ಕೊರಟಗೆರೆ: ಯುವಕನೊಬ್ಬ ಅತ್ಯಚಾರವೆಸಗಿದ ಪರಿಣಾಮ ಅಪ್ರಾಪ್ತ ವಯಸ್ಕ ಬಾಲಕಿ ಗರ್ಭಿಣಿಯಾದ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಮನೋಜ್ ಎಂದು ಗುರುತಿಸಲಾಗಿದೆ.
ಕಸಬಾ ಹೋಬಳಿಯ ಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯು, ಸುಮಾರು ಆರು ತಿಂಗಳಿಂದ ಕಾಲೇಜಿಗೆ ಹೋಗುವುದನ್ನು ನಿಲ್ಲಿಸಿದ್ದಳು ಎಂದು ತಿಳಿದು ಬಂದಿದೆ.
ಇತ್ತಿಚಿಗೆ ಬಾಲಕಿಯು ತಲೆನೋವು ಮತ್ತು ಜ್ವರದಿಂದ ಬಳಲುತ್ತಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿದಾಗ ಮೂರುವರೆ ತಿಂಗಳ ಗರ್ಭಿಣಿ ತಿಳಿದು ಬಂದಿದೆ.
ನೀನು ಗರ್ಭಿಣಿಯಾಗಲು ಯಾರು ಕಾರಣ ಎಂದು ಕೇಳಿದಾಗ, ಸುಮಾರು ಆರು ತಿಂಗಳ ಹಿಂದೆ ಮನೋಜ್ ಎಂಬುವನು ಪೋನ್ ಮೂಲಕ ಪರಿಚಯವಾಗಿ, ಆಗಾಗ್ಗೆ ಮಾತನಾಡುತ್ತಿದ್ದ, ನಾಲ್ಕು ತಿಂಗಳ ಹಿಂದೆ ಭೇಟಿ ಯಾಗುವಂತೆ ಹೇಳಿದ್ದ. ತೋಟದ ಹತ್ತಿರ ಬಂದು, ಪಕ್ಕದಲ್ಲಿದ್ದ ಹಳ್ಳದೊಳಗೆ ಕರೆದು ಕೊಂಡು ಹೋಗಿ ಬಲವಂತ ಮಾಡಿದ್ದು, ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ನಿನಗೊಂದು ಗತಿ ಕಾಣಿಸುತ್ತೇನೆಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಬೈಲಮ್ಮ ನೀಡಿದ ದೂರಿನ ಮೇರೆಗೆ ಕೊರಟಗೆರೆ ಪೋಲೀಸ್ ಠಾಣೆಯಲ್ಲಿ ಪೋಕ್ಸೋ ಅಡಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.