲ್ಲುವ ನಿರ್ಧಾರ ಮಾಡಿದ್ದರು. ದುಷ್ಟ ಶಿಕ್ಷಣೆ, ಶಿಷ್ಠ ರಕ್ಷಣೆ ಶೀಕೃಷ್ಣ ಪರಮಾತ್ಮನ ಧ್ಯೇಯವಾಗಿದೆ. ಅನ್ಯಾಯ ಅಕ್ರಮಗಳು ಮಿತಿ ಮೀರಿದಾಗ ಸಂಭವಾಮಿ ಯುಗೇ ಯುಗೇ ಎನ್ನುವಂತೆ ಯಾವುದಾದರೂ ರೂಪದಲ್ಲಿ ಅವತರಿಸುತ್ತಾನೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಕೃಷ್ಣ ಯಾದವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಕೃಷ್ಣನು ಆಧುನಿಕ ಜಗತ್ತಿಗೆ ಅತ್ಯಾವಶ್ಯಕವಾದ ಅಂಶಗಳನ್ನು ಗೀತೆಯ ಮೂಲಕ ಜಗತ್ತಿಗೆ ತಿಳಿಸಿದ ಯುಗಪುರುಷ. ಮನುಜರಾದ ನಾವು ಕರ್ತವ್ಯವನ್ನು ಕಾಯಾ, ವಾಚಾ ಮನಸಾ ಮಾಡಿದಾಗ ಸನ್ಮಾರ್ಗದ ಜತೆಗೆ ಮುಕ್ತಿಯನ್ನು ಪಡೆಯಬಹುದಾಗಿದೆ. ಶ್ರೀ ಕೃಷ್ಣನ ಗೀತೋಪದೇಶದಿಂದ ಮನುಷ್ಯರಲ್ಲಿ ಕೆಲವು ಸದ್ಗುಣಗಳು ಬೆಳೆಯಲಿವೆ ಎಂದರು. ಶ್ರೀ ಕೃಷ್ಣನ ಅವತಾರ ಮತ್ತು ಪರೋಪಕಾರಿ ಗುಣಗಳ ಬಗ್ಗೆ ಅವರು ಬೆಳಕು ಚೆಲ್ಲಿದರು.

ನಗರಸಭೆ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ, ಕರ್ನಾಟಕ ರೇಷ್ಮೆ ಉದ್ದಿಮೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೌತಮ್‌ಗೌಡ, ಬಿಜೆಪಿ ಮಹಿಳಾ ಮುಖಂಡರಾದ ಪ್ರೇಮನಾಗಯ್ಯ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಮುದಾಯದ ಮುಖಂಡರನ್ನು ಅಭಿನಂದಿಸಿ ಗೌರವಿಸಲಾಯಿತು. ಪುಟಾಣಿಗಳು ಶ್ರೀ ಕೃಷ್ಣ ಮತ್ತು ರಾಧೆಯ ವೇಷಧಾರಿಗಳಾಗಿ ಗಮನ ಸೆಳೆದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಜಿಲ್ಲಾ ವಕ್ತಾರ ಬಿ.ಉಮೇಶ್, ಜಿಲ್ಲಾ ಯಾದವ ಸಂಘದ ಕಾರ್ಯಾಧ್ಯಕ್ಷ ಮಹದೇವಣ್ಣ, ಉಪಾಧ್ಯಕ್ಷ ಸಿ.ಎನ್.ನಾಗರಾಜ ಯಾದವ್, ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಎಂ.ಎನ್.ರಾಜು ಯಾದವ್, ಮುಖಂಡರಾದ ಗೋವಿಂದರಾಜು, ನರಸಿಂಹಯ್ಯ, ರಾಜು ಯಾದವ್, ಮಧು ಯಾದವ್ ಮುಂತಾದವರು ಉಪಸ್ಥಿತರಿದ್ದರು.

See also  ಉಜಿರೆ: ಎಸ್.ಡಿ.ಯಂ. ಕಾಲೇಜಿನ ವಿದ್ಯಾರ್ಥಿಗಳಿಂದ 'ಗ್ರಾಮ ಸ್ವರಾಜ್' ಕಾರ್ಯಕ್ರಮ

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಮಹಿಳೆಯರ ಪೂರ್ಣಕುಂಭಗಳು ಹಾಗೂ ಜಾನಪದ ಕಲಾ ತಂಡಗಳೊಂದಿಗೆ ಶ್ರೀಕೃಷ್ಣನ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಮೆರವಣಿಗೆಯ ಮೂಲಕ ವೇದಿಕೆಗೆ ತರಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು