News Kannada
Wednesday, February 08 2023

ಬೀದರ್

ಬೀದರ್: ವಿಶ್ವ ಕನ್ನಡಿಗರ ಸಂಸ್ಥೆಯ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭ

The award ceremony was organised by Vishwa Kannadigara Sanstha under the leadership of Amrita Patil Siranur.
Photo Credit : By Author

ಬೀದರ್: ಪೂಜ್ಯ ಡಾ. ಚನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರದಲ್ಲಿ ದಿನಾಂಕ ೨೯.೧೧.೨೦೨೨ ಬೆಳಗ್ಗೆ ೧೦.೩೦ ರಿಂದ ಸಂಜೆ ೬.೩೦ ಗಂಟೆಯವರೆಗೆ ಶ್ರೀ ಅಮೃತಪಾಟೀಲ ಸಿರನೂರ ನೇತೃತ್ವದಲ್ಲಿ ವಿಶ್ವಕನ್ನಡಿಗರ ಸಂಸ್ಥೆ(ರಿ), ಕರ್ನಾಟಕ ರಾಜ್ಯೋತ್ಸವ ಹಾಗೂ ಕಲ್ಯಾಣ ಕರ್ನಾಟಕ ಕಾಯಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವು ಯಶಸ್ವಿಯಾಗಿ ನಡೆಯಿತು.

ಕರ್ನಾಟಕದಿಂದ ಸಾವಿರಾರು ಕಿ.ಮೀ ದೂರದಲ್ಲಿದ್ದರೂ ಕನ್ನಡ ಭಾಷೆ, ಕನ್ನಡ ನಾಡಿಗಾಗಿ ಶ್ರಮಿಸುತ್ತಿರುವ ಹಾಗೂ ಮೂಲ ಬೀದರ್ ಜಿಲ್ಲೆಯವರಾದ ಭೀಮ ನೀಲಕಂಠರಾವ ಹಂಗರಗೆಯವರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿರುವುದು ಅಭಿನಂದನೀಯ.

ಭೀಮ ನೀಲಕಂಠರಾವ ಹಂಗರಗೆಯವರು ಕೃಷಿ ಕುಟುಂಬದಿಂದ ಬೆಳೆದು ಪ್ರಪಂಚದ ಮೊದಲ ಹತ್ತನೇ ಬ್ರಿಟೀಷ್ ಎಂಜಿನಿಯರಿಂಗ್ ಸಲಹೆಗಾರರಾಗಿ ಕಳೆದ ೧೮ ವರ್ಷಗಳಿಂದ ದುಬೈ, ಮಸ್ಕತ್, ಅಬುದಾಬಿಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. ಇದಲ್ಲದೇ ಮುಂಬೈ, ಬೆಂಗಳೂರಿನ ವಿವಿಧ ಸಂಸ್ಥೆಗಳಲ್ಲಿ ಮೆಕ್ಯಾನಿಕಲ್ ವಿಭಾಗಕ್ಕೆ ಸಂಬಂಧಿಸಿದಂತೆ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ಇನ್ಸ್’ಪೆಕ್ಟರ್ ಎಂಜಿನಿಯರ್, ಮ್ಯಾನೇಜರ್ ಹಾಗೂ ಮೊದಲಾದವುಗಳಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ಜೀವನವನ್ನು ಹಲವು ಆಯಾಮಗಳಲ್ಲಿ ರೂಪಿಸಿಕೊಂಡಿದ್ದು ಎಲ್ಲಾ ಕನ್ನಡಿಗರಿಗೆ ಆದರ್ಶವಾಗಿದ್ದಾರೆ.

ಇದು ಅವರ ವೃತ್ತಿ ಜೀವನದ ವಿಶೇಷವಷ್ಟೇ! ಇನ್ನು ಇವರ ಪ್ರವೃತ್ತಿ ನೋಡುವುದಾದರೆ, ಇವರು ಸಮಾಜ ಸೇವಕರಾಗಿ, ಭಾರತೀಯ ಸಾಮಾಜಿಕ ವೇದಿಕೆ ಕರ್ನಾಟಕ ವಿಭಾಗದ ಸಲಹೆಗಾರರಾಗಿ, ಬಸವ ಬಳಗ ಮಸ್ಕತ್‌ನ ಸೇವಾಕರ್ತರಾಗಿ ಹೀಗೆ ಹತ್ತು ಹಲವು ರೀತಿಯ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರಲ್ಲದೇ, ನೂರಾರು ಕನ್ನಡಿಗರಿಗೆ ಉದ್ಯೋಗ ಸೃಷ್ಟಿಸುವಲ್ಲಿಯೂ ಸಫಲರಾಗಿರುವುದು ಶ್ಲಾಘನೀಯವಾಗಿದೆ.

ಶ್ರಮಿಸುವವರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೇ ಇರದು ಎಂಬ ಮಾತಿಗೆ ಉತ್ತಮ ಉದಾಹರಣೆ  ಭೀಮ ನೀಲಕಂಠರಾವ ಹಂಗರಗೆ ಎಂದರೆ ತಪ್ಪಾಗಲಾರದು. ಇಂತಹ ಅಪರೂಪದ ಪ್ರತಿಭೆಗೆ ವಿಶ್ವ ಕನ್ನಡ ಸಂಸ್ಥೆಯ ವತಿಯಿಂದ ಗೌರವ ಸಮರ್ಪಣೆ ಭೀಮನೀಲಕಂಠರಾವ ಹಂಗರೆಯವರಿಗೆ ದೊರೆತಿರುವುದು ಹೊಳಸಮುದ್ರ ಗ್ರಾಮದ ಜನತೆಗೆಯ ಮೊಗದಲ್ಲಿ ಸಂತಸ ಉಂಟು ಮಾಡಿದೆ.

See also  ನೊಂದವರಿಗೆ ಧೈರ್ಯ ಹೇಳಿದ ಸಚಿವ ಸಚಿವ ಪ್ರಭು ಚವ್ಹಾಣ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11671
Media Release

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು