News Kannada
Sunday, January 29 2023

ಬೀದರ್

ಬೀದರ್ ಉತ್ಸವ: ಪಟಗಳಲ್ಲಿ ‘ ಅಮೃತ ಮಹೋತ್ಸವ ಸಂಭ್ರಮ ‘

Photo Credit : News Kannada

ಬೀದರ್: ಬೀದರ್ ಉತ್ಸವದ ಅಂಗವಾಗಿ ಇಲ್ಲಿಯ ಐತಿಹಾಸಿಕ ಕೋಟೆಯಲ್ಲಿ ಹಮ್ಮಿಕೊಂಡಿರುವ ಪತಂಗ ಉತ್ಸವದಲ್ಲಿ ಪಟಗಳಲ್ಲಿ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮ ಕಂಡು ಬಂದಿತು.

ಬಾನಂಗಳದಲ್ಲಿ ಏಕಕಾಲಕ್ಕೆ ಹಾರಾಡಿದ ರಾಷ್ಟ್ರ ಧ್ವಜದ ಮಾದರಿಯ 75 ಪತಂಗಗಳು ದೇಶಾಭಿಮಾನ ಮೂಡಿಸಿದವು.

250 ಪಟಗಳ ಸರಣಿಯ ರೈಲು ಪಟ, ಬಲೂನ್ ಪಟ, ಡ್ರ್ಯಾಗನ್, ಸ್ಪೈಡರ್ ಮ್ಯಾನ್, ಆಕ್ಟೊಪಸ್ ಆಕೃತಿ, ವೆಂಕಟೇಶ್ವರ, ಭಗತ್‍ಸಿಂಗ್ ಚಿತ್ರ ಹೊಂದಿದ ಪಟಗಳು ಎಲ್ಲರ ಗಮನ ಸೆಳೆದವು.ಎಲ್‍ಇಡಿ ಬಲ್ಬ ಸಹಿತ ಪಟಗಳು ಸಂಜೆ ವೇಳೆ ಆಗಸದಲ್ಲಿ ಬಣ್ಣ ಬಣ್ಣಗಳ ಚಿತ್ತಾರ ಮೂಡಿಸಿದವು. ನೋಡುಗರನ್ನು ಮಂತ್ರಮುಗ್ಧಗೊಳಿಸಿದವು.

ಹೈದರಾಬಾದ್‍ನ ಕೋಹಿನೂರ್ ಕೈಟ್ ಕ್ಲಬ್, ಇಂಡಿಯನ್ ಕೈಟ್ ಕ್ಲಬ್ ಹಾಗೂ ದೊಡ್ಡಬಳ್ಳಾಪುರ ಕೈಟ್ ಕ್ಲಬ್ ಸೇರಿ ಮೂರು ಕೈಟ್ ಕ್ಲಬ್‍ಗಳ ತಂಡಗಳು ಪತಂಗ ಉತ್ಸವದಲ್ಲಿ ಪಾಲ್ಗೊಂಡಿವೆ ಎಂದು ಪತಂಗ ಉತ್ಸವದ ಸಂಯೋಜಕ ರವಿ ಮೂಲಗೆ ತಿಳಿಸಿದರು.
ಪತಂಗ ಹಾರಿಸಲು 15 ಪರಿಣಿತರು ಬಂದಿದ್ದಾರೆ. 150 ಕ್ಕೂ ಹೆಚ್ಚು ಪ್ರಕಾರಗಳ ವೈವಿಧ್ಯಮಯ ಗಾಳಿಪಟಗಳನ್ನು ಹಾರಿಸುತ್ತಿದ್ದಾರೆ. ಪತಂಗ ಉತ್ಸವವನ್ನು ನೋಡುವುದೇ ಕಣ್ಣಿಗೆ ದೊಡ್ಡ ಹಬ್ಬವಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು, ಯುವಕರು ಹಾಗೂ ಹಿರಿಯರು ಪತಂಗ ಉತ್ಸವ ವೀಕ್ಷಣೆಗೆ ಅಪಾರ ಸಂಖ್ಯೆಯಲ್ಲಿ ಹರಿದು ಬರುತ್ತಿದ್ದಾರೆ. ನಯನ ಮನೋಹರ ಪತಂಗಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪತಂಗ ಉತ್ಸವ ಭಾನುವಾರವೂ ಇರಲಿದೆ ಎಂದು ತಿಳಿಸಿದರು.

See also  ಸರಕಾರಿ ಉದ್ಯೋಗದ್ಲಲಿ ಬಡ ಮಕ್ಕಳಿಗೆ ಅನ್ಯಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು