News Kannada
Wednesday, February 01 2023

ಬೀದರ್

ಬೀದರ್: ಜ 7, 8 ಮತ್ತು 9 ರಂದು ನಡೆಯಲಿದೆ ಬೀದರ ಉತ್ಸವ-2023

Bidar Festival-2023 to be held on January 7, 8 and 9
Photo Credit : News Kannada

ಬೀದರ್ : ಜಿಲ್ಲಾಡಳಿತ, ಬೀದರ ಜಿಲ್ಲೆ ಬೀದರ ವತಿಯಿಂದ ಜನವರಿ 7, 8 ಮತ್ತು 9 ರಂದು ಬೀದರ ಕೋಟೆಯಲ್ಲಿ ಬೀದರ ಉತ್ಸವ-2023 ನಡೆಯಲಿದೆ.

ಜನವರಿ 7 ರಂದು ಸಾಯಂಕಾಲ 5.30 ಗಂಟೆಗೆ ನಡೆಯಲಿರುವ ಬೀದರ ಉತ್ಸವದ ಉದ್ಘಾಟನಾ ಸಮಾರಂಭಕ್ಕೆ ಭಾರತ ಸರ್ಕಾರದ ಕೇಂದ್ರ ಈಶಾನ್ಯ ಪ್ರದೇಶ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಅಭಿವೃದ್ಧಿ ಸಚಿವರಾದ ಜಿ.ಕಿಶನ್ ರೆಡ್ಡಿ ಅವರು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದ ಘನ ಉಪಸ್ಥಿತಿಯನ್ನು ಕೇಂದ್ರ ನೂತನ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಹ ಸಚಿವರಾದ ಭಗವಂತ ಖೂಬಾ, ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ ಬಿ.ಪಾಟೀಲ ಮುನೇನಕೊಪ್ಪ, ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತç ಸಚಿವರಾದ ಆನಂದ ಸಿಂಗ್, ಪಶು ಸಂಗೋಪನೆ ಸಚಿವರಾದ ಪ್ರಭು ಬಿ.ಚವ್ಹಾಣ್, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ.ಸುನೀಲ ಕುಮಾರ ಅವರುಗಳು ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೀದರ ಶಾಸಕರಾದ ರಹೀಮ್ ಖಾನ್ ಅವರು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ಬೆಂಗಳೂರು ರಾಜ್ಯ ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ.ಎಂ.ಜಿ.ಮೂಳೆ, ಹುಮನಾಬಾದ ಶಾಸಕರಾದ ರಾಜಶೇಖರ ಬಿ.ಪಾಟೀಲ, ಭಾಲ್ಕಿ ಶಾಸಕರಾದ ಈಶ್ವರ ಬಿ.ಖಂಡ್ರೆ, ಬೀದರ ದಕ್ಷಿಣ ಶಾಸಕರಾದ ಬಂಡೆಪ್ಪ ಖಾಶೆಂಪೂರ, ಬಸವಕಲ್ಯಾಣ ಶಾಸಕರಾದ ಶರಣು ಸಲಗರ ಹಾಗೂ ವಿಧಾನ ಪರಿಷತ್ ಸದಸ್ಯರುಗಳಾದ ರಘುನಾಥರಾವ ಮಲ್ಕಾಪೂರೆ, ಅರವಿಂದಕುಮಾರ ಅರಳಿ, ಡಾ.ಚಂದ್ರಶೇಖರ ಬಿ.ಪಾಟೀಲ, ಶಶೀಲ್ ಜಿ.ನಮೋಶಿ, ಭೀಮರಾವ ಬಿ.ಪಾಟೀಲ, ಕರ್ನಾಟಕ ರಾಜ್ಯ ಹಜ್ ಸಮಿತಿ ಅಧ್ಯಕ್ಷರಾದ ರೌಊಫುದ್ಧಿನ್ ಕಛೇರಿವಾಲೆ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬು ವಾಲಿ ಅವರು ಆಗಮಿಸಲಿದ್ದಾರೆ.

ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರವಾಸೋದ್ಯಮ ಇಲಾಖೆ ಬೆಂಗಳೂರಿನ ಕಪೀಲ್ ಮೋಹನ್, ಸರ್ಕಾರದ ಕಾರ್ಯದರ್ಶಿಗಳು ಯೋಜನಾ ಕಾರ್ಯಕ್ರಮಗಳ ಮೇಲ್ವಿಚಾರಣೆ ಮತ್ತು ಅಂಕಿಅಶಗಳ ಇಲಾಖೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ.ರಿಚರ್ಡ್ ವಿನ್ಷೆಂಟ್ ಡಿಸೋಜಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಡಾ.ಎನ್.ಮಂಜುಳಾ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಕೃಷ್ಣ ಭಾಜಪೇಯಿ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಡಾ.ರಾಮಪ್ರಸಾದ ಮನೋಹರ ವಿ., ಕಲಬುರಗಿ ವಿಭಾಗದ ಅರಕ್ಷಕ ಮಹಾ ನಿರೀಕ್ಷಕರಾದ ಅನುಪಮ್ ಅಗ್ರವಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಪ್ರಕಾಶ ಜಿ.ಟಿ.ನಿಟ್ಟಾಲಿ ಅವರುಗಳು ಆಗಮಿಸಲಿದ್ದಾರೆ.

ಜನವರಿ 7 ರಂದು ಸ್ಥಳೀಯ ರಾಜ್ಯ ಮಟ್ಟದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ:

ಜನವರಿ 7 ರಂದು ಸಾಯಂಕಾಲ 5.30ಕ್ಕೆ ಸುಗಮ ಸಂಗೀತ ಭಾನುಪ್ರೀಯಾ ಅರಳಿ ಮತ್ತು ತಂಡ ಬೀದರ ವತಿಯಿಂದ, 5.40ಕ್ಕೆ ಗಝಲ್ ಗಾಯನ ರಮೇಶ ಕೋಳಾರ ಮತ್ತು ತಂಡ ಬೀದರ ವತಿಯಿಂದ, 5.50ಕ್ಕೆ ವಚನ ಗಾಯನ ಬಸವರಾಜ ಶೀಲವಂತ ಮತ್ತು ತಂಡ ಬೀದರ ವತಿಯಿಂದ, 6ಕ್ಕೆ ಹಿಂದೂಸ್ಥಾನಿ ಶಾಸ್ತಿçÃಯ ಸಂಗೀತ ರಾಮಲು ಗಾದಗಿ ಮತ್ತು ತಂಡ ಬೀದರ ವತಿಯಿಂದ, 6.10ಕ್ಕೆ ತಬಲಾ ಸೋಲೊ ಜನಾರ್ಧನ ವಾಘಮಾರೆ ಮತ್ತು ತಂಡ ಹುಮನಾಬಾದ ವತಿಯಿಂದ, 6.20ಕ್ಕೆ ಕನ್ನಡ ಹಿಂದಿ ಚಲನಚಿತ್ರ ಹಾಡುಗಳು ಬೆಳಗು ಸಾಂಸ್ಕೃತಿಕ ಹಾಗೂ ಸಾಮಾಜಿಕ ಟ್ರಸ್ಟ್ ಬೀದರ ವತಿಯಿಂದ, 6.30ಕ್ಕೆ ತತ್ವಪದ ಗಾಯನ ಮಧುಕರ ಘೋಡ್ಕೆ ಮತ್ತು ತಂಡ ಬಸವಕಲ್ಯಾಣ ವತಿಯಿಂದ, 6.40ಕ್ಕೆ ಜಾನಪದ ಗಾಯನ ಪಿಚ್ಚಳಿ ಶ್ರೀನಿವಾಸ ಮತ್ತು ತಂಡ ಕೋಲಾರ ವತಿಯಿಂದ, 6.50ಕ್ಕೆ ನೃತ್ಯ ರೂಪಕ ಕೆ.ವಿ.ಎಸ್.ಕಲಾತಂಡ ಮೈಸೂರ ವತಿಯಿಂದ, 7.10ಕ್ಕೆ ಚಲನಚಿತ್ರ ಗೀತೆಗಳು ರೇಖಾ ಅಪ್ಪಾರಾವ ಸೌದಿ ಮತ್ತು ತಂಡ ಬೀದರ ವತಿಯಿಂದ ನಡೆಯಲಿದೆ . ಸಂಸ್ಕೃತಿ ಮಂತ್ರಾಲಯ ನವದೆಹಲಿ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ಭಾರತ ಸರ್ಕಾರ ತಂಜಾವೂರು ಪ್ರಾಯೋಜಿತ ರಾಷ್ಟç ಮಟ್ಟದ ಜಾನಪದ ಕಲಾ ತಂಡಗಳಿದ ಕಲಾ ಪ್ರದರ್ಶನ ನಡೆಯಲಿದೆ. ರಾತ್ರಿ 7.30ಕ್ಕೆ ರೂಫ ಡ್ಯಾನ್ಸ್ ಕಾಶ್ಮೀರ ಇಫ್ರಾ ಅಯುಬ್ ಖಾನ್ ಲಚಮನಪೂರಾ, ಶ್ರೀನಗರ ಕಾಶ್ಮೀರ ವತಿಯಿಂದ ಹಾಗೂ ರಾತ್ರಿ 8ಕ್ಕೆ ಸಂಗೀತ ಸಂಜೆಯನ್ನು ಸಂಜೀತ ಹೆಗಡೆ ಬೆಂಗಳೂರು, ಆಶೀಶ ಕೌರ್ ಮುಂಬಯಿ ಅವರು ನಡೆಸಿಕೊಡಲಿದ್ದಾರೆ. ಹಾಗೂ ರಾತ್ರಿ 10ಕ್ಕೆ ಖವ್ವಾಲಿ ಸಾಬರಿ ಬ್ರರ‍್ಸ್ ಜೈಪೂರ ಅವರು ನಡೆಸಿಕೊಡಲಿದ್ದಾರೆ.

See also  ಲೌಸನ್ನೆ: ಲೌಸನ್ನೆ ಡೈಮಂಡ್ ಲೀಗ್ನಲ್ಲಿ ಮೊದಲ ಸ್ಥಾನಗಳಿಸಿದ ನೀರಜ್ ಚೋಪ್ರಾ

ಜನವರಿ 8 ರಂದು ಸ್ಥಳೀಯ ರಾಜ್ಯ ಮಟ್ಟದ ದಕ್ಷಿಣ ಮಧ್ಯವಲಯ ಸಾಂಸ್ಕೃತಿಕ ಕೇಂದ್ರ ತಂಜಾಪೂರ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ:

ಜನವರಿ 8 ರಂದು ಸಾಯಂಕಾಲ 5.30ಕ್ಕೆ ಕಥಾ ಕೀರ್ತನಾ ವೃಕುಂಠ ದತ್ತ ಮಹಾರಾಜ ಮತ್ತು ತಂಡ ಬೀದರ ವತಿಯಿಂದ, 5.40ಕ್ಕೆ ಸುಗಮ ಸಂಗೀತ ದೀಲಿಪ ಕಾಡವಾದ ಮತ್ತು ತಂಡ ಬೀದರ ವತಿಯಿಂದ, 5.50ಕ್ಕೆ ಜಾನಪದ ಗಾಯನ ಶಂಭುಲಿAಗ ವಾಲ್ದೊಡ್ಡಿ ಮತ್ತು ತಂಡ ಬೀದರ ವತಿಯಿಂದ, 6ಕ್ಕೆ ಹಾರ್ಮೋನಿಯಂ ಸೋಲೋ ರಾಜೇಂದ್ರ ಸಿಂಗ ಪವಾರ ಮತ್ತು ತಂಡ ಬೀದರ ವತಿಯಿಂದ, 6.10ಕ್ಕೆ ಭರತನಾಟ್ಯ ಉಷಾ ಪ್ರಭಾಕರ ಮತ್ತು ತಂಡ ನೂಪೂರು ನೃತ್ಯ ಅಕಾಡೆಮಿ ಬೀದರ ವತಿಯಿಂದ, 6.20ಕ್ಕೆ ವಿಶಿಷ್ಟ ಸಮೂಹ ನೃತ್ಯ ಗೀತಾ ಮತ್ತು ತಂಡ, ಎ.ಬಿ.ವಿ.ಆರ್.ಎಸ್.ಘೋಡಂಪಳ್ಳಿ  ವತಿಯಿಂದ, 6.30ಕ್ಕೆ ಹಾಸ್ಯ ರಘು ಪ್ರೀಯಾ ಮತ್ತು ತಂಡ ಬೀದರ ವತಿಯಿಂದ, 6.40ಕ್ಕೆ ಸುಗಮ ಸಂಗೀತ ಮಂಜುನಾಥ ಜಲಸಂಗಿ ಪುಟ್ಟರಾಜ ಗವಾಯಿಗಳ ಕಲಾ ತಂಡ ಜಲಸಂಗಿ, 7ಕ್ಕೆ ಜಾನಪದ ಗಾಯನ ನಿರ್ಮಲಾ ಮತ್ತು ತಂಡ ಚಿಕ್ಕಬಳ್ಳಾಪೂರ ವತಿಯಿಂದ ನಡೆಯಲಿದೆ. ಸಂಸ್ಕೃತಿ ಮಂತ್ರಾಲಯ, ನವದೆಹಲಿ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ಭಾರತ ಸರ್ಕಾರ ತಂಜಾವೂರು ಪ್ರಾಯೋಜಿತ ರಾಷ್ಟç ಮಟ್ಟದ ಜಾನಪದ ಕಲಾ ತಂಡಗಳಿAದ ಕಲಾ ಪ್ರದರ್ಶನ ನಡೆಯಲಿದೆ.

ರಾತ್ರಿ 7.30ಕ್ಕೆ ಪಂಜಾಬಿ ಭಾಂಗಡಾ ಡ್ಯಾನ್ಸ್ ಪಂಜಾಬ್-ಗುರದರಹನ್ ಸಿಂಗ್ ಮಲ್ವಾ ಸಭ್ಯಾಚರಕ ಕ್ಲಬ್ ಪಟಿಯಾಲಾ ಪಂಜಾಬ ವತಿಯಿಂದ, 7.45ಕ್ಕೆ ಲಾವಣಿ ನೃತ್ಯ ಮಹಾರಾಷ್ಟ್ರ ಸುರಭಿ ಕಾಳಿದಾಸ ಮನಸಾಳೆ ಮುಂಬಯಿ ವತಿಯಿಂದ, ರಾತ್ರಿ 8ಕ್ಕೆ ಸಂಗೀತ ಸಂಜೆ ಮಂಗಲಿ, ಅನುರಾಧಾ ಭಟ್ ಹಾಗೂ ವೀರ ಸಮರ್ಥ ತಂಡದಿದ ಹಾಗೂ ರಾತ್ರಿ 10.30ಕ್ಕೆ ಹಿಂದಿ ಗೀತೆ ಗಾಯನ ಕುಮಾರ ಸಾನು ಮುಂಬಯಿ ಅವರಿಂದ ನಡೆಯಲಿದೆ.

ಜನವರಿ 9 ರಂದು ಸಮಾರೋಪ ಸಮಾರಂಭ ವಿವರ:

ಜನವರಿ 9 ರಂದು ಸಾಯಂಕಾಲ 7 ಗಂಟೆಗೆ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಆಗಮಿಸಲಿದ್ದಾರೆ.

ಕಾರ್ಯಕ್ರಮದ ಘನ ಉಪಸ್ಥಿತಿಯನ್ನು ಕೇಂದ್ರ ನೂತನ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಹ ಸಚಿವರಾದ ಭಗವಂತ ಖೂಬಾ, ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ ಬಿ.ಪಾಟೀಲ ಮುನೇನಕೊಪ್ಪ, ಪಶು ಸಂಗೋಪನೆ ಸಚಿವರಾದ ಪ್ರಭು ಬಿ.ಚವ್ಹಾಣ್ ಅವರುಗಳು ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೀದರ ಶಾಸಕರಾದ ರಹೀಮ್ ಖಾನ್ ಅವರು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ಬೆಂಗಳೂರು ರಾಜ್ಯ ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ.ಎಂ.ಜಿ.ಮೂಳೆ, ಹುಮನಾಬಾದ ಶಾಸಕರಾದ ರಾಜಶೇಖರ ಬಿ.ಪಾಟೀಲ, ಭಾಲ್ಕಿ ಶಾಸಕರಾದ ಈಶ್ವರ ಬಿ.ಖಂಡ್ರೆ, ಬೀದರ ದಕ್ಷಿಣ ಶಾಸಕರಾದ ಬಂಡೆಪ್ಪ ಖಾಶೆಂಪೂರ, ಬಸವಕಲ್ಯಾಣ ಶಾಸಕರಾದ ಶರಣು ಸಲಗರ ಹಾಗೂ ವಿಧಾನ ಪರಿಷತ್ ಸದಸ್ಯರುಗಳಾದ ರಘುನಾಥರಾವ ಮಲ್ಕಾಪೂರೆ, ಅರವಿಂದಕುಮಾರ ಅರಳಿ, ಡಾ.ಚಂದ್ರಶೇಖರ ಬಿ.ಪಾಟೀಲ, ಶಶೀಲ್ ಜಿ.ನಮೋಶಿ, ಭೀಮರಾವ ಬಿ.ಪಾಟೀಲ, ಕರ್ನಾಟಕ ರಾಜ್ಯ ಹಜ್ ಸಮಿತಿ ಅಧ್ಯಕ್ಷರಾದ ರವೂಫುದ್ಧಿನ್ ಕಛೇರಿವಾಲೆ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬು ವಾಲಿ ಅವರು ಆಗಮಿಸಲಿದ್ದಾರೆ.

See also  ಮುಂಬೈ: ಗಡಿ ವಿವಾದಕ್ಕೆ ನೆಹರೂ ಅವರನ್ನು ದೂಷಿಸಿದ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಜನವರಿ 9 ರಂದು ಸಾಯಂಕಾಲ 5.30ಕ್ಕೆ ಜಾನಪದ ಗಾಯನ ಸುನೀಲ ಕಡ್ಡೆ ಮತ್ತು ತಂಡ ಬೀದರ ವತಿಯಿಂದ, 5.40ಕ್ಕೆ ವಚನ ಗಾಯನ ಶಿವಕುಮಾರ ಪಂಚಾಳ ಮತ್ತು ತಂಡ ಬೀದರ ವತಿಯಿಂದ, 5.50ಕ್ಕೆ ಸುಗಮ ಸಂಗೀತ ಮಲ್ಲಿಕಾರ್ಜುನ ಸ್ವಾಮಿ ಮತ್ತು ತಂಡ ಬೀದರ ವತಿಯಿಂದ, 6ಕ್ಕೆ ಸಮೂಹ ನೃತ್ಯ ರೂಪ ರಾಣಿ ಸತ್ಯಮೂರ್ತಿ ಮತ್ತು ತಂಡ ಬೀದರ ವತಿಯಿಂದ, 6.10ಕ್ಕೆ ಹಿಂದೂಸ್ತಾನಿ ಶಾಸ್ತಿçÃಯ ಸಂಗೀತ ಜಗನ್ನಾಥ ನಾನಕೇರಿ ಮತ್ತು ತಂಡ ಬೀದರ ವತಿಯಿಂದ, 620ಕ್ಕೆ ಶಾಸ್ತಿçÃಯ ಸಂಗೀತ ಶಿವಾಜಿ ಸಗರ ಮತ್ತು ತಂಡ ಬೀದರ ವತಿಯಿಂದ, 6.30ಕ್ಕೆ ವಚನಗಾಯನ ಕವಿತಾ ಮಠಪತಿ ಮತ್ತು ತಂಡ ಬೀದರ ವತಿಯಿಂದ, 6.40ಕ್ಕೆ ನೃತ್ಯ ರೂಪಕ ಇರಾ ಡ್ಯಾನ್ಸ್ ಅಕಾಡೆಮಿ ಬೀದರ ವತಿಯಿಂದ, 6.50ಕ್ಕೆ ಐಕ್ಯತೆ ನಾಟಕ ವಿಜಯಕುಮಾರ ಸೋನಾರೆ ಮತ್ತು ತಂಡ ಬೀದರ ವತಿಯಿಂದ, 7ಕ್ಕೆ ಜಾನಪದ ಗಾಯನ ಡಿ.ಆರ್.ರಾಜಪ್ಪಾ ಮತ್ತು ತಂಡ2 ಮಾಲೂರ ವತಿಯಿಂದ ನಡೆಯಲಿವೆ.

ಸಂಸ್ಕೃತಿ ಮಂತ್ರಾಲಯ, ನವದೆಹಲಿ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ಭಾರತ ಸರ್ಕಾರ ತಂಜಾವೂರು ಪ್ರಾಯೋಜಿತ ರಾಷ್ಟ್ರ ಮಟ್ಟದ ಜಾನಪದ ಕಲಾ ತಂಡಗಳಿದ ಕಲಾ ಪ್ರದರ್ಶನ ನಡೆಯಲಿದೆ. ರಾತ್ರಿ 7.30ಕ್ಕೆ ಶಿವ ಸುಸ್ತಿ ಫಾಗ್ ಘೂಮರ್ ಡ್ಯಾನ್ಸ್ ಹರಿಯಾಣಾ-ಅಜಯ ಕಶಪ್ ಮಹಾವೀರ ಸಿಂಗ್ ಹರಿಯಾಣಾ, ರಾತ್ರಿ 7.45ಕ್ಕೆ ಬದಾಯಿ ಮತ್ತು ನೋರಥಾ ಫೋಕ್ ಡ್ಯಾನ್ಸ್ ದೀಪೇಶ ಪಾಂಡೆ ಮಧ್ಯಪ್ರದೇಶ ಅವರಿಂದ ನಡೆಯಲಿದೆ. ರಾತ್ರಿ 8ಕ್ಕೆ ಸಂಗೀತ ಸಂಜೆ ವಿಜಯಪ್ರಕಾಶ ಮತ್ತು ತಂಡ ಬೆಂಗಳೂರು ಹಾಗೂ ರಾತ್ರಿ 10ಕ್ಕೆ ಸಂಗೀತ ಸಂಜೆ ಸುಖವಿಂದರ್ ಸಿಂಗ್ ಮುಂಬೈ ಅವರು ನಡೆಸಿಕೊಡಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು