News Kannada
Saturday, February 04 2023

ಬೀದರ್

ಒಂದೇ ವಾರದಲ್ಲಿ ಹಿರೇಕಾಯಿ ಬೆಲೆ ದುಪ್ಪಟ್ಟು, ₹100ಗೆ ಏರಿಕೆ

Photo Credit :

ಬೀದರ್ : ಕಳೆದ ಕೆಲ ವಾರಗಳಿಂದ ಪ್ರತಿ ಕೆ.ಜಿ.ಗೆ ₹100ರಷ್ಟಿದ್ದ ಟೊಮೆಟೊ ಬೆಲೆ ಈಗ ₹40ಗೆ ಇಳಿದಿದೆ. ₹60ಕ್ಕೆ ಖರೀದಿ ಆಗುತ್ತಿದ್ದ ಹಿರೇಕಾಯಿ ₹100ಗೆ ತಲುಪಿ ಟೊಮೆಟೊ ಸ್ಥಾನವನ್ನು ಆಕ್ರಮಿಸಿಕೊಂಡಿದೆ.ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುರಿದಿದ್ದ ಮಳೆಯು ಜಿಲ್ಲೆಯ ತರಕಾರಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿತ್ತು.

ಹೀಗಾಗಿ, ಕಳೆದ ಮೂರು ವಾರಗಳಿಂದ ಟೊಮೆಟೊ ಬೆಲೆ ಕೆ.ಜಿಗೆ ₹100 ಇತ್ತು. ಟೊಮೆಟೊ ಬೆಳೆಗಾರರಿಗೆ ಕೈತುಂಬ ಹಣ ಸಿಕ್ಕಿತ್ತು. ಈಗ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಆವಕವಾಗುತ್ತಿದೆ. ಇದರಿಂದಾಗಿ ಬಹುತೇಕ ತರಕಾರಿಗಳ ಬೆಲೆಗಳು ಸ್ಥಿರವಾಗಿವೆ. ಕೆಲವು ತರಕಾರಿ ದರಗಳು ಹೆಚ್ಚಳವಾಗಿದ್ದರೆ ಮತ್ತೆ ಕೆಲವು ಇಳಿಕೆ ಕಂಡಿವೆ.

ಹಿರೇಕಾಯಿ ಆವಾಕ ತಗ್ಗಿದ್ದರಿಂದ ಒಂದೇ ವಾರದಲ್ಲಿ ಬೆಲೆ ದುಪ್ಪಟ್ಟಾಗಿದೆ. ಕಳೆದ ವಾರ ಪ್ರತಿ ಕೆಜಿಗೆ ₹50 ಇದ್ದ ಹಿರೇಕಾಯಿ ಬೆಲೆ ₹100ಗೆ ಏರಿದೆ. ಗಜ್ಜರಿ, ಹೂಕೋಸು, ತೊಂಡೆಕಾಯಿ ಬೆಲೆಯೂ ಏರಿಕೆಯಾಗಿ ಪ್ರತಿ ಕೆಜಿಗೆ ₹ 80ರಂತೆ ಮಾರಾಟವಾಗುತ್ತಿವೆ.

ಪ್ರತಿ ಕೆಜಿಯ ಮೇಲೆ ₹ 10 ಇಳಿಕೆಯಾಗಿ ಆಲೂಗಡ್ಡೆ ₹30, ಬೆಳ್ಳುಳ್ಳಿ ₹50, ಬೀನ್ಸ್ ₹70 ಮತ್ತು ಬೀಟ್ ರೂಟ್ ₹50ಗೆ ಖರೀದಿ ಆಗುತ್ತಿದೆ. ಒಂದು ಕೆಜಿ ಟೊಮೆಟೊ ಬೆಲೆಯಲ್ಲಿ ₹60 ಕಡಿತವಾಗಿ ₹40ಗೆ ಮಾರಾಟ ಆಗುತ್ತಿದೆ. ಇದರಿಂದ ಗ್ರಾಹಕ ಮೇಲಿನ ಬೆಲೆಯ ಹೊರೆ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ.

ಪ್ರತಿ ಕೆಜಿ ಈರುಳ್ಳಿ ₹40, ಮೆಣಸಿನಕಾಯಿ ₹40, ಎಲೆಕೋಸು ₹30, ಬೆಂಡೆಕಾಯಿ ₹80, ನುಗ್ಗೆಕಾಯಿ 80, ಡೊಣ ಮೆಣಸಿನಕಾಯಿ ₹40, ಚವಳೆಕಾಯಿ ₹80 ಮತ್ತು ಬದನೆಕಾಯಿ ₹50ಯಲ್ಲಿ ಕಳೆದ ವಾರದ ದರದಲ್ಲಿ ಮಾರಾಟ ಆಗುತ್ತಿದೆ. ಸೊಪ್ಪು ಪದಾರ್ಥ ಗಳ ಪೈಕಿ ಕರಿಬೇವು ₹10 ಇಳಿಕೆಯಾಗಿ ₹30ಗೆ ಖರೀದಿ ಆಗುತ್ತಿದೆ. ಪಾಲಕ್ ₹60 ಮತ್ತು ಕೊಂತಂಬರಿ ₹30 ಇದೆ.

See also  ಬೀದರ್ : ಭಯಾನಕ ಶಬ್ದಕ್ಕೆ ಬೆಚ್ಚಿಬಿದ್ದ ಜನರು,ಗ್ರಾಮದಲ್ಲಿ ಭೂಕಂಪನದ ಅನುಭವ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು