News Karnataka Kannada
Friday, March 29 2024
Cricket
ತುಮಕೂರು

ತುಮಕೂರು: ನನಗೆ ಜನರ ಮೇಲೆ ಸಂಪೂರ್ಣ ಭರವಸೆ ಇದೆ – ಸೊಗಡು ಶಿವಣ್ಣ

I have full people's hopes: Sogadu Shivanna
Photo Credit : News Kannada

ತುಮಕೂರು: ನಗರ ವಿಧಾನಸಭಾಕ್ಷೇತ್ರದ ವ್ಯಾಪ್ತಿಯಲ್ಲಿ ಸ್ವಾಭಿಮಾನಿ ತುಮಕೂರು  ನಾಗರಿಕರು ಉತ್ತಮ ಸ್ಪಂದನೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದ್ದಾರೆ.

ಕ್ಯಾತ್ಸಂದ್ರದ ವಾರ್ಡ್ ೩೩ ಮತ್ತು ೩೪ನೇ ವ್ಯಾಪ್ತಿಯಲ್ಲಿನ ಚಂದ್ರಮೌಳೇಶ್ವರ ಬಡಾವಣೆಯ ಸ್ವಾಭಿಮಾನಿ ಮತದಾರರ ಸಭೆಯಲ್ಲಿ ಮಾತನಾಡುತ್ತಾ, ನಗರದ ಅಭಿವೃದ್ಧಿಗೆ ಪ್ರಗತಿಪರ ಹಾಗೂ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯಕ್ತಿ ಆಯ್ಕೆಯಾದರೆ ಸೂಕ್ತ ಎಂದು ತುಮಕೂರಿನ ಸ್ವಾಭಿಮಾನಿ ಮತದಾರರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಹಿಂದೂ-ಮುಸ್ಲಿಂ-ಕ್ರೈಸ್ತ ಸಮುದಾಯದ ಬಂಧುಗಳು ನಗರದಲ್ಲಿ ಶಾಂತಿ, ಸೌಹಾರ್ದ, ಅಭಿವೃದ್ಧಿಗೆ ಪೂರಕವಾದ ವಾತಾವರಣದಿಂದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುವ ವಾತಾವರಣ ನಿರ್ಮಾಣವಾಗಲಿ ಎಂದು ಬಯಸುತ್ತಿದ್ದಾರೆ. ಕಳೆದ ನಾಲ್ಕು ಅವಧಿ ಶಾಸಕ ಹಾಗೂ ಎರಡು ಅವಧಿಗೆ ಮಂತ್ರಿಗಳನ್ನಾಗಿ ಮಾಡಿದ್ದ ತುಮಕೂರು ನಗರದ ನಾಗರಿಕರ ಋಣವನ್ನು ತೀರಿಸಲು ಸಾಧ್ಯವಾಗುವುದಿಲ್ಲ. ಈ ಬಾರಿಯ ಚುನಾವಣೆ ನನಗೆ ನಿರ್ಣಾಯಕವಾಗಿದ್ದು, ಮತದಾರರ ಆರ್ಶೀವಾದವು ನನ್ನ ಮೇಲೆ ಇದೆ ಎಂದು ಸೊಗಡು ಶಿವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾನು ಕಳೆದ ೫ ದಶಕಗಳ ಕಾಲ ಸುಧೀರ್ಘ ರಾಜಕೀಯ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಸಾವಿರಾರು ಜನರಿಗೆ ನೆರವಾಗಿದ್ದು, ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸಲು ಆಮರಣಾಂತ ಸತ್ಯಾಗ್ರಹ ಮಾಡಿದ್ದಲ್ಲದೆ, ಹೋರಾಟಗಳ ಮೂಲಕ ತುಮಕೂರಿಗೆ ಹೇಮಾವತಿ ನೀರು ಬಂದಿತು. ನಗರದಲ್ಲಿ ಅಭಿವೃದ್ಧಿಯ ಶಕೆ ಆರಂಭಗೊಂಡಿದ್ದೇ ನಾನು ಶಾಸಕನಾಗಿದ್ದ ಅವಧಿಯಲ್ಲಿ ಕಾರ್ಯಾರಂಭಗೊಂಡವು.

ತುಮಕೂರಿನ ಅಮಾನಿಕೆರೆ ಅಭಿವೃದ್ಧಿ, ಯುಜಿಡಿ, ಆರೋಗ್ಯ , ಸುರಕ್ಷೆ, ಶಾಂತಿ ಸೌಹಾರ್ದತ ವಾತಾವರಣ ನಿರ್ಮಾಣವಾಗಿ ಅಭಿವೃದ್ಧಿಯ ಚಟುವಟಿಕೆಗಳಿಂದ ಶಿಕ್ಷಣ, ಆರೋಗ್ಯ, ಕೈಗಾರಿಕಾ ಚಟುವಟಿಕೆಗಳು ಗರಿಗೆದರಿ ಎಲ್ಲೆಡೆ ಉದ್ಯೋಗವಕಾಶಗಳು ಸೃಷ್ಠಿಯಾಯಿತು ಎಂದರು. ಕೋವಿಡ್-೧೯ ಸಮಯದಲ್ಲಿ ನಿರ್ಭಯವಾಗಿ ಕಾರ್ಯನಿರ್ವಹಿಸಿ ಜನರ ಪ್ರಶಂಸೆಗೆ ಪಾತ್ರವಾಗುವ ರೀತಿಯಲ್ಲಿ ಸ್ಪಂದಿಸಿದ್ದೇನೆ. ನಾಗರೀಕರ ದುಃಖ ದುಮ್ಮಾನಗಳಿಗೆ ಅಧಿಕಾರ ಇಲ್ಲದಿದ್ದರೂ ಕಳೆದ ೧೦ ವರ್ಷಗಳಿಂದ ಕಾರ್ಯನಿರ್ವಹಿಸಿ, ಸರ್ವ ಜನಾಂಗದ ನಾಗರೀಕರಿಗೆ ಸ್ಪಂದಿಸಿದ್ದೇನೆ ಎಂದು ತಿಳಿಸಿ, ಮತಯಾಚನೆ ಸಮಯದಲ್ಲಿ ಈ ಎಲ್ಲಾ ಮಾಹಿತಿಗಳನ್ನು ಪ್ರಬುದ್ಧ  ಮತ್ತು ಸ್ವಾಭಿಮಾನಿ ಮತದಾರರಿಗೆ ಮನನ ಮಾಡಿ ಮತಯಾಚನೆ ಮಾಡುವಂತೆ ಕಾರ್ಯಕರ್ತರಿಗೆ ವಿನಂತಿಸಿದರು.

ಈ ಸಂಧರ್ಭದಲ್ಲಿ ಸ್ವಾಭಿಮಾನಿ ಪ್ರಮುಖರಾದ ರಮೇಶಾಚಾರ್, ಅಶ್ವಥ್‌ಶೆಟ್ಟಿ, ಮಹೇಶ್, ಕೆ.ಹರೀಶ್, ಎನ್.ಗಣೇಶ್, ಎನ್.ನರಸಿಂಹನ್, ಅರವಿಂದ್ ನಟರಾಜು, ಮೋಹನ್, ಮಲ್ಲೇಶ್, ಷಣ್ಮುಕಪ್ಪ ಹಾಗೂ ನೂರಾರು ಪ್ರಬುದ್ಧ ಮಹಿಳಾ ಮತದಾರರು ಸೇರಿದಂತೆ ೫೦೦ಕ್ಕೂ ಹೆಚ್ಚು ಸ್ವಾಭಿಮಾನಿ ಮತದಾರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು