ಬೀದರ: ಬೀದರ ಉತ್ಸವದಿಂದ ಇಲ್ಲಿನ ಸ್ಥಳೀಯ ಕಲಾವಿದರ ಪರಿಚಯವಾಗುತ್ತದೆ, ಜಿಲ್ಲೆ ಹಾಗೂ ರಾಜ್ಯದ ಜನರಿಗೆ ಪರಿಚಯವಾಗುತ್ತಿರುವುದು ಸಂತಸ ತಂದಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ ಹೇಳಿದರು.
ಅವರು ಸೋಮವಾರ ಬೀದರ ಉತ್ಸವದ ಅಂಗವಾಗಿ ಪೂಜ್ಯ ಚನ್ನಬಸವ ಪಟ್ಟದೇವರು ರಂಗಮAದಿರ ಹಮ್ಮಿಕೊಂಡಿದ್ದ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೀದರ ಉತ್ಸವವು ಆಚರಿಸುತ್ತಿರುವುದರಿಂದ ಇಲ್ಲಿಯ ಪ್ರವಾಸೋದ್ಯಮಕ್ಕೆ ಸಹಕಾರಿಯಾಗಲಿದೆ ಮತ್ತು ಬೀದರ ಉತ್ಸವವು ಕಳೆದ ಎರಡು ದಿನಗಳಿಂದ ಚೆನ್ನಾಗಿ ಮೂಡಿಬರುತ್ತಿದೆ ಎಂದು ಹೇಳಿದರು.
ಸಾಹಿತಿ ಬಿ.ಜೆ. ಪಾರ್ವತಿ.ವಿ ಸೊನಾರೆ ಮಾತನಾಡಿ, ಬೀದರ ಜಿಲ್ಲೆಯೂ ಇಡೀ ಭಾರತದ ಭಾವೈಕ್ಯತೆಯನ್ನು ಬಿಂಬಿಸುವ ತಾಣವಾಗಿದೆ, ಇದಕ್ಕೆ ವಿವಿಧ ಧರ್ಮ, ಸಂಸ್ಕೃತಿಯ ಜನರು ಎಲ್ಲರೂ ಒಂದೇ ಎಂಬಂತೆ ಬದುಕುತ್ತಿರುವುದೇ ಸಾಕ್ಷಿ ಎಂದು ಹೇಳಿದರು.
ಈ ಜಿಲ್ಲೆಯ ಜನರು ನಮ್ಮ ಪೂರ್ವಜರು ಬಿಟ್ಟು ಹೋದ ಕಲೆ ಸಂಸ್ಕೃತಿಯನ್ನು ಇಂದಿಗೂ ಮುಂದುವರೆಸಿಕೊAಡು ಬಂದಿದ್ದಾರೆ. ಜಲಸಂಗಿ ಶಾಸನವು ನಮಗೆ ಸ್ತಿçà ಶಿಕ್ಷಣದ ಕುರುಹುಗಳನ್ನು ನೀಡುತ್ತದೆ ಹಾಗೂ ಇಲ್ಲಿನ ಪಾರಂಪರಿಕ ತಾಣಗಳು ಭಾವೈಕ್ಯತೆಯನ್ನು ಸಾರುತ್ತವೆ ಎಂದು ತಮ್ಮ ಆಶಯ ನುಡಿ ವ್ಯಕ್ತಪಡಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ. ಹೇಮಲತಾ ವಡ್ದೆ ಮಾತನಾಡಿ, ಬೀದರ ಜಿಲ್ಲೆಗೆ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಇದ್ದರು ಇಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲಾ ಆದರೆ ಅವರಿಗೆ ಹೆಚ್ಚಿನ ಅವಕಾಶ ದೊರೆಯಬೇಕು ಹಾಗೂ ಜಿಲ್ಲೆಯೂ ಅಭಿವೃದ್ಧಿಯಾಗಬೇಕಾದರೆ ಶೈಕ್ಷಣಿಕ ಪ್ರಗತಿ ಅವಶ್ಯಕವಾಗಿದ್ದು, ಎಲ್ಲರೂ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತನ್ನು ನೀಡಬೇಕು ಎಂದು ಹೇಳಿದರು.
ಸಾಮಾಜಿಕ ಹೋರಾಟಗಾರ ಲಕ್ಷ್ಮಣ ದಸ್ತಿ ಮಾತನಾಡಿ, ಇಂದಿನ ಬಹಳಷ್ಟು ವಿಧ್ಯಾರ್ಥಿಗಳಿಗೆ ಹೈದ್ರಾಬಾದ ಕರ್ನಾಟಕ ವಿಮೋಚನೆಯ ಅರ್ಥವೇ ಗೊತ್ತಿಲ್ಲ ವಿದ್ಯಾರ್ಥಿಗಳು ಈ ಮಣ್ಣಿನ ಇತಿಹಾಸ ಅರಿಯಬೇಕು ಹಾಗೂ ಮಣ್ಣಿನ ಸ್ವತಂತ್ರಕ್ಕಾಗಿ ಹೋರಾಡಿದ ಹೋರಾಟಗಾರರ ಬಗ್ಗೆ ತಿಳಿದುಕೊಳ್ಳಬೇಕು. ಭಾರತ ಸ್ವತಂತ್ರಗೊಂಡ ನಂತರವೂ ಸುಮಾರು ಒಂದು ವರ್ಷಗಳ ಕಾಲ ಈ ಭಾಗದ ಜನರಿಗೆ ಕರಾಳ ದಿನವಾಗಿತ್ತು ಅಂದು ಸರ್ದಾರ್ ವಲ್ಲಭಾಯ್ ಪಟೇಲರು ಅಂಬೇಡ್ಕ ಅವರ ಸಲಹೆಯಂತೆ ನಡೆಸಿದ ಆಪರೇಶನ್ ಪೋಲೊ ಕಾರ್ಯಾಚರಣೆ ಫಲವಾಗಿ ನಮಗೆ ಸ್ವತಂತ್ರ ದೊರೆತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಸಿದ್ರಾಮಪ್ಪ ಮಾಸಿಮಾಡೆ, ಗುರುನಾಥ ಅಕ್ಕಣ್ಣ, ಇತಿಹಾಸ ಚಿಂತಕರಾದ ಡಾ. ಶಿವಕುಮಾರ ಉಪ್ಪೆ, ಡಾ. ಗಾಂಧೀಜಿ ಮೊಳಕೇರ, ಪ.ಪೂ.ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಡಾ. ಮನ್ಮಥ ಡೊಳೆ, ಕಲ್ಯಾಣ ಕರ್ಣಾಟಕ ಕಲಾವಿದರ ಒಕ್ಕೂಟದ ಕಾರ್ಯದರ್ಶಿ ಪ್ರಕಾಶ ಅಂಗಡಿ, ಸಾಹಿತಿಗಳಾದ ಶಕೀಲ್ ಐ. ಎಸ್, ಈಶ್ವರಯ್ಯ ಕುಡಂಬುಲ್, ಇತಿಹಾಸ ಚಿಂತಕ ಡಾ. ವಿನಯ ಮಾಳಗೆ, ಸರ್ಕಾರಿ ಕೈಗಾರಿಕಾ ಕಾಲೇಜಿನ ಪ್ರಾಂಶುಪಾಲರಾದ ಶಿವಶಂಕರ ಟೋಕರೆ, ವಿಚಾರ ಸಂಕೀರ್ಣ ಆಯೊಜನೆ ಸಂಚಾಲಕರಾದ ಡಾ. ಬಸವರಾಜ ಬಲ್ಲೂರ, ಸಂಗೀತ ನೃತ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಸಂಚಾಲಕ ಸಿದ್ರಾಮ ಶಿಂಧೆ ಸೇರಿದಂತೆ ಇತರರು ಉಪಸ್ಥಿತರಿದ್ದರು.