News Kannada
Monday, November 28 2022

ತುಮಕೂರು

ತುಮಕೂರು:ಕರಡಿಯನ್ನು ಕೊಂದು ತಿಂದ 6 ಮಂದಿ ಅರೆಸ್ಟ್ - 1 min read

Photo Credit :

ತುಮಕೂರು: ಕೊರಟಗೆರೆ ಸಮೀಪದ ಗೌಜಗಲ್ಲು ಗ್ರಾಮದಲ್ಲಿ ಕರಡಿಯನ್ನು ಕೊಂದು ತಿಂದ ಮತ್ತು ಕೃತ್ಯಕೆಕ ಸಹಕಾರ ನೀಡಿದ ಆರು ಮಂದಿಯನ್ನು ಬಂಧಿಸಲಾಗಿದೆ.ಮಾಹಿತಿಯ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಚಿಕ್ಕಬಸಯ್ಯನ ಮನೆಯ ಮೇಲೆ ದಾಳಿ ಮಾಡಿದಾಗ ಕರಡಿ ಮಾಂಸ ಪತ್ತೆಯಾಗಿದೆ.

ಗೌಜಗಲ್ಲು ಗ್ರಾಮದ ಚಿಕ್ಕಬಸವಯ್ಯ, ಯತೀಶ, ನಾಗರಾಜ, ಶ್ರೀಧರ್, ರಾಮಯ್ಯ ಮತ್ತು ರಾಜಣ್ಣ ಬಂಧಿತ ಆರೋಪಿಗಳು ಎಂದು ಹೇಳಲಾಗಿದೆ.

ಕರಡಿಯನ್ನು ಬೇಟೆಯಾಡಿ ತಿಂದು ಉಳಿದ ಮಾಂಸವನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಮತ್ತು ಇದಕ್ಕೆ ಸಹಕರಿಸಿದ ಆರೋಪದ ಮೇಲೆ ಈ ಆರು ಮಂದಿಯನ್ನು ಬಂಧಿಸಲಾಗಿದೆ.ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಶೀಲನೆ ನಡೆಸಿದಾಗ, ಜಮೀನಿನ ಬಂಡೆಯ ಮೇಲೆ ಕರಡಿಯನ್ನು ಕೊಂದು ಮಾಂಸಕ್ಕಾಗಿ ಬೇರ್ಪಡಿಸಿರುವುದು ಗೊತ್ತಾಗಿದೆ. ಕರಡಿಯ ಮುಂಗಾಲು, ನಾಲಗೆ, ಬಾಲ, ಕೂದಲು, ಉಗುರು, ಕತ್ತರಿಸಲು ಬಳಸಿದ ಮಚ್ಚು ಪತ್ತೆಯಾಗಿದೆ.

See also  50 ಲಕ್ಷ ರೂಪಾಯಿ ದುರುಪಯೋಗ ಶಂಕೆ ; ವರ್ಗಾವಣೆಗೊಂಡ 23 ದಿನದಲ್ಲೇ ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12795
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು