ಬೆಂಗಳೂರು: ರಾಜ್ಯದಲ್ಲಿ ಕಾವೇರಿ ಹೋರಾಟ ತೀವ್ರಗೊಂಡಿವೆ. ಕನ್ನಡಪರ ಸಂಘಟನೆಗಳು ಸೆ.29ರಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಈ ನಡುವೆ ಕರ್ನಾಟಕ ಮತ್ತು ತಮಿಳುನಾಡು ನಡುವೆ ನಡೆಯುತ್ತಿರುವ ಕಾವೇರಿ ವಿವಾದದ ಬಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಮಾತನಾಡಬೇಕು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ( ಒತ್ತಾಯಿಸಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ರಜನಿಕಾಂತ್ ನಿಲುವು ಪ್ರಕಟಿಸುವಂತೆ ವಾಟಾಳ್ ಆಗ್ರಹಿಸಿದ್ದಾರೆ.
ನಾಗರಾಜ್ ಮಾತನಾಡಿ, ರಜನಿಕಾಂತ್ ಅವರು ಕರ್ನಾಟಕದಲ್ಲಿ ಹುಟ್ಟಿದ್ದು, ಉಭಯ ರಾಜ್ಯಗಳ ನಡುವಿನ ದಶಕಗಳ ನೀರು ಹಂಚಿಕೆ ವಿವಾದವನ್ನು ಬಗೆಹರಿಸಲು ಅವರು ಧ್ವನಿ ಎತ್ತಬೇಕು. ಇಲ್ಲವಾದಲ್ಲಿ ರಜನಿಕಾಂತ್ ಕರ್ನಾಟಕಕ್ಕೆ ಬರಬಾರದು. ಕರ್ನಾಟಕ ಪ್ರವೇಶಿಸದಂತೆ ನಿರ್ಬಂಧ ಹೇರಬೇಕು. ರಾಜ್ಯದಲ್ಲಿ ರಜನಿಕಾಂತ್ ಚಿತ್ರಗಳನ್ನು ನಿಷೇಧಿಸಬೇಕು. ಇದು ಒಂದು ಎಚ್ಚರಿಕೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಹುಟ್ಟಿ ಕಾವೇರಿ ನೀರು ಕುಡಿದು ಬೆಳೆದಿರುವ ಕಾರಣ ಅವರು ಈ ಬಗ್ಗೆ ಮಾತನಾಡಬೇಕು ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.