ಬೀದರ್: ಬೀದರ್ ಉತ್ಸವ ನಿಮಿತ್ತ ಜಿಲ್ಲಾ ಆಡಳಿತದ ಸಹಯೋಗದೊಂದಿಗೆ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ವ್ಯವಸ್ಥೆ ಮಾಡಿದ್ದ ಹೆಲಿಕಾಪ್ಟರ್ ಸಂಚಾರ ಉತ್ಸವದಲ್ಲಿ ರೈತ ಮುಖಂಡರೂ ಪಾಲ್ಗೊಂಡಿದ್ದರು.
ಫೌಂಡೇಷನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅವರು ರೈತ ನಾಯಕರ ಹೆಲಿಕಾಪ್ಟರ್ ಸಂಚಾರದ ವ್ಯವಸ್ಥೆ ಮಾಡಿದ್ದರು.
ರೈತ ನಾಯಕರಾದ ಮಲ್ಲಿಕಾರ್ಜುನ ಸ್ವಾಮಿ, ಸಿದ್ರಾಮಪ್ಪ ಅಣದೂರೆ, ಶೋಭಾವತಿ, ಸಂಗೀತಾ ಶಂಕರ ಪಾಟೀಲ ಮೊದಲಾದವರು ಹೆಲಿಕಾಪ್ಟರ್ ನಲ್ಲಿ ಐತಿಹಾಸಿಕ ನಗರದ ಮೇಲೆ ಸುತ್ತು ಹಾಕಿ, ಆನಂದಿಸಿದರು.
ಹೆಲಿಕಾಪ್ಟರ್ ಸಂಚಾರ ಉತ್ಸವದ ವ್ಯವಸ್ಥೆ ಮಾಡಿರುವ ಬಿಜೆಪಿ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಅವರ ಕಾರ್ಯ ಮಾದರಿಯಾಗಿದೆ. ರೈತರ ಬಗ್ಗೆ ಅವರಲ್ಲಿ ವಿಶೇಷ ಕಾಳಜಿ ಇದೆ ಎಂದು ಮಲ್ಲಿಕಾರ್ಜುನ ಸ್ವಾಮಿ ಶ್ಲಾಘಿಸಿದರು.