News Kannada
Tuesday, June 06 2023
ತುಮಕೂರು

ತುಮಕೂರು: ಸಮಾನ ಮನಸ್ಕರಿಂದ ಜಾಗೃತಿ ಮತದಾನ

Tumakuru: Awareness voting by like-minded people
Photo Credit : News Kannada

ತುಮಕೂರು: ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕವನ್ನು ಬಿಜೆಪಿ ಪಕ್ಷ ಕೋಮು ಮತ್ತು ದ್ವೇಷ ರಾಜಕಾರಣದ ಪ್ರಯೋಗಶಾಲೆಯಾಗಿ ಮಾಡಿಕೊಂಡಿದ್ದು,ಇದರಿಂದ ಕರುನಾಡಿನ ಜನರನ್ನು ಹೊರತರುವ ನಿಟ್ಟಿನಲ್ಲಿ ಸಮಾನ ಮನಸ್ಕರ ಒಕ್ಕೂಟ, ಸ್ಥಳೀಯ ಜಾಗೃತ ಮನಸ್ಸುಗಳ ಮೂಲಕ ಮತದಾರರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಸಮಾನ ಮನಸ್ಕರ ಒಕ್ಕೂಟ ಡಾ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕೋಮುವಾದ ಮತ್ತು ದ್ವೇಷ ರಾಜಕಾರಣದಿಂದ ಇಂದು ಪ್ರಜಾಪ್ರಭುತ್ವ ಆತಂಕದಲ್ಲಿದೆ.ಸಂವಿಧಾನವನ್ನು ಹಾಳು ಮಾಡುವ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆಯುತ್ತಿದ್ದು,ಇದರ ವಿರುದ್ದ ಸಾಹಿತಿ ಗಳು,ಕಲಾವಿದರು,ವೈದ್ಯರು,ವಕೀಲರು,ಯುವಜನರು,ವಿದ್ಯಾರ್ಥಿಗಳು, ರೈತ-ದಲಿತ ಮಹಿಳಾ ಮತದಾರರ ಸಮನ್ವಯದಿಂದ ದ್ವೇಷ ಭಾಷಣಗಳಿಗೆ ನಮ್ಮ ಮತ ಇಲ್ಲ. ಹಣ, ಹೆಂಡ, ಸೀರೆ, ಪಂಚೆ ಹಂಚುವವರಿಗೆ ನಮ್ಮ ಮತ ಇಲ್ಲ. ಪ್ರೀತಿಗೆ, ಕರುಣೆಗೆ, ಸೌಹಾರ್ಧತೆಗೆ ನಮ್ಮ ಮತ ಎಂಬ ಘೋಷವಾಕ್ಯದೊಂದಿಗೆ ರಾಜ್ಯದಾದ್ಯಂತ ಪ್ರವಾಸ ಮಾಡಿ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಸರ್ವ ಜನಾಂಗದ ಶಾಂತಿಯ ತೋಟ ಎನಿಸಿಕೊಂಡಿರುವ ಕರ್ನಾಟಕದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದ್ವೇಷದಿಂದ ಯುವಜನರ ರಾಜಕೀಯ ಪ್ರೇರಿತ ಕಗ್ಗೊಲೆಗಳು ನಡೆಯುತ್ತಿವೆ.ಎಲ್ಲರಿಗೂ ತಿಳಿ ಹೇಳಬೇಕಾದ ಶಿಕ್ಷಣ ಕ್ಷೇತ್ರ ಒಂದು ಸಮುದಾಯದ ಕೈಗೆ ಸಿಕ್ಕು, ಸುಳ್ಳು ಇತಿಹಾಸ ಸೃಷ್ಟಿಯಾಗುತ್ತಿದೆ. ಇದರಿಂದ ಕರ್ನಾಟಕದ ಭವಿಷ್ಯ ಏನಾಗಲಿದೆ ಎಂಬ ಆಂತಕ ನಮ್ಮೆಲ್ಲರಲ್ಲಿಯೂ ಮನೆ ಮಾಡಿದೆ.ಸಾಮಾಜಿಕ ಹೊಣೆಗಾರಿಕೆ ಉಳ್ಳುವರಾದ ನಾವುಗಳು ಈ ಸಮಯದಲ್ಲಿ ಮೌನವಹಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ಈ ಸಣ್ಣ ಪ್ರಯತ್ನಕ್ಕೆ ಮುಂದಾಗಿದ್ದೇವೆ. ಭಾರತೀಯರಿಗೆ ಸರ್ವಶ್ರೇಷ್ಠ ಧರ್ಮವಾಗಿರುವ ಸಂವಿಧಾನ, ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಮುಂದಾಗಿದ್ದು, ಹಲವಾರು ಜನರು ಕೈಜೋಡಿಸಿದ್ದಾರೆ ಎಂದು ಡಾ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.

ಹಿರಿಯ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ,ಕಳೆದ ಎರಡು ತಿಂಗಳಿನಿಂದ ನಾವೆಲ್ಲರೂ ಹಲವಾರು ಸಭೆಗಳನ್ನು ಮಾಡಿ,ಪ್ರವಾಸ ಮಾಡಿ ಜನರಿಗೆ ಮಾಧ್ಯಮಗಳ ಮೂಲಕ ರಾಜ್ಯದಲ್ಲಿ ಕೋಮುವಾದ, ದ್ವೇಷ ರಾಜಕಾರಣಕ್ಕೆ ವಿರುದ್ದವಾಗಿ ಮತ ಚಲಾಯಿಸುವಂತೆ ಮನವಿ ಮಾಡುತ್ತಾ ಬಂದಿದ್ದೇವೆ.ಕೋಮುವಾದ, ದ್ವೇಷದಿಂದ ನಮ್ಮ ನೆರೆ ಹೊರೆಯ ರಾಷ್ಟ್ರಗಳು ಏನಾಗಿವೆ ಎಂಬುದನ್ನು ನಾವೆಲ್ಲರೂ ಒಮ್ಮೆ ಅವಲೋಕಿಸಬೇಕಿದೆ.ಭಾರತವನ್ನು ಧರ್ಮಾಧಾರಿತ ದೇಶವನ್ನಾಗಿ ರೂಪಿಸಲು ಹೊರಟಿರುವ ಡಬಲ್ ಇಂಜಿನ್ ಸರಕಾರದ ಹುನ್ನಾರವನ್ನು ತಡೆಯುವುದೇ ಇದರ ಹಿಂದಿರುವ ಉದ್ದೇಶ ಎಂದರು.

ಮಹಿಳಾ ಹೋರಾಟಗಾರತಿ ಬಾ.ಹ.ರಮಾಕುಮಾರಿ ಮಾತನಾಡಿ,ಬಿಜೆಪಿ ಕಳೆದ ೯ ವರ್ಷಗಳಿಂದ ಸುಳ್ಳು ಹೇಳಿಕೊಂಡೇ ಬರುತ್ತಿದೆ.ಮಹಿಳಾ ರಕ್ಷಣೆ, ಮಹಿಳಾ ಮೀಸಲಾತಿ ಬಗ್ಗೆ ದೊಡ್ಡ ಜಾಹಿರಾತು ನೀಡುತ್ತಿರುವ ಬಿಜೆಪಿ, ಆ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆಯೇ ಎಂದು ನೋಡಿದರೆ,ಅದೆಲ್ಲಾ ಸುಳ್ಳು ಎಂಬುದು ಗೊತ್ತಾಗುತ್ತದೆ. ಇದಕ್ಕೆ ಗುಜರಾತ್‌ನ ಬಲ್ಕೀಸ್ ಭಾನು ಪ್ರಕರಣವೇ ಸಾಕ್ಷಿಯಾಗಿದೆ.ಜನಸಾಮಾನ್ಯರು ಇದನ್ನು ಪ್ರಶ್ನಿಸುವಂತಾಗಬೇಕು ಎಂದರು.

ಸಾಹಿತಿ ಡಾ.ಎಲ್.ಎನ್.ಮುಕುಂದರಾಜ್ ಮಾತನಾಡಿ,ಮತದಾರರ ಜಾಗೃತಿ ಎಂಬುದು ನಿರಂತರವಾಗಿ ನಡೆಯುವ ಕಾರ್ಯಕ್ರಮವಾಗಿದೆ.ಆದರೆ ಜನರಿಗೆ ಸತ್ಯ ಹೇಳಲು ಹೊರಟಿರುವ ನಮ್ಮಂತಹ ಸಾಹಿತಿಗಳು ಅನುಭವಿಸುತ್ತಿರುವ ನೋವುಗಳು ಸಾಕಷ್ಟಿವೆ.ಬಸವಪ್ರಜ್ಞೆ,ಕುವೆಂಪು ಪ್ರಜ್ಞೆ ಎಂಬುದು ಜನರ ಮನಸ್ಸಿನಲ್ಲಿದ್ದರೂ ಪಠ್ಯಪುಸ್ತಕದಿಂದ ಕಾಣೆಯಾಗಿವೆ. ಲೇಖಕರು ಸಹ ಭಯದ ವಾತಾವರಣದಲ್ಲಿ ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಹೊರಬರಲು ಇರುವ ಏಕೈಕ ಮಾರ್ಗವೆಂದರೆ ಕೋಮುವಾದ ಮತ್ತು ದ್ವೇಷ ಮಾಡುವವರಿಗೆ ಜನತೆ ಮತ ನೀಡಬಾರದು ಎಂದರು.

See also  ಪಾವಗಡ ಬಸ್ ಪಲ್ಟಿ ದುರಂತ :ಖಾಸಗಿ ಬಸ್ ಚಾಲಕ ವಶಕ್ಕೆ

ಲೇಖಕ ಶ್ರೀಪಾದಭಟ್ ಮಾತನಾಡಿ,ರಾಜ್ಯದ ಜನತೆ, ಡಬಲ್ ಇಂಜಿನ್ ಸರಕಾರ ಜಾರಿಗೆ ತಂದಿರುವ ಜನವಿರೋಧಿ, ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ, ಭೂ ಸುಧಾರಣಾ ಕಾಯ್ದೆ ಮತ್ತು ಅರ್ಥಿಕ ಹಿಂದುಳಿದವರಿಗೆ ಮೀಸಲಾತಿ ಇವುಗಳ ಬಗ್ಗೆ ಚರ್ಚೆ ನಡೆಸಿ, ಇವುಗಳನ್ನು ಯಾರ ಲಾಭಕ್ಕಾಗಿ ಎಂಬ ಪ್ರಶ್ನೆಗಳನ್ನು ಎತ್ತಬೇಕಿದೆ. ಒಳಮೀಸಲಾತಿ ಜಾರಿಯಾಗದೆ, ಕಾಂಗ್ರೆಸ್, ಜೆಡಿಎಸ್ ಅಧಿಕಾರಕ್ಕೆ ಬಂದರೆ ಒಳ ಮೀಸಲಾತಿ ತೆಗೆಯಲಿದೆ ಎಂದು ಸ್ವತಹಃ ಮುಖ್ಯಮಂತ್ರಿಗಳೇ ಸುಳ್ಳು ಹೇಳುತ್ತಿದ್ದಾರೆ. ಎಂದಿಗೂ ನಾಡಿನ ವೈಚಾರಿಕ ಪ್ರಜ್ಞೆ ಹಾಳಾಗದಂತೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಾಗೃತ ಮತದಾರರ ವೇದಿಕೆಯ ಸಂಚಾಲಕ ಡಾ.ಹೆಚ್.ವಿ.ರಂಗಸ್ವಾಮಿ,ಡ್ಯಾಗೇರಹಳ್ಳಿ ವಿರೂಪಾಕ್ಷ,ನಟರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು