News Kannada
Saturday, December 03 2022

ತುಮಕೂರು

ಕೊರಟಗೆರೆ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ಆರೋಪಿಯ ಬಂಧನ

A man lifted a student who was on her way to a madrassa and threw her on the ground.
Photo Credit : Pixabay

ಕೊರಟಗೆರೆ: ಯುವಕನೊಬ್ಬ ಅತ್ಯಚಾರವೆಸಗಿದ ಪರಿಣಾಮ ಅಪ್ರಾಪ್ತ ವಯಸ್ಕ ಬಾಲಕಿ ಗರ್ಭಿಣಿಯಾದ  ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಮನೋಜ್ ಎಂದು ಗುರುತಿಸಲಾಗಿದೆ.

ಕಸಬಾ ಹೋಬಳಿಯ ಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯು, ಸುಮಾರು ಆರು ತಿಂಗಳಿಂದ ಕಾಲೇಜಿಗೆ ಹೋಗುವುದನ್ನು ನಿಲ್ಲಿಸಿದ್ದಳು ಎಂದು ತಿಳಿದು ಬಂದಿದೆ.

ಇತ್ತಿಚಿಗೆ ಬಾಲಕಿಯು‌ ತಲೆನೋವು ಮತ್ತು ಜ್ವರದಿಂದ ಬಳಲುತ್ತಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿದಾಗ ಮೂರುವರೆ ತಿಂಗಳ ಗರ್ಭಿಣಿ ತಿಳಿದು ಬಂದಿದೆ.

ನೀನು ಗರ್ಭಿಣಿಯಾಗಲು ಯಾರು ಕಾರಣ ಎಂದು‌ ಕೇಳಿದಾಗ, ಸುಮಾರು ಆರು‌ ತಿಂಗಳ ಹಿಂದೆ ಮನೋಜ್‌ ಎಂಬುವನು ಪೋನ್ ಮೂಲಕ ಪರಿಚಯವಾಗಿ, ಆಗಾಗ್ಗೆ ಮಾತನಾಡುತ್ತಿದ್ದ, ನಾಲ್ಕು ತಿಂಗಳ ಹಿಂದೆ ಭೇಟಿ ಯಾಗುವಂತೆ ಹೇಳಿದ್ದ. ತೋಟದ ಹತ್ತಿರ ಬಂದು, ಪಕ್ಕದಲ್ಲಿದ್ದ ಹಳ್ಳದೊಳಗೆ ಕರೆದು ಕೊಂಡು ಹೋಗಿ ಬಲವಂತ ಮಾಡಿದ್ದು, ‌ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ನಿನಗೊಂದು ಗತಿ ಕಾಣಿಸುತ್ತೇನೆಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಬೈಲಮ್ಮ ನೀಡಿದ ದೂರಿನ ಮೇರೆಗೆ ಕೊರಟಗೆರೆ ಪೋಲೀಸ್ ಠಾಣೆಯಲ್ಲಿ ಪೋಕ್ಸೋ  ಅಡಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು‌, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

See also  ತುಮಕೂರು: ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಂದ ಪತ್ನಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು