News Kannada
Wednesday, February 08 2023

ತುಮಕೂರು

ತುಮಕೂರು: “ಕುವೆಂಪು: ಯುವ ಮಂಥನ” ಲೇಖನ ಸ್ಪರ್ಧೆಗೆ ಆಹ್ವಾನ

Photo Credit : By Author

ತುಮಕೂರು: ತುಮಕೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಪೀಠ ಹಾಗೂ ಬುಕ್ ಬ್ರಹ್ಮ ಸಂಸ್ಥೆ ಜಂಟಿಯಾಗಿ “ಕುವೆಂಪು: ಯುವ ಮಂಥನ” ಲೇಖನ ಸ್ಪರ್ಧೆಯನ್ನು ಆಯೋಜಿಸಿದೆ. ಕುವೆಂಪು ಅವರ ನಾಡು ನುಡಿ ಚಿಂತನೆ, ವೈಚಾರಿಕ ಪ್ರಜ್ಞೆ, ವೈಜ್ಞಾನಿಕ ದೃಷ್ಟಿ, ಅಧ್ಯಾತ್ಮಿಕ ಮನೋಧರ್ಮಗಳನ್ನು ಅರಿಯುವ ಬಗೆಗಳನ್ನು ಈ ಲೇಖನಗಳು ಒಳಗೊಂಡಿರಲಿ.

ನಿಯಮಗಳು:
ಲೇಖನಗಳು ವಿಮರ್ಶಾತ್ಮಕ ಒಳನೋಟಗಳನ್ನು ಹೊಂದಿರಬೇಕು. 2000 ಪದಗಳನ್ನು ಮೀರದಂತಿರಲಿ. ಲೇಖಕರ ವಯಸ್ಸು 35 ವರ್ಷಗಳನ್ನು ಮೀರದಂತಿರಬೇಕು. ಲೇಖನಗಳು ಎಲ್ಲಿಯೂ ಪ್ರಕಟವಾಗಿರಬಾರದು.

ಮೊದಲ ಬಹುಮಾನ 5 ಸಾವಿರ + 3 ಸಾವಿರ ಮೊತ್ತದ ಪುಸ್ತಕ, ಎರಡನೇ ಬಹುಮಾನ 3 ಸಾವಿರ+ 2 ಸಾವಿರ ಮೊತ್ತದ ಪುಸ್ತಕ, ಹಾಗೂ ಮೂರನೇ ಬಹುಮಾನ 2 ಸಾವಿರ + 1 ಸಾವಿರ ಮೊತ್ತದ ಪುಸ್ತಕಗಳನ್ನು ನೀಡಲಾಗುವುದು.

ಕುವೆಂಪು ಅವರ ಈ ಕೆಳಗಿನ ಲೇಖನಗಳನ್ನು ಆಧರಿಸಿ ಬರೆಯಿರಿ.
1. ವಿಚಾರಕ್ರಾಂತಿಗೆ ಆಹ್ವಾನ
2. ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ
3. ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ
4. ಸಂಸ್ಕೃತಿ ಕರ್ನಾಟಕ
5.ಜನತಾಪ್ರಜ್ಞೆ ಮತ್ತು ವೈಚಾರಿಕ ಜಾಗೃತಿ
6.ವಿದ್ಯಾರ್ಥಿಗಳಿಗೇಕೆ ಸಾಹಿತ್ಯ
7.ಪ್ರಾದೇಶಿಕ ವೈಶಿಷ್ಟ್ಯದ ರಕ್ಷಣೆ
8.ಬಹುಜಿಹ್ವಾ ಭಾರತಿಗೆ ಐಕ್ಯತೆಯ ಆರತಿ

ಟೈಪಿಸಲ್ಪಟ್ಟ ಲೇಖನಗಳು 15 ಡಿಸೆಂಬರ್ ಒಳಗಾಗಿ ನಮ್ಮನ್ನು ತಲುಪಬೇಕು. ಆಯ್ದ ಅತ್ಯುತ್ತಮ ಲೇಖನಗಳನ್ನು ಮುಂದೆ ಪುಸ್ತಕರೂಪದಲ್ಲಿ ಪ್ರಕಟಿಸಲಾಗುವುದು.

ಪ್ರಬಂಧಗಳನ್ನು ಕಳುಹಿಸಬೇಕಾದ ವಿಳಾಸ: ಪ್ರಧಾನ ಸಂಪಾದಕರು, ಬುಕ್ ಬ್ರಹ್ಮ, ಮೂರನೇ ಮಹಡಿ, ಆರ್.ಕೆ ಕಾಂಪ್ಲೆಕ್ಸ್, ಕೆಎಸ್‌ಎಸ್‌ಐಡಿಸಿ ಕಾಂಪೌಡ್, ಎಲೆಕ್ಟ್ರಾನಿಕ್ಸ್ ಸಿಟಿ ಫೇಸ್-1, ಬೆಂಗಳೂರು ಕರ್ನಾಟಕ 560100. ಮೊಬೈಲ್‌ ನಂಬರ್ : 7892608118, ಇಮೇಲ್ ಐಡಿ: nimagaagi@bookbrahma.com.

See also  ಕನ್ನಡದ ಹಿರಿಮೆ ಹೆಚ್ಚಿಸಲು ಶ್ರಮಿಸಿ: ಕರ್ನಲ್ (ಪ್ರೊ.) ವೈ.ಎಸ್.ಸಿದ್ದೇಗೌಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11671
Media Release

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು