News Kannada
Friday, December 09 2022

ಬಳ್ಳಾರಿ

ಅಕ್ರಮ ದಾಸ್ತಾನು ಮಾಡಿದ್ದ 14.32 ಲಕ್ಷ ರೂ ಮೌಲ್ಯದ ಕೀಟನಾಶಕ ವಶ

Photo Credit :

ಬಳ್ಳಾರಿ ; ಅನಧಿಕೃತ ಗೋದಾಮಿನಲ್ಲಿ ಸಂಗ್ರಹಿಸಿದ್ದ ರಸಗೊಬ್ಬರ, ಕೀಟನಾಶಕಗಳನ್ನು ಕೃಷಿ ವಿಚಕ್ಷಣ ಅಧಿಕಾರಿಗಳ ತಂಡ ವಶಪಡಿಸಿಕೊಂಡಿದೆ. ಮಾರಾಟ ಮಳಿಗೆಯಲ್ಲಿ ಅನಧಿಕೃತವಾಗಿ ದಾಸ್ತಾನು ಮಾಡಿದ್ದ ಸುಮಾರು 14.32 ಲಕ್ಷ ರೂ. ಮೌಲ್ಯದ ರಸಗೊಬ್ಬರ ಕೀಟನಾಶಕಗಳನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಬಳ್ಳಾರಿ ತಾಲೂಕಿನ ಮೊಕಾ ಗ್ರಾಮದ ಶ್ರೀಸಾಯಿ ಲಕ್ಷ್ಮೀ ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟ ಮಳಿಗೆ ಮೇಲೆ ಖಚಿತ ಮಾಹಿತಿಯನ್ನಾಧರಿಸಿ ವಿಚಕ್ಷಣಾ ದಳದ ಅಧಿಕಾರಿಗಳು ದಾಳಿ ನಡೆಸಿದ್ದು, ಮಾರಾಟ ಮಳಿಗೆಯಲ್ಲಿ ಅನಧಿಕೃತವಾಗಿ ದಾಸ್ತಾನು ಮಾಡಿದ್ದ ಸುಮಾರು 14.32 ಲಕ್ಷ ರೂ. ಮೌಲ್ಯದ ರಸಗೊಬ್ಬರ ಕೀಟನಾಶಕಗಳನ್ನು ವಶ ಪಡಿಸಿಕೊಂಡಿದ್ದಾರೆ.ಮೋಕಾ ಗ್ರಾಮದಲ್ಲಿ ಅನಾಮಧೇಯ ವ್ಯಕ್ತಿಯೋರ್ವ ಪರವಾನಿಗೆಯಿಲ್ಲದೇ ದಾಸ್ತಾನು ಮಾಡಿದ್ದ 5.89 ಲಕ್ಷ ರೂ. ಮೌಲ್ಯದ ರಸಗೊಬ್ಬರವನ್ನು ವಶಪಡಿಸಿಲೊಳ್ಳಲಾಗಿದೆ. ದಾಳಿಯಲ್ಲಿ ಬಳ್ಳಾರಿ ವಿಚಕ್ಷಣಾ ದಳದ ಅಧಿಕಾರಿಗಳಾದ ರೆಹಮಾನ್, ನಾಗರಾಜ್ ಹಾಗೂ ಮೊಕಾ ಆರ್.ಎಸ್.ಕೆ ಕೃಷಿ ಅಧಿಕಾರಿ ಯಶೋಧಾ ಪಾಲ್ಗೊಂಡಿದ್ದರು.

See also  ತುಂಗಭದ್ರಾ ಕಾಲುವೆಗೆ ಹಾರಿ ತಾಯಿ-ಮಕ್ಕಳು ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು