News Kannada
Friday, January 27 2023

ಬೀದರ್

ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ನೂತನ ಶಟಲ್ ಕೋರ್ಟ್ ನಿರ್ಮಾಣ

Photo Credit :

ಬೀದರ್ : ಇಲ್ಲಿಯ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ನಿರ್ಮಿಸಿರುವ ನೂತನ ಶಟಲ್ ಕೋರ್ಟ್‍ನ್ನು ಜಿಲ್ಲಾ ಖಜಾನೆ ಇಲಾಖೆಯ ಉಪ ನಿರ್ದೇಶಕ ರವಿ ಅಕಾರಿ ಉದ್ಘಾಟಿಸಿದರು.

ಕ್ರೀಡೆಗೆ ಉತ್ತೇಜನ ನೀಡುವ ದಿಸೆಯಲ್ಲಿ ನೌಕರರ ಭವನದಲ್ಲಿ ಶಟಲ್ ಕೋರ್ಟ್ ನಿರ್ಮಿಸಿರುವುದು ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.
ಮಾನಸಿಕ ಒತ್ತಡದಿಂದ ಹೊರ ಬರಲು ಸರ್ಕಾರಿ ನೌಕರರು ಬಿಡುವಿನ ವೇಳೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದರು.

ಈಗಾಗಲೇ ನೌಕರರ ಭವನ ನವೀಕರಣಗೊಂಡಿದೆ. ಆವರಣದಲ್ಲಿ ಸುಂದರ ಶಟಲ್ ಕೋರ್ಟ್ ನಿರ್ಮಿಸಿದ್ದಕ್ಕೆ ನೌಕರರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದರಿಂದ ನೌಕರರು ಬೆಳಿಗ್ಗೆ ಹಾಗೂ ಸಂಜೆ ಅವಧಿಯಲ್ಲಿ ಶಟಲ್ ಆಡಲು ನೆರವಾಗಲಿದೆ. ಬರುವ ದಿನಗಳಲ್ಲಿ ನೌಕರರಿಗೆ ವಿವಿಧ ಕ್ರೀಡಾ ತರಬೇತಿಗಳನ್ನು ನೀಡಲು ಯೋಜಿಸಲಾಗಿದೆ ಎಂದು ಹೇಳಿದರು.

ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಜಕ್ಕಾ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ನಗರಸಭೆ ಸದಸ್ಯ ಸಂಗಮೇಶ, ಲಾಹೋಟಿ ಮಾರುತಿ ಶೋರೂಂ ವ್ಯವಸ್ಥಾಪಕ ಜಗನ್ನಾಥ ರೆಡ್ಡಿ, ರಾಜೇಂದ್ರ ಜೊನ್ನಿಕೇರಿ, ಹಣಮಂತರಾವ್ ಮೈಲಾರೆ, ಗುರುನಾಥ ಪಾಂಚಾಳ, ಪ್ರಭುಲಿಂಗ ತೂಗಾವೆ, ಸುನಿಲ್, ಗಣಪತಿ ಜಮಾದಾರ್, ಮನೋಹರ ಕಾಶಿ, ಮಲ್ಲಿಕಾರ್ಜುನ ಪಂಚಾಕ್ಷರಿ, ಓಂಪ್ರಕಾಶ ದಡ್ಡೆ, ಸಂಜೀವ ಸೂರ್ಯವಂಶಿ ಇದ್ದರು.

See also  ಬೀದರ್ : ಮನೆ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡಿದ ಆರೋಗ್ಯ ಇಲಾಖೆ ಸಿಬ್ಬಂದಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು