News Kannada
Saturday, January 28 2023

ರಾಮನಗರ

ರಾಮನಗರ: “ಸ್ಕೈಟಿಲ್ಟ್” ಹೊಸ ಥ್ರಿಲ್ ರೈಡ್ ಗೆ ಮೇಘನಾ ರಾಜ್ ಚಾಲನೆ

Meghana Raj launches 'Skytilt' new thrill ride
Photo Credit : By Author

ರಾಮನಗರ: ಬಿಡದಿಯ ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್‌ನಲ್ಲಿ ಪ್ರಾರಂಭಿಸಿರುವ “ಸ್ಕೈಟಿಲ್ಟ್” ಎಂಬ ಹೊಸ ಥ್ರಿಲ್ ರೈಡ್ ಗೆ ಚಿತ್ರನಟಿ ಮೇಘನಾ ರಾಜ್ ಚಾಲನೆ ನೀಡಿದರು.

ವಂಡರ್ ಲಾ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಆರಂಭಗೊಂಡ “ಸ್ಕೈಟಿಲ್ಟ್” ಹೊಸ ರೈಡ್‌ನ ಥ್ರಿಲ್ ಅನುಭವಿಸುವ ಮೂಲಕ ಚಾಲನೆ ನೀಡಿದ ನಟಿ ಮೇಘನಾ ರಾಜ್ ಅವರು ಮಾತನಾಡಿ, ಬಾಲ್ಯದಿಂದಲೂ ಪೋಷಕರೊಂದಿಗೆ ಭೇಟಿ ಕೊಡುತ್ತಿದ್ದ ವಂಡರ್ ಲಾ ದಂತಹ ಪ್ರತಿಷ್ಠಿತ ಮನರಂಜನಾ ಪಾರ್ಕ್‌ನಲ್ಲಿ ನೂತನ ರೈಡ್ ಉದ್ಘಾಟಿಸಿದ್ದು ತಮಗೆ ಅತ್ಯಂತ ಸಂತಸ ತಂದಿದೆ. ಈ ರೈಡ್ ರೋಮಾಂಚಕ ಅನುಭವ ಬಯಸುವ ಜನರಿಗೆ ಉತ್ಸಾಹ ಹೆಚ್ಚಿಸಲಿದ್ದು ಪ್ರತಿಯೊಬ್ಬರಿಗೂ ಇಷ್ಟವಾಗಲಿದೆ ಎಂದರು.

ಪ್ರವಾಸಿಗರು ಹೆಚ್ಚಿನ ಮನರಂಜನೆ ಸಿಗುವ ಹಾಗೂ ಖುಷಿ ಪಡುವ ರೈಡನ್ನು ನಿರೀಕ್ಷೆ ಮಾಡುತ್ತಾರೆ. ಅದರಂತೆ “ಸ್ಕೈಟಿಲ್ಟ್” ಥ್ರಿಲ್ಲಿಂಗ್ ಅನುಭವ ನೀಡುವ ಇತರ ಮನರಂಜನಾ ಗೇಮ್ ಗಳಲ್ಲಿ ಒಂದಾಗಿ ಸೇರ್ಪಡೆಯಾಗಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಈ ಹೊಸ ರೈಡ್ ಅನ್ನು ವಂಡರ್ ಲಾ ಸಂಸ್ಥೆ ಪರಿಚಯಿಸುತ್ತಿದೆ. ಇದರಿಂದ ಪ್ರವಾಸಿಗರು ಹೆಚ್ಚಿನ ಮನರಂಜನೆ ಪಡೆಯಲಿದ್ದಾರೆ ಎಂದು ತಿಳಿಸಿದರು.

ವಂಡರ್ ಲಾ ಹಾಲಿಡೇಸ್ ಲಿ.ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ.ಚಿಟ್ಟಲಪಿಲ್ಲಿ ಅವರು ಮಾತನಾಡಿ, ಪ್ರವಾಸಿಗರನ್ನು ರಂಜಿಸುವ ಉದ್ದೇಶದಿಂದ ಹಿಂದಿನಿಂದಲೂ ವಂಡರ್ ಲಾ ವಿನೂತನ ರೈಡ್‌ಗಳನ್ನು ಪರಿಚಯಿಸುತ್ತಿದೆ. ವಂಡರ್‌ಲಾ ಪಾರ್ಕ್‌ನಲ್ಲಿ ವಾಟರ್ ಮತ್ತು ಡ್ರೈ ಗೇಮ್ ಸೇರಿದಂತೆ ಒಟ್ಟು 62 ರೈಡ್‌ಗಳಿವೆ. ಈಗ ಕ್ರಿಸ್‌ಮಸ್ ಆಚರಣೆ ಅಂಗವಾಗಿ ಡಿ.24 ರಿಂದ ಜನವರಿ 1ರವರೆಗೆ ಲೈವ್ ಶೋ, ಆಹಾರ ಉತ್ಸವ ಹಾಗೂ ಡಿಜೆ ಸೇರಿದಂತೆ ಮುಂತಾದ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.

ಇದೀಗ ಉದ್ಘಾಟನೆಗೊಂಡ “ಸ್ಕೈಟಿಲ್ಟ್” ರೈಡ್‌ಗೆ ಹಸರಿಡಲು ಸಾಮಾಜಿಕ ಜಾಲತಾಣದಲ್ಲಿ ಸ್ಪರ್ಧೆಯಿಡಲಾಗಿತ್ತು. ಅಂತಿಮವಾಗಿ ಕೆ.ಹಂಸಿನಿ ಎಂಬುವರು ನೀಡಿದ ಹೆಸರನ್ನು ನಾಮಕರಣ ಮಾಡಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದ ಹಂಸಿನಿ ಅವರಿಗೆ ವರ್ಷಪೂರ್ತಿ ವಂಡರ್‌ಲಾ ಗೆ ಭೇಟಿ ನೀಡುವ ಉಚಿತ ವಾರ್ಷಿಕ ಪಾಸ್ ನೀಡಲಾಗಿದೆ. ಸ್ಕೈಟಿಲ್ಟ್ ರೈಡ್ ಅನ್ನು 14 ಅಂತಸ್ತಿನ ಸ್ಕೈವೀಲ್ ಟವರ್ ಮೇಲ್ಬಾಗದಲ್ಲಿ ಸ್ಥಾಪಿಸಲಾಗಿದ್ದು, ಗಾಜಿನ ಗೋಡೆ ಹಿಡಿದು ಎತ್ತರದ ಕಟ್ಟಡದಿಂದ ಓರೆಯಾಗಿ ವಾಲುತ್ತಾ ಥ್ರಿಲ್ ಅನುಭವಿಸಬಹುದು ಎಂದು ರೈಡ್ ಬಗ್ಗೆ ವಿವರಿಸಿದರು.

ಎರಡು ವರ್ಷ ಬೇಸಿಗೆ ಸಮಯದಲ್ಲಿ ಕೊರೋನಾ ಸಂಕಷ್ಟದ ಸಮಯವನ್ನು ಕಂಡಿದ್ದೇವೆ. ಇದೀಗ ಸುಧಾರಣೆ ಕಾಣುತ್ತಿದ್ದು ಜನರು ಹೆಚ್ಚಿ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಈ ವರ್ಷ ನಾವು ಬೇಸಿಗೆ ಸಮಯದಲ್ಲಿ ಪ್ರವಾಸಿಗರ ಆಕರ್ಷಣೆ ಮತ್ತು ಹೆಚ್ಚಿನ ಮನರಂಜನೆ ನೀಡುವ ಉದ್ದೇಶದಿಂದ ಹೊಸ ಥ್ರಿಲ್ ರೈಡ್ ಪರಿಚಯಿಸುವ ಮೂಲಕ ಜನರ ನಿರೀಕ್ಷೆಗಳನ್ನು ಪರಿಪೂರ್ಣ ಮಾಡಲು ಪ್ರಯತ್ನಸುತ್ತಿದ್ದೇವೆ. ಅದನ್ನು ಗಮನದಲ್ಲಿರಿಸಿಕೊಂಡು ಈ ಹೊಸ ರೈಡ್ ಆರಂಭಿಸಿ ಮನರಂಜನೆ ನೀಡುತ್ತಿದ್ದೇವೆ ಎಂದು ಹೇಳಿದರು.

See also  ರಾಮನಗರ: ಪಡಿತರ ಚೀಟಿಯಲ್ಲಿ ಯೇಸುಕ್ರಿಸ್ತ, ಲಕ್ಷ್ಮಿ ದೇವಿಯ ಚಿತ್ರ, ಭುಗಿಲೆದ್ದ ವಿವಾದ

ಈ ವೇಳೆ ವಂಡರ್ ಲಾ ಅಮ್ಯೂಸ್‌ಮೆಂಟ್ ಪಾರ್ಕ್‌ನ ಮ್ಯಾನೇಜರ್ ರುದ್ರೇಶ್ ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು