ತುಮಕೂರು: ನಮ್ಮ ಪಕ್ಷದವರು ತುಮಕೂರು ಜಿಲ್ಲೆಯಿಂದ ಲೋಕಸಭೆ ಅಭ್ಯರ್ಥಿಯಾಗಿ ದೇವೇಗೌಡ ಅವರನ್ನು ನಿಲ್ಲಿಸಲು ಹೊರಟಿದ್ದಾರೆ. ಆದರೆ ಹೇಮಾವತಿ ನೀರಿನ ವಿಚಾರದಲ್ಲಿ ಜಿಲ್ಲೆಗೆ ಗೌಡರು ಎಂದೂ ಕಂಡರಿಯದಷ್ಟು ಮೋಸ ಮಾಡಿದ್ದಾರೆ ಎಂದು ಬಿಜೆಪಿ ಸಂಸದ ಬಸವರಾಜು ಹೇಳಿದ್ದಾರೆ.
ಯಾರಿಗಾದರೂ ವೋಟ್ ಹಾಕಲಿ. ಆದರೆ ಗೌಡರಿಗೆ ವೋಟ್ ಹಾಕಬಾರದು. ಅವರಿಗೆ ವೋಟ್ ಹಾಕಿದರೆ ಜಿಲ್ಲೆಯ ಜನತೆ ಪಾಪ ಮಾಡಿದಂತಾಗುತ್ತದೆ ಎಂದರು.
ಲೋಕಸಭೆಗೆ ಜೆಡಿಎಸ್ ನವರು ಐದು ಕ್ಷೇತ್ರಗಳಿದ್ದು, ತುಮಕೂರನ್ನು ಬಿಟ್ಟುಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ರಕ್ತ ಕೊಟ್ಟರೂ ಜಿಲ್ಲೆಗೆ ಹೇಮಾವತಿ ನೀರು ಕೊಡಲ್ಲ. ಎಂದು ಹೇಳಿದ್ದ ದೇವೇಗೌಡ ಅವರನ್ನು ಜಿಲ್ಲೆಯ ಜನರು ಒಮ್ಮೆ ಸೋಲಿಸಿದ್ದಾರೆ. ಅವರ ಸಂಬಂಧಿಗಳು ಅವರಿಗೆ ವೋಟ್ ಹಾಕಲ್ಲ. ಒಕ್ಕಲಿಗ ಸಮುದಾಯದ ಒಬ್ಬರೂ ಮತ ಹಾಕಲ್ಲ ಎಂದರು.