News Karnataka Kannada
Thursday, March 28 2024
Cricket
ತುಮಕೂರು

ಮತದಾನ ಪ್ರಕ್ರಿಯೆ ವಿಳಂಬ: ಸಾಲಾಗಿ ನಿಂತ ಮತದಾರರು

Voting process delayed: Voters queue up
Photo Credit : News Kannada

ತುಮಕೂರು: ಜಿಲ್ಲೆಯಲ್ಲಿ ಬೆಳಿಗ್ಗೆ 7 ರಿಂದ ಉತ್ಸಾಹದ ಮತದಾನ ನಡೆಯುತ್ತಿರುವುದು ಸರಿಯಷ್ಟೇ. ಆದರೆ ಬಹುತೇಕ ಮತಗಟ್ಟೆಗಳಲ್ಲಿ ಸಾಲುಗಟ್ಟಿ ನಿಂತಿರುವ ಮತದಾರರು ಮತದಾನ ಪ್ರಕ್ರಿಯೆ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇವಿಎಂಗಳಲ್ಲಿ ಮತದಾನ ಪ್ರಕ್ರಿಯೆಗೆ ಒಬ್ಬ ರಿಗೆ ಎರಡು -ಮೂರು ನಿಮಿಷ ತೆಗೆದು ಕೊಳ್ಳುತ್ತಿದ್ದು, ಕೊಠಡಿ ಹೊರಗಡೆ ನಿಂತವರು ಹಲವು ಸಮಯ ಕಾಯುತ್ತಾ ನಿಲ್ಲುವಂತಾಗಿದೆ.

ಸಾವಿರಕ್ಕೂ ಅಧಿಕ ಮತದಾರರಿರುವ ಮತಗಟ್ಟೆಗಳಿಗೂ ಒಂದೇ ಇವಿಎಂ ವಿವಿ ಪ್ಯಾಟ್ ಯಂತ್ರ ಪೂರೈಸಿರುವುದು ಸಮಸ್ಯೆಗೆ ಮೂಲ ಕಾರಣವಾಗಿದ್ದು ಮತಗಟ್ಟೆ ಅಧಿಕಾರಿಗಳನ್ನು ಜನ ದೂಷಿಸುತ್ತಿದ್ದಾರೆ.

ಮತಗಟ್ಟೆ ಅಧಿಕಾರಿಗಳನ್ನು ಕೇಳಿದರೆ ಅಸಹಾಕರಾಗಿ ಉತ್ತರ ನೀಡುತ್ತಿದ್ದು, ಮೇಲಿನವರ ಒದಗಿಸಿರುವ ಸೌಲಭ್ಯದ ಮಿತಿಯಲ್ಲಿ ನಾವು ಮತದಾನ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ. ಹಿರಿಯ ನಾಗರಿಕರು, ವಿಶೇಷ ಚೇತನರು ಮತದಾನ ಮಾಡುವಲ್ಲಿ ದಾಖಲೆ ಪರಿಶೀಲನೆ, ಸಹಿ ಹಾಕುವಾಗ ವಿಳಂಬವಾಗುತ್ತಿದ್ದು, ನಿಗದಿತ ಆರು ಗಂಟೆಯೊಳಗೆ ಮತದಾನ ಕೇಂದ್ರಕ್ಕೆ ಬಂದ ಯಾರಿಗೂ ಮತದಾನ ನಿರಾಕರಿಸುವುದಿಲ್ಲ ಎಂದು ಸಮಜಾಯಿಷಿ ನೀಡುತ್ತಿದ್ದಾರೆ. ಸಿರಿವರ ಬ್ಲಾಕ್ ಎರಡರಲ್ಲಿ ಮತಯಂತ್ರ ದೋಷದಿಂದ ಒಂದು ತಾಸು ವಿಳಂಬವಾಗಿ ಮತದಾನ ಆರಂಭವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು