NewsKarnataka
Sunday, January 23 2022

ಬಳ್ಳಾರಿ

ವಿಮ್ಸ್ ಕೋವಿಡ್ ಲ್ಯಾಬ್ ನಲ್ಲಿ ಆರು ಲಕ್ಷ ಜನರ ಗಂಟಲು ದ್ರವ ಪರೀಕ್ಷೆ

ಬಳ್ಳಾರಿ, : ನಗರದ ವಿಮ್ಸ್ ಆಸ್ಪತ್ರೆಯ ಪ್ರಯೋಗಾಲಯದಲ್ಲಿ ಕೋವಿಡ್-19 ಗೆ ಸಂಬಂಧಿಸಿದಂತೆ ಈವರೆಗೆ 6 ಲಕ್ಷಕ್ಕೂ ಹೆಚ್ಚು ಜನರ ಗಂಟಲು ದ್ರವವನ್ನು ಪರೀಕ್ಷಿಸಲಾಗಿದೆ ಎಂದು ವಿಮ್ಸ್ ನಿರ್ದೇಶಕ ಡಾ|| ಗಂಗಾಧರಗೌಡ ಹೇಳಿದ್ದಾರೆ.
ರಾಜ್ಯದ ಅನೇಕ ಆಸ್ಪತ್ರೆಗಳಲ್ಲಿ ಈ ರೀತಿ ಕೋವಿಡ್ ಪರೀಕ್ಷೆ 6 ಲಕ್ಷಕ್ಕೂ ಹೆಚ್ಚು ದಾಟಿದೆ. ಆದರೆ ಇಡೀ ಉತ್ತರ ಕರ್ನಾಟಕದಲ್ಲಿ ಮಾತ್ರ ಕಲ್ಬುರ್ಗಿ ಮತ್ತು ಬಳ್ಳಾರಿಯ ಆಸ್ಪತ್ರೆಗಳ ಲ್ಯಾಬ್ ಗಳು ಈ ಕಾರ್ಯಸಾಧನೆ ಮಾಡಿವೆ ಎಂದು ತಿಳಿಸಿದ್ದಾರೆ.ಕೋವಿಡ್ ಪರೀಕ್ಷೆಗಾಗಿ ವೈರಾಣು ವಿಭಾಗದ ಅಧ್ಯಾಪಕರು ಮತ್ತು ಪ್ರಾಧ್ಯಾಪಕರು ಜೊತೆಗೆ ಪ್ರತ್ಯೇಕವಾಗಿ 25 ಜನ ಸಿಬ್ಬಂದಿ ನೇಮಕ ಮಾಡಿದೆ. ಅವರು 8 ಗಂಟೆ ಪಾಳಯದಲ್ಲಿ 3 ಅವಧಿಯಲ್ಲಿ ಪರೀಕ್ಷೆ ಮಾಡುತ್ತಿದ್ದರು. ದಿನನಿತ್ಯ 2500-3000 ಜನರ ಗಂಟಲು ದ್ರವ ಪರೀಕ್ಷೆ ಮಾಡಿದೆ. ಈಗ ಅದರ ಪ್ರಮಾಣ ಕಡಿಮೆ ಆಗಿದೆ ಎನ್ನುತ್ತಾರೆ. ವೈರಾಣು ವಿಭಾಗದ ಮುಖ್ಯಸ್ಥ ಡಾ|| ಕೃಷ್ಣ ಅವರು. ಇನ್ನು ಈ ಲ್ಯಾಬ್ ನಲ್ಲಿ ಸೂಕ್ಷ್ಮವಾಗಿ ಕಾರ್ಯನಿರ್ವಹಿಸಬೇಕು ಇಲ್ಲಿ ಕೆಲಸ ಮಾಡಿದವರು ಸಹ ಈ ಸೋಂಕಿನಿಂದ ಬಳಲಿದ ದಿನಗಳೂ ಸಹ ಇವೆ. ಲ್ಯಾಬ್ ನ ಸಿಬ್ಬಂದಿಯ ಕಾರ್ಯಸಾಧನೆಯನ್ನು ನಿರ್ದೇಶಕರು ಶ್ಲಾಘಿಸಿದ್ದಾರೆ.
ಇಲ್ಲಿ ಈ ಮೊದಲು ಕೊಪ್ಪಳ, ರಾಯಚೂರು, ಮೊದಲಾದ ಕಡೆಯಿಂದ ಶ್ಯಾಂಪಲ್ ಗಳ ಪರೀಕ್ಷೆ ಮಾಡಲಾಗುತ್ತಿತ್ತು. ಆದರೆ ಈಗ ಆಯಾ ಜಿಲ್ಲೆಗಳಲ್ಲಿ ಕೋವಿಡ್ ಪರೀಕ್ಷೆ ಪ್ರಯೋಗಾಲಯಗಳು ಆರಂಭಗೊಂಡಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145
Subscribe to our Brand New YouTube Channel

Subscribe Newsletter

Get latest news karnataka updates on your email.