News Kannada
Sunday, September 24 2023
ಬೀದರ್

ಬೀದರ್ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ ಎಂದ ಸಿಎಂ ಬೊಮ್ಮಾಯಿ

The concept of Anjanadri becoming a historical, religious tourist destination
Photo Credit : News Kannada

ಬೀದರ: ನಿಮ್ಮನೆಲ್ಲ ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೋಡಿ ಬಹಳ ಸಂತೋಷವಾಗಿದೆ. ಕಳೆದ ಒಂದು ವಾರ ಬೀದರ ಜಿಲ್ಲೆಯ ಸಂಸ್ಕೃತಿ, ಕಲೆ, ಸಾಹಿತ್ಯ, ಕೃಷಿ ಎಲ್ಲಾ ಪ್ರದರ್ಶನಗಳನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ್ದಿರಿ ನಿಮಗೆ ಅತ್ಯಂತ ಹೃದಯಪೂರ್ವಕ ದನ್ಯವಾದಗಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಸೋಮವಾರ ಬೀದರ ಉತ್ಸವ-2023ರ ಅಂಗವಾಗಿ ಬೀದರ ಕೋಟೆ ಆವರಣದಲ್ಲಿ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕರ್ನಾಟಕ ರಾಜ್ಯದ ಮುಕಟ ಪ್ರಾಯವಾಗಿರುವ ಬೀದರ ಜಿಲ್ಲೆಯು ಐತಿಹಾಸಿಕ ಪ್ರಸಿದ್ದವಾಗಿದ್ದು, ಇಲ್ಲಿಯ ಸಂಸ್ಕೃತಿ ನಾಡು ನುಡಿ ವಿಶಿಷ್ಟವಾಗಿದೆ. ಕರ್ನಾಟಕ ಗಡಿಭಾಗದಲ್ಲಿರುವ ಬೀದರ ಜಿಲ್ಲೆಯಲ್ಲಿ 12ನೇ ಶತಮಾನದಲ್ಲಿ ಇಡೀ ಜಗತ್ತಿಗೆ ಕ್ರಾಂತಿ ಮಾಡಿದ ಮೂಲ ಸ್ಥಳ ಹಾಗೂ ವಿಶ್ವದ ಪ್ರಥಮ ಸಂಸತ ಬಸವಕಲ್ಯಾಣ ಅನುಭವ ಮಂಟಪ ಬಸವೇಶ್ವರರ ವಿಚಾರಧಾರೆಗೆ ಬೀಜ ಅಂಕುರವಾಗಿರುವುದು. ಇಂತಹ ಪ್ರಸಿದ್ದವಾಗಿರುವ ಬೀದರ ಜಿಲ್ಲೆಯಲ್ಲಿ ಎಲ್ಲ ಭಾಷಿಕರು ಪ್ರೀತಿ ವಿಶ್ವಾಸದಿಂದ ಇರುವುದು ಭಾಷಾ ಸಾಮರಸ್ಯದ ಸಂಕೇತವಾಗಿದೆ.

ಈ ಎಲ್ಲಾ ಪರಂಪರೆಯನ್ನು ನಿರಂತವಾಗಿ ಕಾಪಾಡಿಕೊಂಡು ಬಂದತಹ ಹಿರಿಯ ಮಠಾಧೀಶರು, ಸಾಹಿತಿಗಳು, ಜನನಾಯಕರು ಕಾರಣಿಭೂತರಾಗಿದ್ದಾರೆ. ನಾಗರಿಕತೆಗೂ ಮತ್ತು ಸಂಸ್ಕೃತಿಗೂ ಅವಿನಾಭಾವ ಸಂಬಧವಿದ್ದು, ವಿಶೇಷವಾಗಿ ನಮ್ಮ ಮೂಲ ನಾಗರೀಕ ಸಂಸ್ಕೃತಿ ಉಳಿಸಿ ಬೆಳೆಸಬೇಕೆಂದರು.

ಬೀದರ ಉತ್ಸವ 6-7 ವರ್ಷಗಳ ನಂತರ ನಡೆಯುತ್ತಿರುವ ಪ್ರಯುಕ್ತ ತಾವೆಲ್ಲರೂ ಆತ್ಮವಿಶ್ವಾಸದಿಂದ ಬೀದರ ಉತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿರುತ್ತಿರಿ. ನಮ್ಮ ಇತಿಹಾಸ, ಪರಂಪರೆ ಉಳಿಸಿಕೊಂಡು ಹೋಗುವಂತಹ ಕೆಲಸ ಈ ಉತ್ಸವದಿಂದ ಮತ್ತೊಮ್ಮೆ ಪುನರ ಸ್ಥಾಪನೆಯಾಗಿದೆ. ನಾವೆಲ್ಲರೂ ಒಂದೇ ಅನ್ನುವಂತಹ ಭಾವನೆ ಈ ಉತ್ಸವ ಮೂಡಿಸಿದೆ. ಬೀದರ ಜಿಲ್ಲೆಯ ಕಲಾವಿದರಿಗೆ ಉತ್ಸವ ಬಹಳ ದೊಡ್ಡ ವೇದಿಕೆ ಕಲ್ಪಿಸಿಕೊಟ್ಟಿದೆಯಲ್ಲದೇ ಬೇರೆ ಬೇರೆ ರಾಜ್ಯಗಳಿಂದ ಖ್ಯಾತ ಕಲಾವಿದರು, ಸಿನಿಮಾ ರಂಗದ ಕಲಾವಿದರು ಭಾಗವಹಿಸುವುದು ಸಂತೋಷ ತಂದಿದೆ ಎಂದರು.

ಬೀದರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಭಾಲ್ಕಿ ತಾಲೂಕಿನ ಮೆಹಕರ ಏತ ನೀರಾವರಿಗೆ, ಔರಾದ ತಾಲೂಕಿನ 36 ಕೆರೆಗಳು 252 ಕೊಟಿ ಯೋಜನೆಗೂ ಮಂಜೂರಾತಿ ನೀಡಿದ್ದ್ದು ಸಧ್ಯದಲ್ಲೇ ಅಡಿಗಲ್ಲು ಹಾಕಲಾಗುವುದು. ಮುಲ್ಲಾಮಾರಿ ಮೇಲ್ದಂಡೆ ಮತ್ತು ಮುಲ್ಲಾಮಾರಿ ಕೆಳದಂಡೆ, ಕಾರಂಜಾ ಯೋಜನೆ ಹಿನ್ನೀರಿನ ಪ್ರದೇಶದ ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಯೋಜನೆಗೆ ಅನುಮೊದನೆ ನೀಡಲಾಗಿದೆ. ಜಿಲ್ಲೆಯ ಎರಡು ಸಹಕಾರ ಸಕ್ಕರೆ ಕಾರ್ಖಾನೆಗಳಿಗೆ ಸಹಾಯ ಮಾಡಲಾಗಿದೆ. ಬೀದರ ಜಿಲ್ಲೆಯಲ್ಲಿ ಕೈಗಾರಿಕೆಯಲ್ಲಿ ಇನ್ನು ದೊಡ್ಡ ಪ್ರಮಾಣದಲ್ಲಿ ಬರಬೇಕು, ಪ್ರಾರಂಭದಲ್ಲಿ ಬಂದತಹ ಕೈಗಾರಿಕೆ ಇವಾಗ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ, ಬೀದರ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಕೈಗಾರಿಕೆ ಉದ್ದಿಮೆದಾರರ ಶೃಂಗ ಸಭೆಯನ್ನು ನಡೆಸಲಾಗುವುದು ಎಂದು ಹೇಳಿದ ಮುಖ್ಯಮಂತ್ರಿಗಳು ಸಮಗ್ರ ಬೀದರ ಜಿಲ್ಲೆಯ ಅಭಿವದ್ಧಿಯ ಭರವಸೆ ನೀಡಿದರು.

See also  ಬೀದರ್: ಜಾನುವಾರುಗಳ ಸಂರಕ್ಷಣೆ ಮತ್ತು ಆರೋಗ್ಯ ಸೇವೆಗೆ 82 ಆಂಬುಲೆನ್ಸ್ ಲೋಕಾರ್ಪಣೆ

ಇದೇ ಸಂದರ್ಭದಲ್ಲಿ ಬೀದರ ಉತ್ಸವ-2023ರ ಅಂಗವಾಗಿ ಹೊರ ತರಲಾದ ಸ್ಮರಣಾ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಕೇಂದ್ರ ನೂತನ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಚಿವರಾದ ಭಗವಂತ ಖೂಬಾ, ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಬಿ.ಪಾಟೀಲ ಮುನೇನಕೊಪ್ಪ, ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್, ಬೀದರ ಶಾಸಕ ರಹೀಮ್ ಖಾನ್, ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ರಾಜ್ಯ ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಎಂ.ಜಿ.ಮೂಳೆ, ಹುಮನಾಬಾದ ಶಾಸಕರಾದ ರಾಜಶೇಖರ ಬಿ.ಪಾಟೀಲ, ಭಾಲ್ಕಿ ಶಾಸಕರಾದ ಈಶ್ವರ ಬಿ.ಖಂಡ್ರೆ, ಬೀದರ ದಕ್ಷಿಣ ಶಾಸಕರಾದ ಬಂಡೆಪ್ಪ ಖಾಶೆಂಪೂರ, ಬಸವಕಲ್ಯಾಣ ಶಾಸಕ ಶರಣು ಸಲಗರ, ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪೂರೆ, ಡಾ.ಚಂದ್ರಶೇಖರ ಬಿ.ಪಾಟೀಲ, ಶಶೀಲ ಜಿ.ನಮೋಶಿ, ಭೀಮರಾವ ಬಿ.ಪಾಟೀಲ, ಕರ್ನಾಟಕ ರಾಜ್ಯ ಹಜ್ ಸಮಿತಿ ಅಧ್ಯಕ್ಷ ರವೂಫುದ್ಧಿನ್ ಕಛೇರಿವಾಲೆ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ವಿಧಾನ ಪರಿಷತ್ ಸದಸ್ಯ ಬಾಬುರಾವ ಚಿಂಚನಸೂರ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾಂ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕ ಕಿಶೋರ್ ಬಾಬು ಸೇರಿದಂತೆ ಇತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು