News Kannada
Thursday, September 29 2022

ಕಲಬುರಗಿ

ಬಿಜೆಪಿಗೆ ಹೊಸ ಯೋಜನೆಗಳನ್ನು ತರುವ ಯೋಗ್ಯತೆಯಿಲ್ಲ ; ಪ್ರಿಯಾಂಕ್‌ ಖರ್ಗೆ - 1 min read

Photo Credit :

ಕಲಬರುಗಿ, ; ಬಿಜೆಪಿ ನಾಯಕರಿಗೆ ಜನಪರವಾದ ಯಾವುದೇ ಹೊಸ ಯೋಜನೆಗಳನ್ನು ತರುವ ಯೋಗ್ಯತೆ ಇಲ್ಲದೆ ಕಾಂಗ್ರೆಸ್ ನಾಯಕರ ವಿರುದ್ಧ ವೈಯಕ್ತಿಕ ನಿಂದನೆ ಮಾಡಿ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಬುರಗಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರು ಮಾಡಿರುವ ಒಂದು ಹೊಸ ಯೋಜನೆಯನ್ನು ತೋರಿಸಲಿ, ನೆರೆ ಸಂತ್ರಸ್ತರು ಸಂಕಷ್ಟದಲ್ಲಿರುವ ರೈತರಿಗೆ ಎಷ್ಟು ಸ್ಪಂದಿಸಿದ್ದಾರೆ ಎಂದು ಹೇಳಲಿ. ಅದನ್ನು ಬಿಟ್ಟು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಇಂದಿರಾ ಕ್ಯಾಂಟೀನ್‍ಗೆ ಹೆಸರು ಬದಲಿಸುವ ಮಾತುಗಳನ್ನು ಆಡುತ್ತಿದ್ದಾರೆ. ಬಿಜೆಪಿಯವರಿಗೆ ಹೆಸರು ಬದಲಿಸುವುದು ಬಿಟ್ಟು ಬೇರೆ ಗೊತ್ತಿಲ್ಲ. ಅವರೀಗ ಆಡಳಿತದಲ್ಲಿದ್ದಾರೆ. ಹೊಸ ಯೋಜನೆ ತರಲಿ, ಕಟ್ಟಡ ನಿರ್ಮಿಸಲಿ, ಸಂಸ್ಥೆಗಳನ್ನು ಕಟ್ಟಲಿ ಅದಕ್ಕೆ ಬೇಕಿದ್ದರೆ ಅವರ ನಾಯಕರ ಹೆಸರನ್ನಿಡಲಿ. ದೇಶಕ್ಕಾಗಿ ಕೊಡುಗೆ ನೀಡಿದವರ ಹೆಸರಿಡಲು ಯಾರ ಆಕ್ಷೇಪವೂ ಇರುವುದಿಲ್ಲ. ಬ್ರಿಟಿಷರಿಗೆ ಕ್ಷಮಾಪಣ ಪತ್ರ ಬರೆದುಕೊಟ್ಟ ಸಾರ್ವಕರ್ ಹೆಸರಿಡುವುದು ಎಷ್ಟು ಸರಿ. ದೇಶಕ್ಕೆ ಸಾರ್ವಕರ್ ಕೊಡುಗೆ ಏನು? ದೇಶದ ಇತಿಹಾಸವೇ ಗೊತ್ತಿಲ್ಲದ ಸಿ.ಟಿ.ರವಿ ಅವರು ಅಪ್ರಬುದ್ಧವಾಗಿ ಮಾತನಾಡುತ್ತಿದ್ದಾರೆ. ಮಂತ್ರಿ ಗಿರಿ ಸಿಕ್ಕಿಲ್ಲ ಎಂಬ ಹತಾಶೆಯಿಂದ ಬಾಯಿ ಹರಿಬಿಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ನಾಯಕರಂತೆ ನಾವು ಕೂಡ ಮಾತನಾಡಲಾರಂಭಿಸಿದರೆ ಎಲ್ಲ ನಾಯಕರುಗಳ ಗೌರವಕ್ಕೆ ಧಕ್ಕೆ ಬರುತ್ತದೆ. ನಮಗೆ ವಾಜಪೇಯಿ ಅವರ ಬಗ್ಗೆ ಅಪಾರವಾದ ಗೌರವವಿದೆ. ಸಿ.ಟಿ.ರವಿ ನೆಹರು ಬಗ್ಗೆ ಟೀಕೆ ಮಾಡಿದರೆಂದು ವಾಜಪೇಯಿ ಕುಡಿಯುತ್ತಿದ್ದರು, ಮಾಂಸ ತಿನ್ನುತ್ತಿದ್ದರು ಎಂದು ಹೇಳುವುದಿಲ್ಲ. ನಮಗೆ ಸಿ.ಟಿ.ರವಿ ಅವರಂತಹ ಸಂಸ್ಕೃತಿ ಬೇಕಿಲ್ಲ. ಜನಪರವಾದ ಕೆಲಸಗಳ ಬಗ್ಗೆ ಚರ್ಚೆ ಮಾಡಲಿ ಎಂದು ಹೇಳಿದರು.

See also  ತೈಲಬೆಲೆ ಏರಿಕೆ ಸರ್ಕಾರವನ್ನು ದೂಷಿಸುವುದು ಸರಿಯಲ್ಲ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು