ರಾಮನಗರ: ಕಾರ್ಖಾನೆಯಲ್ಲಿ ಅಡಗಿದ್ದ ಸುಮಾರು ಏಳೂವರೆ ಉದ್ದದ ಕೇರೆ ಹಾವನ್ನು ಉರಗ ಪ್ರೇಮಿ ಸ್ನೇಕ್ ಗಿರಿಧರ್ ಸುರಕ್ಷಿತವಾಗಿ ಸೆರೆ ಹಿಡಿದು ರಕ್ಷಣೆ ಮಾಡಿದ್ದಾರೆ.
ಬಿಡದಿಯ ಅಬ್ಬನಕುಪ್ಪೆ ಸಮೀಪ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಾರ್ಖಾನೆಯಲ್ಲಿ ದಿಢೀರ್ ಬೃಹತ್ ಗಾತ್ರ ಮತ್ತು ಉದ್ದದ ಕ್ಯಾರೆ ಹಾವು ಕಾಣಿಸಿಕೊಂಡಿದೆ. ಇದರಿಂದ ಕಾರ್ಮಿಕರು ಆತಂಕಗೊಡಿದ್ದು ತಕ್ಷಣವೇ ಭೈರಮಂಗಲ ಗ್ರಾಮದ ವಾಸಿ ಉರಗ ಪ್ರೇಮಿ ಸ್ನೇಕ್ ಗಿರಿಧರ್‌ಗೆ ವಿಷಯ ತಿಳಿಸಿದರು. ತಕ್ಷಣವೇ ಬಂದು ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಸೆರೆ ಹಿಡಿದರು. 5 ಕೆ.ಜಿ ತೂಕ ಇರುವ ಕ್ಯಾರೆ ಹಾವನ್ನು ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಡುವುದಾಗಿ ತಿಳಿಸಿದರು.
ಯಾವುದೇ ಜಾತಿಯ ಹಾವುಗಳ ಕಂಡರೂ ಅವುಗಳನ್ನು ಕೊಲ್ಲದೆ ಸುರಕ್ಷಿತವಾಗಿ ಸೆರೆ ಹಿಡಿಯಲು ಸಹಕರಿಸಬೇಕು. ಮನುಷ್ಯನಷ್ಟೇ ಉರಗಗಳಿಗೂ ಭಯವಿರುತ್ತದೆ ಅವುಗಳಿಗೆ ಕಿರುಕುಳ ಕೊಟ್ಟರೆ ರಕ್ಷಣೆಗಾಗಿ ಅವು ನಮಗೂ ತೊಂದರೆ ಕೊಡುತ್ತವೆ. ಆದ್ದರಿಂದ ಹಾವುಗಳು ಕಂಡಾಗ ತಕ್ಷಣವೇ ನನ್ನ ಹೆಲ್ಪ್ ಲೈನ್ 8296485915 ಈ ಸಂಖ್ಯೆಗೆ ಕರೆ ಮಾಡುವಂತೆ ಸ್ನೇಕ್ ಗಿರಿಧರ್ ಮನವಿ ಮಾಡಿದರು.