News Kannada
Monday, November 28 2022

ಬೀದರ್

ಬೀದರ್ : ಭಯಾನಕ ಶಬ್ದಕ್ಕೆ ಬೆಚ್ಚಿಬಿದ್ದ ಜನರು,ಗ್ರಾಮದಲ್ಲಿ ಭೂಕಂಪನದ ಅನುಭವ - 1 min read

Photo Credit :

ಬೀದರ್ : ಜಿಲ್ಲೆಯಲ್ಲಿ ಈಗಾಗಲೇ ಅನೇಕ ಬಾರಿ ಭೂ ಕಂಪನದ  ಅನುಭವ ಜನರಿಗೆ ಆಗಿತ್ತು. ಇದರಿಂದಾಗಿ ಭಯಗೊಂಡಿದ್ದ ಜನರಲ್ಲಿ, ನಿನ್ನೆ ರಾತ್ರಿ ಮೂರು ಭಾರಿ ಭಾರೀ ಸದ್ದಿನೊಂದಿಗೆ ಉಂಟಾದಂತ ಭೂಮಿಯ ಕಂಪನದಿಂದ, ಜನರು ಬೆಚ್ಚಿಬೀಳುವಂತೆ ಆಗಿದೆ.ಮೂರು ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದಂತ ಅನುಭವ ಜನರಿಗೆ ಉಂಟಾಗಿದೆ. ಇದರಿಂದಾಗಿ ಜನರು ಭಯಭೀತಗೊಂಡು ಮನೆಯಿಂದ ಹೊರ ಓಡಿ ಬಂದು ಕೆಲ ಸಮಯ ಕಳೆಯುವಂತೆ ಆಯಿತು.

ಬೀದರ್ ಜಿಲ್ಲೆಯ ಹುಮಾನಾಬಾದ್ ತಾಲೂಕಿನ ಕೊಡಂಬಲ್ ಗ್ರಾಮದಲ್ಲಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದಂತ ಅನುಭವ ನಿನ್ನೆ ಸಂಜೆ 6.30 ರಿಂದ 7.30ರ ಸಮಯದಲ್ಲಿ ಆಗಿದೆ.

ಅಂದಹಾಗೇ ಮೂರು ತಿಂಗಳ ಹಿಂದೆ ಹುಣಸನಾಳ, ಹೊಸಳ್ಳಿ ಗ್ರಾಮದಲ್ಲೂ ಈ ರೀತಿಯ ಶಬ್ದ ಕೇಳಿ ಬಂದಿತ್ತು. ಭಾರೀ ಶಬ್ದದಿಂದ ಉಂಟಾದಂತ ಭೂ ಕಂಪನದ ಅನುಭವಕ್ಕೆ, ಜನರು ಬೆಚ್ಚಿ ಬಿದ್ದಿದ್ದರು. ಆಗ ಭೂಗರ್ಭ ವಿಜ್ಞಾನಿಗಳು ಗ್ರಾಮಗಳಿಗೆ ಭೇಟಿ ನೀಡಿ, ಮಾಹಿತಿ ಪಡೆದು, ಪರಿಶೀಲನೆ ನಡೆಸಿದ್ದರು. ಈ ಬಳಿಕ ಮತ್ತೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದಂತ ಅನುಭವ ಉಂಟಾಗಿದ್ದು, ಜನರನ್ನು ಭಯಭೀತಗೊಳಿಸುವಂತಾಗಿದೆ.

See also  ಅಕ್ರಮ ಗಾಂಜಾ ಸಾಗಿಸುತ್ತಿದ ನಾಲ್ವರು ಆರೋಪಿಗಳು ಬಂಧನ: 456 ಕೆಜಿ ಗಾಂಜಾ ವಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12795
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು