ಮುರಿದ ಮನಗಳ ಬೆಸೆದು ಐಕ್ಯತೆ ಹಾಗೂ ಪ್ರೀತಿಯಿಂದ ಬಾಳಲು ಕ್ರಿಸ್ತ ನ ಜನನ ನಮ್ಮನ್ನು ಕರೆ ನೀಡುತ್ತಿದೆ ಎಂದು ಸರ್ವ ಧರ್ಮಗಳ ಶಾಂತಿ ಸಹಬಾಳ್ವೆಯ ಸಂದೇಶ ಸಾರುವ ಕ್ರಿಸ್ಮಸ್ ಮೇಳ ವನ್ನು ಔರಾದ್ ತಾಲೂಕಿನ ಎಕಂಬ ಹಳ್ಳಿಯ ಸಂತ ಪೌಲರ ಚರ್ಚ್ ನಲ್ಲಿ ಉದ್ಘಾಟಿಸಿ ಗುಲ್ಬರ್ಗ ಕತೋಲಿಕ ಧರ್ಮಕ್ಷೇತ್ರ ದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ರಾಬರ್ಟ್ ಮೈಕಲ್ ಮಿರಾಂಡಾ ರವರು ಸಂದೇಶ ನೀಡಿದರು.
ಸಮಾಜದಲ್ಲಿ ಕಹಿಯನ್ನು ತೆಗೆದು ಸಿಹಿಯನ್ನು ಹಂಚಿ, ಯೇಸು ನಮಗೆ ಪರಸ್ಪರ ಪ್ರೀತಿಯಿಂದ ಬದುಕಲು ನಮ್ಮ ಹಾಗೆ ಮನುಷ್ಯ ರೂಪ ತಾಳಿದರು ಎಂದು ಅವರು ನುಡಿದರು.
ಹೌಗಿ ಮಠದ ಶ್ರೀ ಶಂಭುಲಿಂಗ ಶಿವಾಚಾರ್ಯರು ಎಲ್ಲರೂ ಒಂದೇ ದೇವರ ಮಕ್ಕಳು ಹಾಗೂ ದೇವರು ಒಂದೇ ಎನ್ನುತ ವಿಶ್ವಶಾಂತಿ ನೆಲೆಸಲಿ ಎಂದು ಆಶೀರ್ವಚನ ಗೈದರು.
ಪೋಷಕರು ಮಕ್ಕಳ ವಿದ್ಯಾಭ್ಯಾಸ ದ ಕಡೆ ಗಮನ ಹರಿಸಿದ್ದರು ಮಕ್ಕಳ ಉತ್ತಮ ಭವಿಷ್ಯ ರೂಪಿಸಿ ಪ್ರಜ್ಞಾವಂತ ಹಾಗೂ ಸುಸಂಸ್ಕೃತ ಸಮಾಜ ಹಾಗೂ ದೇಶ ಕಟ್ಟಬಹುದು ಎಂದು ಶಾಹಿನ್ ಸಂಸ್ಥೆಗಳ ಸಂಸ್ಥಾಪಕರಾದ ಶ್ರೀ ಅಬ್ದುಲ್ ಖಾದಿರ್ ರವರು ಸಂದೇಶವಿತ್ತರು.
ಕ್ರೈಸ್ತ ಮುಖಂಡರಾದ ಶ್ರೀ ಇಮ್ಮನುಯೇಲ್ ಬಂಟಿ ದರ್ಬಾರೆಯವರು ಕ್ರಿಸ್ತನ ಶಾಂತಿ ಸರ್ವರಲ್ಲಿ ನೆಲೆಸಲಿ ಹಾಗೂ ಸರ್ವರಿಗೂ ಒಳಿತಾಗಲಿ ಎಂದು ಸಂದೇಶ ನೀಡುತ್ತಾ ಕ್ರಿಸ್ಮಸ್ ಹಾಡಿನ ಮೂಲಕ ಸಂದೇಶ ನೀಡಿದರು.
ಸಂವಿಧಾನದ ಪೀಠಿಕೆಯ ಅನಾವರಣ ಹಾಗೂ ಶಪತದ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿ, ಕ್ರಿಸ್ಮಸ್ ಗೋದಲಿಯ ಆಶೀರ್ವಚನ ವನ್ನೂ ಧಾರ್ಮಾಧ್ಯಕ್ಷರು ಇತರ ಅಥಿತಿಗಳೊಂದಿಗೆ ನೆರವೇರಿಸಿದರು.
ಸೈಂಟ್ ಪೌಲ್ ಚರ್ಚ್ ಹಾಗೂ ಶಾಲೆಯ ಫಾದರ್ ಅನಿಲ್ ಕ್ರಾಸ್ತಾ ರವರು ಸರ್ವರನ್ನು ಸ್ವಾಗತಿಸಿ ಸನ್ಮಾನಿಸಿದರು. ಮಕ್ಕಳು ಹಾಗೂ ಹಳ್ಳಿಗಳ ಜನರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.
ಸಿ. ರೀನಾ, ಸಿ. ಸಂಗೀತ, ಫಾ. ಆಂಟೋನಿ, ಬ್ರದರ್ಸ್ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದು ಔರಾದ್ ತಾಲೂಕಿನ ಪ್ರಪ್ರಥಮ ಕ್ರಿಸ್ಮಸ್ ಮೇಳ ವನ್ನ ಸುಂದರವಾಗಿ ನಡೆಸಿಕೊಟ್ಟರು. ಮಧ್ಯಾಹ್ನ ಅನ್ನ ದಾಸೋಹ ಹಾಡು, ಮಕ್ಕಳಿಗೆ ಆಟೋಟ ಸ್ಪರ್ಧೆಗಳು, ಹಾಗೂ ಭಕ್ತಿ ಕಾರ್ಯಕ್ರಮಗಳು ಆಯೋಜಿಸಲ್ಪಟ್ಟವು.
ಜಗತ್ತಿನ ಸೃಷ್ಟಿ ಹಾಗೂ ಕ್ರಿಸ್ತನ ಜನನದ ಸಂದೇಶ ಸಾರುವ ಸುಂದರ ರೂಪಕ ಹಾಗೂ ಗೊಡಲಿಯನ್ನು ಮಾಡಲಾಯಿತು. ಸಿ.ಸಂಗಿತರವರು ವಂದಿಸಿದರು.