News Kannada
Tuesday, January 31 2023

ಬೀದರ್

ಬೀದರ ಉತ್ಸವದಲ್ಲಿ ವಿವಿಧ ತಳಿಯ ಜಾನುವಾರುಗಳ ಪ್ರದರ್ಶನ

Photo Credit : News Kannada

ಬೀದರ: ಬೀದರ ಉತ್ಸವ-2023ರ ಅಂಗವಾಗಿ ಪಶು ಪ್ರದರ್ಶನವನ್ನು ಬೀದರ ಕೋಟೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಬೀದರ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ ವಿವಿಧ ತಳಿಯ ಜಾನುವಾರುಗಳಾದ ದೇವಣಿ ತಳಿ, ಖಿಲಾರಿ, ರೆಡ್ ಕೆದಾರ, ಎಚ್.ಎಫ್.ಝರಾ, ಗಿರ್ ತಳಿಯ ಎಮ್ಮೆ ಮತ್ತು ಕೋಣ ಪ್ರದರ್ಶನದಲ್ಲಿ ಆಕರ್ಷಣಿಯ ಕೇಂದ್ರವಾಗಿದ್ದವು.

ಮರ‍್ರಾ, ನಾಗಪುರಿ ಮತ್ತು ಪಂಡರಪುರಿ ಜಾನುವಾರುಗಳು ಭಾಗಿಯಾಗಿದ್ದು ಜೊತೆಗೆ ಕಂಗೋರಿ, ಬಿಟಲ್, ಮೊಲ, ಆಡುಗಳು, ಕೋಳಿ, ಕುದುರೆಗಳು ಈ ಪ್ರದರ್ಶನದಲ್ಲಿ ಭಾಗಿಯಾಗಿದ್ದವು.

ಜಾನುವಾರುಗಳ ಪ್ರದರ್ಶನ ಕುರಿತು ಬೀದರ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ನರಸಪ್ಪಾ ಅವರು ಮಾಹಿತಿ ನೀಡಿ ಪ್ರತಿಯೊಂದು ತಳಿಯ ಜಾನುವಾರುಗಳಿಗೆ ಪ್ರಥಮ ಬಹುಮಾನ 3000 ರೂ., ದ್ವಿತೀಯ ಬಹುಮಾನ 2000 ರೂ. ಹಾಗೂ ತೃತೀಯ ಬಹುಮಾನ 1000 ರೂ. ಮತ್ತು ಬೀದರ ಜಿಲ್ಲೆಯ ಎಲ್ಲಾ ಲ್ಲೂಕುಗಳಿಂದ ಭಾಗವಹಿಸಿದ ಜಾನುವಾರುಗಳಿಗೆ 2 ಕೆ.ಜಿ. ಪಶು ಆಹಾರ ನೀಡುವುದರ ಜೊತೆಗೆ ಅದರ ಮಾಲೀಕರಿಗೆ ಉತ್ಸವದಲ್ಲಿ ಭಾಗವಹಿಸಿದ ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ನೀಡಲಾಗುವುದು. ವಿವಿಧ ತಳಿಯ ಹಲವಾರು ಜಾನುವಾರುಗಳು ಈ ಪ್ರದರ್ಶನದಲ್ಲಿ ಭಾಗವಹಿಸಿದ್ದವು ಎಂದು ಹೇಳಿದರು.

See also  ಅಕ್ರಮ ಗಾಂಜಾ ಸಾಗಿಸುತ್ತಿದ ನಾಲ್ವರು ಆರೋಪಿಗಳು ಬಂಧನ: 456 ಕೆಜಿ ಗಾಂಜಾ ವಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು